ಕೊಡಗಿನ ಮೂಲನಿವಾಸಿಗಳು ಎಚ್ಚೆತ್ತುಕೊಳ್ಳಿ: ಕೆ.ಯು.ಗಣಪತಿ

KannadaprabhaNewsNetwork |  
Published : Nov 08, 2026, 02:45 AM IST
ಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಶಿವಪ್ಪ, ಮಸಗೋಡು ಸುರೇಶ್ ಹಾಗೂ ವಿಜೀಶ್ ಇದ್ದರು. | Kannada Prabha

ಸಾರಾಂಶ

ಕೊಡಗಿನ ಅಸ್ತಿತ್ವ ಉಳಿಯಬೇಕಾದರೆ ಮೂಲನಿವಾಸಿಗಳು ಎಚ್ಚೆತ್ತುಕೊಳ್ಳಬೇಕಾಗಿದ್ದು, ನಮ್ಮ ಜಮೀನು, ನಮ್ಮ ಆಸ್ತಿಯನ್ನು ಯಾವುದೇ ಕಾರಣಕ್ಕೂ ಹೊರಗಿನವರಿಗೆ, ವಲಸೆ ಬಂದವರಿಗೆ ಮಾರಾಟ ಮಾಡದಂತೆ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ರೈತ ಸಂಘದ ಗೌರವಾಧ್ಯಕ್ಷ ಕೆ.ಯು.ಗಣಪತಿ ಮನವಿ ಮಾಡಿದರು.

ಮಡಿಕೇರಿ: ಕೊಡಗಿನ ಅಸ್ತಿತ್ವ ಉಳಿಯಬೇಕಾದರೆ ಮೂಲನಿವಾಸಿಗಳು ಎಚ್ಚೆತ್ತುಕೊಳ್ಳಬೇಕಾಗಿದ್ದು, ನಮ್ಮ ಜಮೀನು, ನಮ್ಮ ಆಸ್ತಿಯನ್ನು ಯಾವುದೇ ಕಾರಣಕ್ಕೂ ಹೊರಗಿನವರಿಗೆ, ವಲಸೆ ಬಂದವರಿಗೆ ಮಾರಾಟ ಮಾಡದಂತೆ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ರೈತ ಸಂಘದ ಗೌರವಾಧ್ಯಕ್ಷ ಕೆ.ಯು.ಗಣಪತಿ ಮನವಿ ಮಾಡಿದರು.

1956ರಿಂದ ಇಲ್ಲಿಯವರೆಗೆ ಬೇರೆ ಕಡೆಗಳಿಂದ ಬಂದ ಜನರು ನಮ್ಮ ಜಮೀನನ್ನು ಖರೀದಿಸಿ, ಅವರಿಗೆ ಇಚ್ಚೆ ಬಂದಂತೆ ಕೊಡಗಿನ ಸೌಂದರ್ಯವನ್ನು ಹಾಳು ಮಾಡಿದ್ದಾರೆ. ಗದ್ದೆ ಪ್ರದೇಶಗಳಲ್ಲಿ ಅರ್ಧ ಭಾಗದಷ್ಟು ಜಮೀನು ಕಟ್ಟಡಗಳಾಗಿ ಮಾರ್ಪಾಡಾಗಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಬರಗಾಲ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಜಿಲ್ಲೆಯ ಜನತೆ ಈಗಲೇ ಎಚ್ಚೆತ್ತುಕೊಂಡು ಹೊರ ರಾಜ್ಯದ ಜನರಿಗೆ ತಮ್ಮ ಆಸ್ತಿಯನ್ನು ಮಾರಾಟ ಮಾಡದೇ ಜಿಲ್ಲೆಯ ಜನತೆಗೆ ಮಾರಾಟ ಮಾಡುವಂತಾಗಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಈ ಹಿಂದೆ ಎಲ್ಲಾ ಜಮೀನುಗಳಲ್ಲಿ ಭತ್ತದ ಬೆಳೆ ಬೆಳೆಯಲಾಗುತ್ತಿತ್ತು. ಪರಿಣಾಮ ನೀರು ನಿಂತು ವರ್ಷದ 365 ದಿನವೂ ಕುಡಿಯುವ ನೀರಿಗೆ ಅಭಾವವಿರಲಿಲ್ಲ. ಆದರೆ, ಇಂದು ಭತ್ತ ಬೆಳೆಯುವವರ ಸಂಖ್ಯೆ ಕ್ಷೀಣಿಸಿದೆ. ಪರಿಣಾಮ ನವೆಂಬರ್‌ನಲ್ಲೇ ನೀರಿನ ಅಭಾವ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೊಡಗಿನ ಕಾಫಿಯಿಂದ ಸರ್ಕಾರದ ಬೊಕ್ಕಸಕ್ಕೆ ಎಷ್ಟೋ ಹಣ ಸಂದಾಯವಾಗುತ್ತದೆ. ಆದರೆ, ಕಾಫಿ ತೋಟಕ್ಕೆ ನೀರು ಹಾಯಿಸಲು 10 ಹೆಚ್.ಪಿ. ಪಂಪ್ ಸೆಟ್‌ನ ಶುಲ್ಕವನ್ನು ಹಿಂದಿನ ಸರ್ಕಾರವು ವಿಧಾನದ ಮೂಲಕ ಮಾರ್ಪಾಡು ಮಾಡಿತ್ತು. ಆದರೆ, ಇಂದು ಉಚಿತ ವಿದ್ಯುತ್ ಇಲ್ಲ. ಈ ಹಿನ್ನೆಲೆ ಶುಲ್ಕವನ್ನು ಕಡಿಮೆ ಮಾಡಿ ಕಾಫಿ ಬೆಳೆಗಾರರ ಭವಿಷ್ಯವನ್ನು ರೂಪಿಸಲು ಸಹಕರಿಸಬೇಕು. ಚುನಾಯಿತ ಪ್ರತಿನಿಧಿಗಳು ನಮ್ಮ ಊರನ್ನು ಕಾಪಾಡಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.

ಸಂಘದ ಅಧ್ಯಕ್ಷ ಕೇಚಂಡ ಕುಶಾಲಪ್ಪ, ಕಾರ್ಯದರ್ಶಿ ಮನೆಯಪಂಡ ಜಿ.ಪೊನ್ನಪ್ಪ, ಖಜಾಂಚಿ ಪಟ್ಟಡ ಬಿ.ಅರುಣ್ ಚಂಗಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ