ಸಂತೋಷ ಲಾಡ್‌ಗೆ ಮಹದಾಯಿ ಹೋರಾಟಗಾರರ ಮನವಿ

KannadaprabhaNewsNetwork |  
Published : Aug 24, 2025, 02:00 AM IST
23ಎಚ್‌ಯುಬಿ31ನವಲಗುಂದ ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಬೆಳೆ ಸಮೇತ ಆಗಮಿಸಿದ ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರು ಸಚಿವ ಸಂತೋಷ ಲಾಡ್‌ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಅತಿವೃಷ್ಟಿ ಹಾನಿ ವೀಕ್ಷಿಸಲು ಪಟ್ಟಣಕ್ಕೆ ಆಗಮಿಸಿದ ಸಚಿವರನ್ನು ಭೇಟಿ ಮಾಡಿದ ಹೋರಾಟಗಾರರು, ಸುಮಾರು ಆರೇಳು ವರ್ಷದಿಂದ ತಾಲೂಕು, ಹೋಬಳಿ ಮಟ್ಟದಲ್ಲಾಗಲಿ ಅಥವಾ ಗ್ರಾಮಮಟ್ಟದಲ್ಲಾಗಲಿ ಬೆಳೆ ವಿಮೆ ಬಂದಿಲ್ಲ. ಆದರೆ, ಈ ವರ್ಷವು ಕೂಡಾ ಹೆಸರಿನ ಇಳುವರಿ ರೋಗ ಕೀಟಬಾಧೆಯಿಂದ ಮತ್ತು ಅತಿವೃಷ್ಠಿಯಿಂದ ಇಳುವರಿ ಕುಂಟಿತವಾಗಿದೆ.

ನವಲಗುಂದ: ತಾಲೂಕಿನಲ್ಲಿ ಸತತವಾಗಿ ಸುರಿದ ಮಳೆಯಿಂದ ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದು ಹಾನಿಗೊಳಗಾದ ಬೆಳೆಗಳಿಗೆ ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಮಾದರಿಯಲ್ಲಿ ರೈತರಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರು ಸಚಿವ ಸಂತೋಷ ಲಾಡ್, ಜಿಲ್ಲಾಧಿಕಾರಿ ದಿವ್ಯಪ್ರಭು ಹಾಗೂ ಶಾಸಕ ಎನ್.ಎಚ್. ಕೋನರಡ್ಡಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಅತಿವೃಷ್ಟಿ ಹಾನಿ ವೀಕ್ಷಿಸಲು ಪಟ್ಟಣಕ್ಕೆ ಆಗಮಿಸಿದ ಸಚಿವರನ್ನು ಭೇಟಿ ಮಾಡಿದ ಹೋರಾಟಗಾರರು, ಸುಮಾರು ಆರೇಳು ವರ್ಷದಿಂದ ತಾಲೂಕು, ಹೋಬಳಿ ಮಟ್ಟದಲ್ಲಾಗಲಿ ಅಥವಾ ಗ್ರಾಮಮಟ್ಟದಲ್ಲಾಗಲಿ ಬೆಳೆ ವಿಮೆ ಬಂದಿಲ್ಲ. ಆದರೆ, ಈ ವರ್ಷವು ಕೂಡಾ ಹೆಸರಿನ ಇಳುವರಿ ರೋಗ ಕೀಟಬಾಧೆಯಿಂದ ಮತ್ತು ಅತಿವೃಷ್ಠಿಯಿಂದ ಇಳುವರಿ ಕುಂಟಿತವಾಗಿದೆ. ಇದಲ್ಲದೆ ಬಂದ ಇಳುವರಿಯಲ್ಲಿ ಶೇ. 50 ಹಾಳಾಗಿದೆ. ಹುಳುಕು ಕಾಯಿ, ಡ್ಯಾಮೇಜ್ ಆದ ಕಾಯಿಯನ್ನು ಬೇರ್ಪಡಿಸಿ ತೂಕ ಮಾಡಲಿಕ್ಕೆ ಅಥವಾ ನೋಡಲಿಕ್ಕೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ಸ್ಟೀಲ್ ಬ್ರಿಡ್ಜ್‌ಗೆ ವರದಿ ನೀಡಿ: ನವಲಗುಂದ ತಾಲೂಕಿನ ತಡಹಾಳ ಹತ್ತಿರ ಇರುವ ದೊಡ್ಡಹಳ್ಳ ಹಾಗೂ ಬೆಣ್ಣಿಹಳ್ಳ ಸೇತುವೆ ಕೊಚ್ಚಿಹೋಗಿದ್ದು, ಕೂಡಲೇ ವಿಶೇಷ ತಜ್ಞರ ಜೊತೆ ಚರ್ಚಿಸಿ ಸ್ಟೀಲ್ ಬ್ರಿಡ್ಜ್ ಅಥವಾ ನೂತನ ಸೇತುವೆ ನಿರ್ಮಿಸಲು ಈಗಾಗಲೇ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಜತೆ ಚರ್ಚಿಸಲಾಗಿದೆ. ತಕ್ಷಣ ವರದಿ ನೀಡಿ ಸರ್ಕಾರದಿಂದ ಮಂಜೂರಾತಿ ಪಡೆಯಬೇಕು ಎಂದು ಸಚಿವ ಸಂತೋಷ ಲಾಡ್‌ ಹೇಳಿದರು.

ರೈತ ಮುಖಂಡರಾದ ಲೋಕನಾಥ ಹೆಬಸೂರ, ಎಸ್.ಆರ್. ಅಂಬಲಿ, ರಘುನಾಥ ನಡುವಿನಮನಿ, ಪ್ರವೀಣ ಯರಗಟ್ಟಿ, ದೇವೇಂದ್ರ ಗುಡಿಸಾಗರ, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ