ಕನ್ನಡಪ್ರಭ ವಾರ್ತೆ ಮಡಿಕೇರಿ
ಅ.4 ರಂದು ಸಂಜೆ 6 ಗಂಟೆಗೆ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.
ಮಕ್ಕಳ ದಸರಾ:ಅ. 5 ರಂದು ಬೆಳಗ್ಗೆ 9.3ರಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ 11 ನೇ ವರ್ಷದ ಮಕ್ಕಳ ದಸರಾ ಅಂಗವಾಗಿ ಮಕ್ಕಳ ಸಂತೆ, ಮಕ್ಕಳ ಅಂಗಡಿ, ಮಕ್ಕಳ ಮಂಟಪ, ಛದ್ಮವೇಷ ಕ್ಲೇಮಾಡೆಲಿಂಗ್ ಸ್ಪರ್ಧೆಗಳು ಆಯೋಜಿತವಾಗಿದೆ, ಅಂದು ಸಂಜೆ 6 ಗಂಟೆಯಿಂದ ಮಕ್ಕಳಿಂದಲೇ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.
ಅ.6 ರಂದು ಬೆಳಗ್ಗೆ 10 ಗಂಟೆಗೆ ಮೊದಲ ವರ್ಷದ ಕಾಫಿ ದಸರಾ ಚಾಲನೆಗೊಳ್ಳಲಿದೆ. ಕಾಫಿ ಮಂಡಳಿ, ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕಾ ಇಲಾಖೆ, ಚೆಟ್ಟಳ್ಳಿ ತೋಟಗಾರಿಕಾ ಸಂಶೋಧನಾ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾಫಿ ದಸರಾ ಆಯೋಜಿತವಾಗಿದೆ.
ಅ.7 ರಂದು ಬೆಳಗ್ಗೆ 10 ಗಂಟೆಯಿಂದ ಕಾಫಿ ದಸರಾ ಅಂಗವಾಗಿ ವಿವಿಧ ಮಳಿಗೆಗಳು ಸಂಜೆ 5 ಗಂಟೆಯವರೆಗೆ ತೆರೆದಿರುತ್ತವೆ, ಬೆಳಗ್ಗೆ 10 ಗಂಟೆಯಿಂದ ಕಾಫಿ ಕೃಷಿ ಸಂಬಂಧಿತ ವಿಚಾರಸಂಕಿರಣಗಳು ಆಯೋಜಿಸಲ್ಪಟ್ಟಿದೆ. ಕಾಫಿ ದಸರಾವನ್ನು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾರ್ಗದರ್ಶನದಲ್ಲಿ ಆಯೋಜಿಸಲಾಗುತ್ತಿದೆ ಎಂದು ಅನಿಲ್ ಮಾಹಿತಿ ನೀಡಿದರು. ಅಂದು ಸಂಜೆ 6 ಗಂಟೆಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಅ.8 ರಂದು ಮಂಗಳವಾರ 7 ನೇ ವರ್ಷದ ಮಹಿಳಾ ದಸರಾ ನಡೆಯಲಿದ್ದು, ವೈವಿಧ್ಯಮಯ ಮನರಂಜನಾ ಸ್ಪರ್ಧೆಗಳು ಮಹಿಳೆಯರಿಗಾಗಿ ಆಯೋಜಿತವಾಗಿವೆ. ಮಡಿಕೇರಿ ನಗರಸಭಾ ಸದಸ್ಯೆಯರು, ಕೊಡಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಹಿಳಾ ದಸರಾ ಆಯೋಜಿಸಲ್ಪಟ್ಟಿದೆ, ಸಂಜೆ 6 ಗಂಟೆಗೆ ಮಹಿಳೆಯರಿಂದಲೇ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.
ಸಂಗೀತ ರಸಮಂಜರಿ:
ಅ.12 ರಂದು ವಿಜಯದಶಮಿ ಹಿನ್ನೆಲೆಯಲ್ಲಿ 7 ಗಂಟೆಯಿಂದ 10 ಗಂಟೆಯವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ, ರಾತ್ರಿ 10 ಗಂಟೆಯಿಂದ ಮರುದಿನ ಬೆಳಗ್ಗಿನ ಜಾವದ ವರೆಗೆ ರಾಜ್ಯದ ಹೆಸರಾಂತ ಸಂಗೀತ ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ.
ದಸರಾ ಕವಿಗೋಷ್ಠಿ: ಅ.9 ರಂದು 60 ಕವಿಗಳು ಕವನ ವಾಚಿಸಲಿರುವ ದಸರಾ ಬಹುಭಾಷಾ ಕವಿಗೋಷ್ಠಿ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದು ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ಮಾಹಿತಿ ನೀಡಿದರು,
ವಾಚಿಸಲ್ಪಡುವ ಕವನಗಳನ್ನು ಪುಸ್ತಕರೂಪದಲ್ಲಿ ಸಂಕಲವನಾಗಿ ಪ್ರಕಟಿಸಲಾಗುತ್ತದೆ, 200 ಅಧಿಕ ಕವನಗಳು ಆಯ್ಕೆ ಪ್ರಕ್ರಿಯೆಗೆ ಬಂದಿದ್ದವು, ಈ ಪೈಕಿ 60 ಕವಿತೆಗಳನ್ನು ಆಯ್ಕೆ ಮಾಡಲಾಗಿದೆ ಎಂದರು.ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಬಿ.ವೈ, ಖಜಾಂಜಿ ಅರುಣ್ ಶೆಟ್ಟಿ ಸೇರಿದಂತೆ ದಸರಾ ಸಮಿತಿ ಪ್ರಮುಖರು ಸಭೆಯಲ್ಲಿ ಹಾಜರಿದ್ದರು.
......................ಅ.5ರಂದು ದಸರಾ ಕ್ರೀಡಾಕೂಟದಸರಾ ಕ್ರೀಡಾಕೂಟ ಪ್ರಯುಕ್ತ ಅ.5 ರಂದು ಬೆಳಗ್ಗೆ 7 ಗಂಟೆಗೆ ರಸ್ತೆ ಓಟ, ಜಿಲ್ಲಾ ಕ್ರೀಡಾಂಗಣದಲ್ಲಿ ಫುಟ್ಬಾಲ್ ಮತ್ತು ಬಾಸ್ಕೆಟ್ ಬಾಲ್ ಕ್ರೀಡೆಗಳು ಆಯೋಜಿತವಾಗಿವೆ. ಅ.6 ರಂದು ಬೆಳಗ್ಗೆ 7 ಗಂಟೆಗೆ ನಗರದ ಬನ್ನಿಮಂಟಪದಿಂದ ಕ್ರೀಡಾಜ್ಯೋತಿ ತಂದು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ತರಲಾಗುತ್ತದೆ, ಅಂದು ಇಡೀ ದಿನ ವಾಲಿಬಾಲ್, ಮಕ್ಕಳ ಕ್ರೀಡಾಕೂಟ ಆಯೋಜಿತವಾಗಿವೆ. ಅ.9 ರಂದು ಹೊಟೇಲ್ ರಾಜದರ್ಶನ್ ನಲ್ಲಿ ಚೆಸ್ ಮತ್ತು ಕೇರಂಬೋರ್ಡ್ ಸ್ಪರ್ಧೆಗಳು ಆಯೋಜಿತವಾಗಿವೆ. ಅ.10 ರಂದು ನಗರದ ಗಾಂಧಿ ಮೈದಾನದಲ್ಲಿ ಕಬಡ್ಡಿ ಸ್ಪರ್ಧೆ ಆಯೋಜಿತವಾಗಿದೆ ಎಂದು ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೇರ ಮಾಹಿತಿ ನೀಡಿದ್ದಾರೆ.