ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 1.17 ಕೋಟಿ ರು. ಒಟ್ಟು ಲಾಭ ಗಳಿಸಿದ್ದು, ತೆರಿಗೆ ಮತ್ತು ಇತರ ಬಾಪುಗಳಿಗೆ ಕಾದಿರಿಸಿದ ನಂತರ 33.09 ಲಕ್ಷ ರು. ನಷ್ಟು ನಿವ್ವಳ ಲಾಭದಲ್ಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಜಿ.ಎಂ. ಸತೀಶ್ ಪೈ ತಿಳಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ವ್ಯವಹಾರ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದು ಲಾಭದಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡುಬರುತ್ತಿದೆ. ಆರ್‌ಬಿಐ ನಿಯಮದಂತೆ ಬ್ಯಾಂಕ್ 16.90 ಕೋಟಿ ರು. ಸಾಲ ಆದ್ಯತಾ ವಲಯಕ್ಕೆ ಕೊಟ್ಟಿದೆ. ಈ ಸಾಲಿನಲ್ಲಿ ಒಟ್ಟು 4.81 ಕೋಟಿ ರು. ವ್ಯವಹಾರ ನಡೆಸಲಾಗಿದ್ದು, ಅನುತ್ಪಾದಕ ಆಸ್ತಿಯ ಪ್ರಮಾಣ ಅಧಿಕಗೊಂಡಿದೆ. ಸದ್ಯ ಇದು 1.28 ಕೋಟಿ ರು.ಗಳಷ್ಟಿದೆ ಎಂದು ತಿಳಿಸಿದರು.
ಬ್ಯಾಂಕ್ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ತರಗತಿಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಆದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಬ್ಯಾಂಕ್‌ನ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಶನಿವಾರ ಮಡಿಕೇರಿ ಕೊಡವ ಸಮಾಜದಲ್ಲಿ ನಡೆಸಲಾಗುತ್ತಿದ್ದು, ಸದಸ್ಯರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.ಬ್ಯಾಂಕ್ ನಿರ್ದೇಶಕರಾದ ನಾಗೇಶ್, ಸಿ.ಕೆ. ಬಾಲಕೃಷ್ಣ, ಸತೀಶ್, ರಾಜೇಶ್, ಬಿ.ಎಂ. ಜಗದೀಶ್ ಸುದ್ದಿಗೋಷ್ಠಿಯಲ್ಲಿದ್ದರು.
ಶೇ.8 ಡಿವಿಡೆಂಡ್ ಘೋಷಣೆನಾಪೋಕ್ಲು: ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ 7ನೇ ವಾರ್ಷಿಕ ಮಹಾಸಭೆ ಪೆರಾಜೆಯ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಮಂಗಳವಾರ ನಡೆಯಿತು.ಸಹಕಾರ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಹಕಾರ ಸಂಘವು ವರದಿ ವರ್ಷದಲ್ಲಿ 193 ಕೋಟಿ ವಾರ್ಷಿಕ ವ್ಯವಹಾರ ನಡೆಸಿ 38.47 ಲಕ್ಷ ರು. ಲಾಭ ಗಳಿಸಿದೆ. ರಬ್ಬರ್ ವ್ಯವಹಾರ ಮಾಡಿದ ಸದಸ್ಯರಿಗೆ ಕೆ.ಜಿ.ಗೆ ರು. 2 ರಂತೆ ಪ್ರೋತ್ಸಾಹ ಧನ ನೀಡಲು 5.95 ಲಕ್ಷ ರು. ಮೊತ್ತವನ್ನು ಕಾಯ್ದಿರಿಸಲಾಗಿದೆ. ಸದಸ್ಯರಿಗೆ ಶೇ. 8 ರಂತೆ ಡಿವಿಡೆಂಡ್ ಘೋಷಿಸಲಾಗಿದೆ ಎಂದರು.ಉಪಾಧ್ಯಕ್ಷ ಅಶೋಕ ಪಿ ಎಂ, ನಿರ್ದೇಶಕರಾದ ಹೊನ್ನಪ್ಪ ಅಮಚೂರು, ಜಯರಾಮ ನಿಡ್ಯಮಲೆ ಬಿ, ಸೀತಾರಾಮ ಕದಿಕಡ್ಕ, ಧನಂಜಯ ಕೋಡಿ, ಪ್ರಮೀಳ ಬಂಗಾರಕೋಡಿ, ಪುಷ್ಪಾವತಿ ವ್ಯಾಪಾರೆ, ಪ್ರದೀಪ ಕೆ.ಎಂ, ದೀನರಾಜ್ ದೊಡ್ಡಡ್ಕ, ಶೇಷಪ್ಪ ನಾಯ್ಕ ನಿಡ್ಯಮಲೆ, ಜಯರಾಮ ಪಿ. ಟಿ, ಕಿರಣ್ ಬಂಗಾರಕೋಡಿ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಶ್ರೀನಿವಾಸ್ ಕೆ ಜಿ ಮತ್ತಿತರರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಎಚ್‌ಕೆ ಸ್ವಾಗತಿಸಿದರು. ನಿರ್ದೇಶಕ ಪ್ರಮೀಳಾ ಬಂಗಾರಕೋಡಿ ವಂದಿಸಿದರು.