ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿಯ ಬಾಲ ಭವನ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಬ್ಯುಟಿಷಿಯನ್ ಸಂಘದ ಸ್ಥಾಪಕ ಅಧ್ಯಕ್ಷರಾದ ವನಿತಾ ಚಂದ್ರಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಡಿಕೇರಿ ತಾಲೂಕು ವ್ಯಾಪ್ತಿಯ ಸೌಂದರ್ಯ ತಜ್ಞರನ್ನು ಒಳಗೊಂಡಂತೆ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಂಘವನ್ನು ರಚಿಸಿ ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುವ ವನಿತಾ ಚಂದ್ರಮೋಹನ್, ಉತ್ತಮ ಗುಣಮಟ್ಟದ ಸೇವೆ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಸೌಂದರ್ಯ ತಜ್ಞರು ತಮ್ಮನ್ನು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.ಮಡಿಕೇರಿ ತಾಲೂಕು ಅಧ್ಯಕ್ಷರಾದ ಬಿ ಎಂ ಪವಿತ್ರ ಅವರ ನೇತೃತ್ವದಲ್ಲಿ ಕಾರ್ಯದರ್ಶಿಯಾಗಿ ರಾಣಿ, ಖಜಾಂಚಿಯಾಗಿ ವೈಭವಿ, ನಿರ್ದೇಶಕರಾಗಿ ಇಂಪಾ, ಹಸೀನಾ, ಸಫಿಯ, ಅನಿತಾ, ಕಲಾ, ವನಿತಾ, ಸಪ್ರಿನ, ಸೋಜಾ, ರಹಮತ್ ಅವರನ್ನು ಆಯ್ಕೆಯಾಗಿದ್ದಾರೆ.