ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಭಾಂಗಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ಶರಣರು ಸಮಾಜದಲ್ಲಿದ್ದ ಮೇಲು-ಕೀಳು, ಜಾತಿ ತಾರತಮ್ಯದ ವಿರುದ್ಧ ಹೋರಾಡುತ್ತಿದ್ದ ಸಂದರ್ಭದಲ್ಲಿ ಶರಣ ಸಂಕುಲವನ್ನೆ ನಾಶ ಮಾಡಬೇಕು ಎಂದು ಬಿಜ್ಜಳನ ಸೈನಿಕರು ಶರಣರ ಮೇಲೆ ದಾಳಿ ಮಾಡಿದಾಗ ವಚನ ಸಾಹಿತ್ಯ ತನ್ನ ಬೆನ್ನಿಗೆ ಕಟ್ಟಿಕೊಂಡು ಕೈಯಲ್ಲಿ ಖಡ್ಗ ಹಿಡಿದು ಬಿಜ್ಜಳನ ಸೈನ್ಯ ಎದುರಿಸಿದ ಮಹಾನ್ ಕ್ರಾಂತಿಕಾರಿ ಮಡಿವಾಳ ಮಾಚಿದೇವರು ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಮಲ್ಲೇಶಪ್ಪ ಮಾತನಾಡಿ ಶರಣ ಸಾಹಿತ್ಯ ಪರಿಷತ್ 12ನೇ ಶತಮಾನದ ಶರಣರ ಆಚಾರ-ವಿಚಾರಗಳ ಇಂದಿನ ಯುವ ಪೀಳಿಗೆಗೆ ತಿಳಿಸಲು ದತ್ತಿ ಉಪನ್ಯಾಸ ಕಾರ್ಯಕ್ರಮಗಳ ಮಾಡುತ್ತಾ ಶರಣರ ಬದುಕು, ಅವರ ಆದರ್ಶಗಳ ತಿಳಿಸುವ ಕೆಲಸ ನಿರಂತರ ಮಾಡುತ್ತಿದ್ದು ಇಂತಹ ದತ್ತಿ ಕಾರ್ಯಕ್ರಮಗಳಿಂದ ಆದರ್ಶಗಳ ತಿಳಿದು ಅವುಗಳ ಮೈಗೂಡಿಸಿ ಮುನ್ನಡೆಯಬೇಕು ಎಂದರು.ಸಮಾರಂಭದ ಅಧ್ಯಕ್ಷತೆ ಶಾಲಾ ಮುಖ್ಯ ಶಿಕ್ಷಕ ಲೋಹಿತಾಶ್ವ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಸರ್ಕಾರಿ ಬಾಲಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜಪ್ಪ, ಮಹಾರುದ್ರಪ್ಪ, ದತ್ತಿದಾನಿ ನಿಹಾನ್, ರುದ್ರಪ್ಪ, ಬಿ.ಶಿವಲಿಂಗಪ್ಪ, ಎನ್.ಎಸ್.ರಾಜಪ್ಪ, ಶಿವರುದ್ರಪ್ಪ, ವೀರಭದ್ರಪ್ಪ, ಶಿವಣ್ಣ ಸೇರಿದಂತೆ ಮೊದಲಾದವರು ಹಾಜರಿದ್ದರು.