ಮಡಿಕೇರಿ ಜ್ಞಾನಗಂಗಾ ಶಾಲೆ ಇಂಟರ‍್ಯಾಕ್ಟ್ ಪದಗ್ರಹಣ

KannadaprabhaNewsNetwork |  
Published : Aug 13, 2026, 02:45 AM IST
ಚಿತ್ರ : 11ಎಂಡಿಕೆ7 : ಜ್ಞಾನಗಂಗಾ ಶಾಲೆಯ ಇಂರ‍್ಯಾಕ್ಟ್ ಪದಗ್ರಹಣ ಜರುಗಿತು.  | Kannada Prabha

ಸಾರಾಂಶ

ಜ್ಞಾನಗಂಗಾ ವಸತಿ ಶಾಲೆಯ ಇಂಟರ‍್ಯಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು.

ಮಡಿಕೇರಿ: ಜ್ಞಾನಗಂಗಾ ವಸತಿ ಶಾಲೆಯ ಇಂಟರ‍್ಯಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು.

ಅಧ್ಯಕ್ಷರಾಗಿ ಕಾನಿಷ್ಕ ಎ.ಸಿ., ಉಪಾಧ್ಯಕ್ಷರಾಗಿ ಮನನ್ ಎಂ., ಕಾರ್ಯದರ್ಶಿಯಾಗಿ ವಿಶ್ರುತ, ಸಹ ಕಾರ್ಯದರ್ಶಿಯಾಗಿ ಸುಚೇತ್, ಖಜಾಂಚಿಯಾಗಿ ಶಿಶಿರ್ ಭಟ್ ಹಾಗೂ ನಿರ್ದೇಶಕರು ಅಧಿಕಾರ ವಹಿಸಿಕೊಂಡರು. ಅಧಿಕಾರ ಬೋಧನೆ ಮಾಡಿ ಮಾತನಾಡಿದ ಮಿಸ್ಟಿ ಹಿಲ್ಸ್‌ ಮಾಜಿ ಅಧ್ಯಕ್ಷ ಜಗದೀಶ್ ಪ್ರಶಾಂತ್, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಬೆಳವಣಿಗೆ ಮಾಡುವುದೇ ರೋಟರಿ ಸಂಸ್ಥೆಯ ಉದ್ದೇಶ ಎಂದು ಹೇಳಿದರು.

ಇಂಟರ‍್ಯಾಕ್ಟ್ ಚೇರ್ಮನ್ ಬಿ.ಜಿ. ಅನಂತಶಯನ ಮಾತನಾಡಿ, ಶಾಲೆಯ ಜೊತೆಗಾರನೊಬ್ಬ ದುಃಖದಿಂದ ಕುಳಿತಿರುವಾಗ ಅವನ ಬೆನ್ನುತಟ್ಟಿ ಮಾತನಾಡಿಸುವುದು ಕೂಡ ಒಂದು ಸೇವೆಯೇ ಎಂದು ಹೇಳಿದರು. ಶಾಲಾ ಅಧ್ಯಕ್ಷ ಸುಧೀರ್ ಮಾತನಾಡಿ, ಸೇವಾ ಮನೋಭಾವ ಎಂಬುದು ಮಕ್ಕಳಲ್ಲಿ ಸಣ್ಣ ವಯಸ್ಸಿನಿಂದಲೇ ಬಂದರೆ ಮುಂದೆ ಅವರು ಉತ್ತಮ ನಾಯಕರಾಗಿ ಬೆಳಗುತ್ತಾರೆ ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲ ಸತ್ಯ ಸುಲೋಚನ ಮಾತನಾಡಿ, ಅಂತಾರಾಷ್ಟ್ರೀಯ ಸಂಸ್ಥೆ ರೋಟರಿಯ ಉದ್ದೇಶ ಸ್ವಹಿತ ಮೀರಿದ ಸೇವೆ ಎಂದರು. ಸೇವಾ ಮನೋಭಾವ ಎಂಬುದು ವಿದ್ಯಾರ್ಥಿ ದೆಸೆಯಿಂದ ಕೊನೆ ತನಕ ಇರಬೇಕು ಎಂದು ಆಶಿಸಿದರು. ಮಿಸ್ಟಿ ಹಿಲ್ಸ್ ಅಧ್ಯಕ್ಷ ರಾಜೇಶ್ ಇಂರ‍್ಯಾಕ್ಟ್ ಸದಸ್ಯರ ಎಲ್ಲ ಚಟುವಟಿಕೆಗಳಿಗೂ ಸಹಕಾರ ನೀಡುವ ಭರವಸೆ ನೀಡಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಡಾ. ಚೇತನ್ ಹಾಗೂ ಸಂಚಾಲಕಿ ವಿನಿತ ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಪುನರ್ವ ಪ್ರಾರ್ಥಿಸಿ, ದುವಿತ ಸ್ವಾಗತಿಸಿ, ಸಿರೇನಾ ದೇಶಮ್ಮ ವಂದಿಸಿದರು. ತಾನ್ಯಾ ಜೋಸೆಫ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ: ಸ್ವರ್ಣಾನದಿಗೆ ಬಾಗಿನ, ಸ್ನಾನಘಟ್ಟ ಲೋಕಾರ್ಪಣೆ
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕೈಬಿಟ್ಟ ಹೆಸರು ಪರಿಶೀಲಿಸಿ: ಹರೀಶ್ ಕುಮಾರ್ ಕರೆ