ಧಾರವಾಡ:
ಕಿತ್ತೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವನ್ಯಜೀವಿ ಮಂಡಳಿಯು ಮಹದಾಯಿ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಲು ವಿಳಂಬ ಮಾಡುತ್ತಿದ್ದು, ಕಳೆದ ಮೂರು ವರ್ಷಗಳಿಂದ ಕೆಲಸ ಸ್ಥಗಿತಗೊಂಡಿದೆ. ಮಹದಾಯಿ ಯೋಜನೆ ಅನುಷ್ಠಾನಕ್ಕೆ ಬಾಂಬೆ ಉಚ್ಚ ನ್ಯಾಯಾಲಯ ಮಹದಾಯಿ ''''''''ಹುಲಿ ಸಂರಕ್ಷಿತ ಅಭಯಾರಣ್ಯ ಪ್ರದೇಶ'''''''' ಎಂದು ಘೋಷಿಸಿದೆ. ಈ ಕಾರಣಕ್ಕೆ ಯೋಜನೆ ವಿಳಂಬವಾಗಿದೆ ಎನ್ನಲಾಗುತ್ತಿದ್ದು, ಮುಖ್ಯವಾಗಿ ಯೋಜನೆ ಕಾಮಗಾರಿಯು ಅಂಡರ್ ಗ್ರೌಂಡ್‌ನಲ್ಲಿ ನಡೆಯಲಿದೆ. ಹೀಗಾಗಿ ಹುಲಿಗಳಿಗೆ ತೊಂದರೆ ಉಂಟಾಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಭಾಗದ ಕುಡಿಯುವ ನೀರಿಗೆ ಮಹದಾಯಿ ಅನುಷ್ಠಾನ ಅಗತ್ಯವಿದೆ ಎಂದರು.
ಮಹದಾಯಿ ಜತೆಗೆ ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳ ನೀರಾವರಿ ಯೋಜನೆಗೆ ಒಳಪಡಿಸಬೇಕು. ನೀರು ಸಂಗ್ರಹಕ್ಕೆ ಮತ್ತು ಭೈರನಪಾದ ಆಣೆಕಟ್ಟು ನಿರ್ಮಿಸಲು ಜಮೀನು ಕೊರತೆ ಸಹ ಇದೆ. ಜಮೀನು ಬೆಲೆಗಳು ದುಬಾರಿಯಾಗಿದ್ದು ಇದು ಕಷ್ಟಸಾಧ್ಯವಾಗಿದೆ ಎಂದು ತಿಳಿಸಿದರು.