ತಾಳತ್ತಮನೆಯಲ್ಲಿ ಉಚಿತ ರೇಬಿಸ್ ಲಸಿಕಾ ಶಿಬಿರ

KannadaprabhaNewsNetwork |  
Published : Oct 03, 2026, 02:45 AM IST
ಫೋಟೋ :: ಶಿಬಿರ | Kannada Prabha

ಸಾರಾಂಶ

ಕೊಡಗು ಜಿಲ್ಲಾ ಪಂಚಾಯಿತಿ, ಪಶು ಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆ ಮತ್ತು ಮಡಿಕೇರಿ ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ರೇಬಿಸ್ ಲಸಿಕಾ ಶಿಬಿರವು ತಾಳತ್ತಮನೆಯಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಮಡಿಕೇರಿ: ಕೊಡಗು ಜಿಲ್ಲಾ ಪಂಚಾಯಿತಿ, ಪಶು ಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆ ಮತ್ತು ಮಡಿಕೇರಿ ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ರೇಬಿಸ್ ಲಸಿಕಾ ಶಿಬಿರವು ತಾಳತ್ತಮನೆಯಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.ಮಡಿಕೇರಿ ತಾಲೂಕು ಯುವ ಒಕ್ಕೂಟ, ತಾಳತ್ತಮನೆಯ ನೇತಾಜಿ ಯುವತಿ ಮಂಡಳಿ ಹಾಗೂ ನೇತಾಜಿ ಯುವಕ ಮಂಡಲದ ಸಂಯುಕ್ತಾಶ್ರಯದಲ್ಲಿ ಇಂದು ತಾಳತ್ತಮನೆಯ ಆಟದ ಮೈದಾನದಲ್ಲಿ ಶಿಬಿರ ನಡೆಯಿತು. ಮಡಿಕೇರಿ ಪಶು ವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಚೇತನ್ ಸಿ.ಪಿ., ಡಾ.ಶಿಲ್ಪಾ ಶ್ರೀ ಸಿ.ಎಸ್., ಡಾ.ಚೆಟ್ಟಿಚ್ಚ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಶಿಬಿರವನ್ನು ನಡೆಸಲಾಯಿತು. ನೇತಾಜಿ ಯುವಕ ಮಂಡಲದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.ಶಿಬಿರದಲ್ಲಿ ತಾಳತ್ತಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಅನೇಕ ಪಶುಪ್ರೇಮಿಗಳು ತಮ್ಮ ಸಾಕುಪ್ರಾಣಿಗಳೊಂದಿಗೆ ಭಾಗವಹಿಸಿ ಉಚಿತ ಲಸಿಕಾ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡರು. ಒಟ್ಟು 99 ಶ್ವಾನಗಳು ಹಾಗೂ 11 ಬೆಕ್ಕುಗಳಿಗೆ ರೇಬಿಸ್ ಲಸಿಕೆ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳೆಯ ಪಾದರಕ್ಷೆಗಳಿಗೆ ಹೊಸ ರೂಪ ‘ದಾನ’
ಉಡುಪಿ: ನ. 27ರಿಂದ ರಾಜ್ಯ ಮಟ್ಟದ ಆಹಾರ ಮೇಳ