ಹುಬ್ಬಳ್ಳಿ: ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಕಳಸಾ-ಬಂಡೂರಿ ವಿಷಯವಾಗಿ ನೀಡಿರುವ ಹೇಳಿಕೆ ವೈಯಕ್ತಿಕವಾಗಿದ್ದು, ಕಾನೂನಿನ ಪ್ರಕಾರ ನೀರನ್ನು ಪಡೆಯುವ ವರೆಗೂ ಇದನ್ನು ರಾಜಕೀಕರಣ ಮಾಡಬೇಡಿ ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಮನವಿ ಮಾಡಿಕೊಂಡಿದ್ದಾರೆ.
ಕಳಸಾ-ಬಂಡೂರಿ ನೀರನ್ನು ತರುವ ಜವಾಬ್ದಾರಿ ಕರ್ನಾಟಕದ ಪ್ರತಿ ರಾಜಕಾರಣಿಗಳ ಮೇಲಿದೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಲೋಕಸಭಾ ಸದಸ್ಯರಾಗಿ ಈಗ ಕೇಂದ್ರ ಮಂತ್ರಿಗಳಾಗಿರುವವರು. ಅವರು ಹಿಂದೆ ಈ ಹೋರಾಟದಲ್ಲಿ ಇದ್ದವರು. ಅವರಿಗೆ ಎಲ್ಲವೂ ತಿಳಿದಿದೆ. ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ವಿವಾದವನ್ನು ಕಾನೂನಿನ ಮೂಲಕ ಬಗೆಹರಿಸುವ ಭರವಸೆ ನೀಡಿದ್ದು, ಇದು ಶೀಘ್ರದಲ್ಲೇ ಬಗೆಹರಿಯಲಿದೆ ಎಂದಿರುವ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು, ರಾಜಕೀಯ ಮಾಡಬಾರದು ಎಂದು ಮನವಿ ಮಾಡಿದ್ದಾರೆ.