ಪುಟ...2ಕ್ಕೆ ಲೀಡ್‌ ಬಾಕ್ಸ್‌ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಮಹಾಶಿವಪೂಜೆ

KannadaprabhaNewsNetwork |  
Published : Jul 22, 2024, 01:23 AM IST
ಬುರಣಾಪೂರದ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಗುರು ಪೂರ್ಣಿಮೆಯ ನಿಮಿತ್ಯವಾಗಿ ವಿಶ್ವಶಾಂತಿಗಾಗಿ ಸಾಮೂಹಿಕ ಶಿವಪಂಚಾಕ್ಷರಿ ಮಹಾಮಂತ್ರ ಜಪಯಜ್ಞೆ ಜರುಗಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರತಾಲೂಕಿನ ಬುರಣಾಪೂರದ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಗುರು ಪೂರ್ಣಿಮೆಯ ನಿಮಿತ್ಯ ವಿಶ್ವಶಾಂತಿಗಾಗಿ ಸಾಮೂಹಿಕ ಶಿವಪಂಚಾಕ್ಷರಿ ಮಹಾಮಂತ್ರ ಜಪಯಜ್ಞೆ ಜರುಗಿತು. ಧರ್ಮದರ್ಶಿ ಲಕ್ಷ್ಮಣ ಶಿವಶರಣರ ನೇತೃತ್ವದಲ್ಲಿ ನಿರಾಭಾರಿ ಸದ್ಗುರು, ನಡೆದಾಡುವ ದೇವರು ಜ್ಞಾನಯೋಗಿ ಸಿದ್ಧೇಶ್ವರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಸಹಸ್ರನಾಮಾವಳಿಯ ಮಹಾಶಿವಪೂಜೆ ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು.

ಲಕ್ಷ್ಮಣ ಶಿವಶರಣರು ಅವರು, ಸಿದ್ಧೇಶ್ವರ ಅಪ್ಪಗಳವರು ಎಲ್ಲ ಸದ್ಭಕ್ತರ ಅಜ್ಞಾನದ ಕತ್ತಲೆಯನ್ನು ಕಳೆದು ಸರ್ವರಿಗೂ ಸುಜ್ಞಾನದ ಪರಮಾತ್ಮನ ಬೆಳಕನ್ನು ನೀಡಿದ ವಿಶ್ವದ ಶ್ರೇಷ್ಟ ಸದ್ಗುರುಗಳಾಗಿದ್ದಾರೆ. ಇಂತಹ ಗುರುಗಳ ಸ್ಮರಣೆ ಇಂದು ಅವಶ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಅಕ್ಕನ ಬಳಗದವರಿಂದ ಶಿವಭಜನೆ ನಾಮಸ್ಮರಣೆ ನಡೆದು ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಶ್ರೀಶೈಲ ಮಠಪತಿ, ಹಣಮಂತ ಪುಟ್ಟಿ, ಮಲ್ಲಿಕಾರ್ಜುನ ಶಿವೂರ, ನಂದಬಸಪ್ಪ ನುಚ್ಚಿ, ವಿಷ್ಣು ಒಂಬಾಸೆ, ಬನ್ನೆವ್ವ ಹಳ್ಳಿ, ನೀಲಮ್ಮ ಬಡಿಗೇರ, ದೇವಕ್ಕಿ ದಳವಾಯಿ ಬಸಯ್ಯ ಹಿರೇಮಠ, ಶರಣಯ್ಯ ಹಿರೇಮಠ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!