ರಾಮನಗರ: ಪರ್ಜನ್ಯ ಗುರುಕುಲ ಸಂಸ್ಥಾಪಕರು ಮತ್ತು ಲಕ್ಷ್ಮೀಗಣಪತಿ ದೇವಾಲಯದ ಪ್ರಧಾನ ಅರ್ಚಕರು ವಿದ್ವಾನ್ ಮಹದೇವ ಶಾಸ್ತ್ರಿಗಳಿಗೆ ಬೀರಶೈವಾಗಮ ಪ್ರವೀಣ ಬಿರುದಿಗೆ ಪಾತ್ರರಾಗಿದ್ದಾರೆ. ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿ ಏರ್ಪಡಿಸಿದ್ದ ವೀರಶೈವಾಗಮ ಶಾಸ್ತ್ರದ ಅಧ್ಯಯನದಲ್ಲಿ ಅತಿ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಚಿನ್ನದ ಪದಕವನ್ನು ಪ್ರದಾನ ಮಾಡಿ ಬೀರಶೈವಾಗಮ ಪ್ರವೀಣ ಎಂಬ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದೆ. ಬೆಂಗಳೂರಿನ ಬಸವನಗುಡಿಯಲ್ಲಿ ನಡೆದ ಆಗಮ ಘಟಿಕೋತ್ಸವ 2005 ಕಾರ್ಯಕ್ರಮದಲ್ಲಿ ವಿದ್ವಾನ್ ಮಹದೇವ ಶಾಸ್ತ್ರಿಗಳಿಗೆ ಈ ಗೌರವ ದೊರೆತಿದೆ. ಕಾರ್ಯಕ್ರಮದಲ್ಲಿ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಮುಜರಾಯಿ ಮುಖ್ಯ ಆಯುಕ್ತ ಡಾ.ಟಿ.ವೆಂಕಟೇಶ್, ಒಕ್ಕಲಿಗ ಸಂಸ್ಥಾನದ ಶ್ರೀ ನಿಶ್ಚಲಾನಂದ ಸ್ವಾಮಿ ಹಾಗು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.20ಕೆಆರ್ ಎಂಎನ್ 3.ಜೆಪಿಜಿ