ಮಡಿಕೇರಿ ಸಾಹಿತ್ಯ ಸಮ್ಮೇಳನ: 5 ನಿರ್ಣಯ ಅಂಗೀಕಾರ

KannadaprabhaNewsNetwork |  
Published : May 22, 2026, 03:00 AM IST
ಅಂಗೀಕಾರ | Kannada Prabha

ಸಾರಾಂಶ

ಕಡಂಗದಲ್ಲಿ ಬುಧವಾರ ಜರುಗಿದ ಮಡಿಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ 5 ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕಡಂಗದಲ್ಲಿ ಬುಧವಾರ ಜರುಗಿದ ಮಡಿಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ 5 ನಿರ್ಣಯಗಳನ್ನು ಅಂಗೀಕರಿಸಲಾಯಿತು.ಬೇಡಿಕೆಗಳು:1. ಖ್ಯಾತ ಸಾಹಿತಿ ಜನಪದ ತಜ್ಞ ದಿ. ನಡಿಕೆರಿಯಂಡ ಚಿಣ್ಣಪ್ಪ ಅವರ ಹೆಸರಿನಲ್ಲಿ ಜನಪದ ವಸ್ತು ಸಂಗ್ರಹಾಲಯ ಸ್ಥಾಪನೆ ಆಗಬೇಕು.2. ಅಳಿವಿನ ಅಂಚಿನಲ್ಲಿರುವ ಕೊಡಗಿನ ಎರವ ಜನಾಂಗಕ್ಕೆ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸುವುದು ಆ ಮೂಲಕ ಕಲ್ಯಾಣ ಕಾರ್ಯಕ್ರಮವನ್ನು ಮುನ್ನಡೆಸಬೇಕು.3. ಕೊಡಗು ಜಿಲ್ಲೆಯ ಸರ್ಕಾರಿ ಶಾಲೆಗಳು ಶತಮಾನೋತ್ಸವ ಪೂರೈಸಿದ್ದು, ಅಂತಹ ಶತಮಾನೋತ್ಸವವನ್ನು ಆಚರಿಸಿದ ಶಾಲೆಗಳನ್ನು ಸಾಹಿತ್ಯ ಸಂಭ್ರಮದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸಲು ಸರ್ಕಾರ ಮತ್ತು ಸಾರ್ವಜನಿಕರು ಒಂದಾಗಬೇಕು.4. ಕೊಡಗಿನಲ್ಲಿ ಶರವೇಗದಲ್ಲಿ ಬೆಳೆಯುತ್ತಿರುವ ಪ್ರವಾಸೋದ್ಯಮ ಜಿಲ್ಲೆಯ ಪರಿಸರ ಮತ್ತು ಪ್ರಕೃತಿಯ ಮೇಲೆ ಹಾನಿ ಉಂಟು ಮಾಡುತ್ತಿದ್ದು, ಜಿಲ್ಲೆಯ ಧಾರ್ಮಿಕ ಕೇಂದ್ರ ನೆಲೆಗಳು ಮತ್ತು ದೇವರ ಕಾಡುಗಳ ಮೇಲೆ ನೈರ್ಮಲ್ಯಕ್ಕೆ ತೊಡಕು ಉಂಟಾಗುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ನೀಡಬೇಕು.5. ನರಿಯಂದಡ ಗ್ರಾಮದ ಚೇಲವಾರದಲ್ಲಿ ಪ್ರವಾಸಿಗಳನ್ನು ಆಕರ್ಷಿಸುವ ಜಲಪಾತವಿದ್ದು, ಅದರ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಸೂಕ್ತ ಯೋಜನೆ ರೂಪಿಸಿ ಕಾರ್ಯಗಳು ಕಾರ್ಯಕರ್ತಗೊಳಿಸಬೇಕು. ಈ ನಿರ್ಣಯವನ್ನು ಬಾಳೆಯಡ ದಿವ್ಯ ಮಂದಪ್ಪ ವಾಚಿಸಿ, ಸಭಿಕರ ಒಪ್ಪಿಗೆಯ ಚಪ್ಪಾಳೆಯೊಂದಿಗೆ ಅನುಮೋದನೆ ಪಡೆದುಕೊಂಡು ಅಂಗೀಕರಿಸಲಾಯಿತು........

ರಂಗು ತುಂಬಿದ ಸಾಂಸ್ಕೃತಿಕ ಕಾರ್ಯಕ್ರಮ ಅಪರಾಹ್ನ ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ನರಿಯಂದಡ ಗ್ರಾಮದ ಐತಿಹ್ಯಗಳು ಎಂಬ ವಿಷಯ ಕುರಿತು ಸಿ.ಎ. ಮೊಹಮ್ಮದ್ ನಿಝಾರ್ ಸಖಾಫಿ, ಮಡಿಕೇರಿ ತಾಲೂಕಿನಲ್ಲಿ ಕನ್ನಡ, ಕೊಡವ ಮತ್ತು ಅರೆ ಭಾಷೆ ಸಾಹಿತ್ಯದಲ್ಲಿ ಕೃಷಿ ಮಾಡಿದ ಸಾಹಿತಿಗಳ ಕುರಿತು ನಿವೃತ್ತ ಪ್ರಾಂಶುಪಾಲ ಕೆ.ಜೆ. ದಿವಾಕರ್, ಕೃಷಿ ಕ್ಷೇತ್ರದಲ್ಲಿ ರೈತಾಪಿ ಜನರಿಗಿರುವ ಸಮಸ್ಯೆಗಳು ಮತ್ತು ಪರಿಹಾರದ ಮಾರ್ಗೋಪಾಯಗಳು ಎಂಬ ವಿಷಯ ಕುರಿತು ಸುಳ್ಯದ ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ತಳೂರು ಸ್ವರ್ಣ ಕಿಶೋರ್ ವಿಷಯ ಮಂಡನೆ ಮಾಡಿದರು.

ಕವಿಗೋಷ್ಠಿ ಯಲ್ಲಿ 15 ಕವಿಗಳು ಕವನ ವಾಚಿಸಿದರು.ಸಾಧಕರಿಗೆ ಸನ್ಮಾನ:

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಬಿಟ್ಟಿರ ಚೋಂದಮ್ಮ, ಶಿಕ್ಷಣ ಕ್ಷೇತ್ರದಲ್ಲಿ ಚೇನಂಡ ಪಾರ್ವತಿ ತಿಮ್ಮಯ್ಯ, ಪೊಕ್ಕುಳಂಡ್ರ ಚಂದ್ರಾವತಿ ಸಿದ್ಧಾರ್ಥ, ಸಹಕಾರ ಕ್ಷೇತ್ರದಲ್ಲಿ ಪಾಂಡಂಡ ಕಿಟ್ಟು ಅಯ್ಯಣ್ಣ, ಸಮಾಜ ಸೇವೆಯಲ್ಲಿ ಎಚ್.ಎಲ್. ದಿವಾಕರ, ಜನಪದ ಕ್ಷೇತ್ರದಲ್ಲಿ ನಂಬಿಯಪಂಡ ಕರುಂಬಯ್ಯ, ಕೃಷಿ ಕ್ಷೇತ್ರದಲ್ಲಿ ದೇಯಿರ ಸುಭಾಷ್ ಭೀಮಯ್ಯ, ಸೇನೆಯಲ್ಲಿ ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ, ರಕ್ಷಣಾ ಕ್ಷೇತ್ರದಲ್ಲಿ ಎಂ.ಕೆ. ಸಲಾಂ, ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತ ದುಗ್ಗಳ ಸದಾನಂದ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಎಚ್.ಎಸ್. ಉರಾಳ, ನಾಟಿ ವೈದ್ಯ ನಂದ ಕುಮಾರ್ ಪಡಿಞಾರಮಂಡ, ಜನಪದ ಪರಿಕರಗಳ ಪೋಷಣೆ ಕ್ಷೇತ್ರದಲ್ಲಿ ಪೊನ್ನಚ್ಚನ ಮಧುಸೂದನ್, ಹಾಕಿಪಟು ಪಾಂಡಂಡ ರಾಜೇಶ್ ಅಯ್ಯಪ್ಪ, ಕ್ರೀಡೆಯಲ್ಲಿ ಪಟ್ಟಚೆರವಂಡ ಗಗನ್ ವೇದಪ್ಪ ಅವರನ್ನು ಸನ್ಮಾನಿಸಲಾಯಿತು. ನಾಗೇಶ್‌ ಕಾಲೂರು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಮಾಜಿ, ಅಧ್ಯಕ್ಷ ಅಂಬೆಕಲ್ ನವೀನ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಸ್ವಾಗತಿ ಸಮಿತಿ ಅಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ನರಿಯಂದಡ ಪಿಡಿಒ ಆಶಾ ಕುಮಾರಿ, ಗೌರವ ಕಾರ್ಯದರ್ಶಿಗಳಾದ ಎಸ್.ಐ. ಮುನೀರ್ ಅಹಮದ್, ಪುದಿಯ ನೆರವನ ರೇವತಿ ರಮೇಶ್, ಗೌರವ ಕೋಶಾಧಿಕಾರಿ ಸಂಪತ್ ಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಎನ್. ದೇವರಾಜು, ಬಿ.ಎಂ. ವಾಸು ರೈ, ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಟಿ. ವಿಜೇತ್, ವಿರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ಡಿ. ರಾಜೇಶ್ ಪದ್ಮನಾಭ, ನಾಪೋಕ್ಲು ಹೋಬಳಿ ಕಸಾಪ ಅಧ್ಯಕ್ಷ ನೆರವಂಡ ಉಮೇಶ್, ಮೂರ್ನಾಡು ಹೋಬಳಿ ಕಸಾಪ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಉಪಸ್ಥಿತರಿದ್ದರು.

ಸಮ್ಮೇಳನದ ಅಧ್ಯಕ್ಷ ಮಾತು:

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ, ಕೊಡಗಿನ ಭಾಷೆ, ಜನಾಂಗ, ಇತಿಹಾಸ, ಕುಟುಂಬ, ಸಂಸ್ಕೃತಿಗಳ ದಾಖಲಿಕರಣ ಆಗಬೇಕಿದೆ. ಇದಕ್ಕೆ ಜಿಲ್ಲೆಯಲ್ಲಿ ದಿವ್ಯ ನಿರ್ಲಕ್ಷ ಕಂಡುಬರುತ್ತದೆ ಎಂದರು. ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸುಡುಮದ್ದಿನ ಚಿತ್ತಾರ ಕಲಾಭಿಮಾನಿ ಜನಸಾಗರವನ್ನು ರಂಜಿಸಿತು.

ಬಾಲೆಯಡ ದಿವ್ಯ ಮಂದಪ್ಪ. ತಳೂರು ಉಷಾ ಕಾಶಿ, ವಂದನ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಕುಂಠಿತ
ಈರಣ್ಣ ಮೆಳ್ಳಿಗೇರಿ ತಂಡಕ್ಕೆ ಪ್ರಿಮಿಯರ್ ಲೀಗ್, ನಗದು ₹೨ ಲಕ್ಷ ಬಹುಮಾನ