ನಾಡಮಾರಮ್ಮನ ದೇಗುಲದಲ್ಲಿ ಮಹಾಕುಂಭಾಭಿಷೇಕ

KannadaprabhaNewsNetwork |  
Published : Jan 20, 2025, 01:32 AM IST
19ಮಾಗಡಿ1 : ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ಶ್ರೀ ನಾಡ ಮಾರಮ್ಮ ದೇವಸ್ಥಾನ ಲೋಕಾರ್ಪಣೆಗೆ ಸಿದ್ಧವಾಗಿರುವುದು. | Kannada Prabha

ಸಾರಾಂಶ

ಮಾಗಡಿ: ತಾಲೂಕಿನ ಚಕ್ರಭಾವಿ ಶ್ರೀ ನಾಡಮಾರಮ್ಮದೇವಿ ದೇವಸ್ಥಾನ ಸೇವಾ ಸಮಿತಿ ಜ. 22, 23, 24 ಶುಕ್ರವಾರದವರೆಗೆ ಶ್ರೀ ನಾಡಮಾರಮ್ಮದೇವಿ ಶಿಲಾಮಯ ದೇವಸ್ಥಾನದ ಜೀರ್ಣೋದ್ಧಾರ ಪ್ರತಿಷ್ಠಾಪನಾ ಮಹಾಕುಂಭಾಭಿಷೇಕ ಮಹೋತ್ಸವ ಆಯೋಜಿಸಲಾಗಿದೆ ಎಂದು ಸೇವಾ ಸಮಿತಿ ಸದಸ್ಯರು ತಿಳಿಸಿದ್ದಾರೆ.

ಮಾಗಡಿ: ತಾಲೂಕಿನ ಚಕ್ರಭಾವಿ ಶ್ರೀ ನಾಡಮಾರಮ್ಮದೇವಿ ದೇವಸ್ಥಾನ ಸೇವಾ ಸಮಿತಿ ಜ. 22, 23, 24 ಶುಕ್ರವಾರದವರೆಗೆ ಶ್ರೀ ನಾಡಮಾರಮ್ಮದೇವಿ ಶಿಲಾಮಯ ದೇವಸ್ಥಾನದ ಜೀರ್ಣೋದ್ಧಾರ ಪ್ರತಿಷ್ಠಾಪನಾ ಮಹಾಕುಂಭಾಭಿಷೇಕ ಮಹೋತ್ಸವ ಆಯೋಜಿಸಲಾಗಿದೆ ಎಂದು ಸೇವಾ ಸಮಿತಿ ಸದಸ್ಯರು ತಿಳಿಸಿದ್ದಾರೆ.

ಜ.22ರಂದು ಬುಧವಾರ ಅಷ್ಟಮಿ ಸಂಜೆ ಗಣಪತಿ ಪ್ರಾರ್ಥನೆ, ವೇದಪಾರಾಯಣ, ಗಂಗಾಭಾಗೀರಥಿ ಪೂಜೆ, ಆಕ್ರೋಷಕ ಸಂಗ್ರಹ, ಮಹಾಸಂಕಲ್ಪ ಗಣಪತಿ ಪೂಜೆ, ಶುದ್ಧಿ ಪುಣ್ಯಾಃ, ಅಂಕುರಾರ್ಪಣೆ, ರಕ್ಷಾ ಬಂಧನ, ಋತ್ವಿಕ್ ವರುಣ, ದೇವನಾಂದಿ, ವಾಸ್ತು ಹೋಮ, ರಾಜ್ಯೋಘ್ನ ಹೋಮ, ಅಘೋರಾಸ್ತ್ರ ಹೋಮ, ಮಹಾ ಬಲಿಪೂಜೆ, ಮಂಟಪಾರಾಧನೆ, ಮಹಾಮಂಗಳಾರತಿ ನೆರವೇರಲಿದೆ.

ಜ.23ರಂದು ವೇದಪಾರಾಯಣ, ಪ್ರಾಂತರಣ, ಧ್ವಜಕುಂಭಾರಾಧನೆ, ಯಾಗಶಾಲಾ ಪ್ರವೇಶ, ಕಲಕ ಪ್ರತಿಷ್ಠಾಪನೆ, ಬಿಂಬಕುದ್ರಿ, ಪಂಚಗದ ಸ್ವಪನ ಗಣ, ನವಗ್ರಹದ ಶ್ರೀ ಕ್ಷೇತ್ರ ಪುರುಷ ಸೂಕ್ತ ಅದಿವಾಸ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ಸಂಜೆ ಶ್ರೀ ಚಕ್ರ ಮಂಡಲಾರಾಧನೆ, ಕಳಶಾರಾಧನೆ, ಮೂಲಮಂತ್ರ ಹೋಮ, ಪ್ರಾಯಶ್ಚಿತ್ತ ಹೋಮ, ಪಂಚಿಗಪ್ಪ ಹೋಮ, ಆಗ್ನಿಯುತ್ತಾರಣ ಪೂರ್ವಕ ಯಂತ್ರ ಸ್ಥಾಪನೆ, ನವವಿಧ ಆದಿವಾಸ, ಶಿಲಾ ಸ್ಥಾಪನೆ, ಅಷ್ಟಬಂಧ, ಮಹಾಮಂಗಳಾರತಿ ನೆರವೇಲಿದೆ.

ಜ.24ರಂದು ಶುಕ್ರವಾರ ದಶಮಿ ಬೆಳಗ್ಗೆ ಸುಪ್ರಭಾತ ಸೇವೆ, ಸಂದಿಕಾಲ ಪೂಜೆ, ಮೂಲ ವಿರಾಟಕ್ಕೆ ಪ್ರಾಣ ಪ್ರತಿಷ್ಠಾಪನೆ, ತತ್ರನ್ಯಾಸ ಗೋಪೂಜೆ, ವೀಕ್ಷಣೆ ಮಂಗಳಾರತಿ, ತತ್ರನ್ಯಾಸ ಹೋಮ, ಪ್ರತಿಷ್ಠಾಪನಾಂಗ ಹೋಮ, ಫಲ ಪಂಚಾಮೃತ

ಅಭಿಷೇಕ, ಕಲಶಾಭಿಷೇಕ, ಬೆಳಗ್ಗೆ 9.30ರಿಂದ 9.45 ಗಂಟೆಯೊಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮಹಾ ಕುಂಭಾಭಿಷೇಕ ದುರ್ಗಾಹೋಮ, ಮಹಾ ಪೂರ್ಣಾಹುತಿ, ಮಹಾಮಂಗಳಾರತಿ ಮಧ್ಯಾಹ್ನ 12.30 ಗಂಟೆಗೆ ಅನ್ನಸಂತರ್ಪಣೆ ನೆರವೇರಲಿದೆ.

ಕೆಂಗೇರಿ ರಾಮಾನುಜ ಮಠದ ಆಗಮಿಕರಾದ ರಾಮಚಂದ್ರ ಭಟ್ಟಾಚಾರ್ಯರು, ಮಂಜುನಾಥ ದೀಕ್ಷಿತ್, ಜನಾರ್ದನ್ ಭಟ್ಟಾಚಾರ್ಯರು ಪೂಜಾ ಕಾರ್ಯಕ್ರಮ ನೇತೃತ್ವ ವಹಿಸಲಿದ್ದಾರೆಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಪೀಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷ ಡಾ.ನಿಶ್ಚಲಾನಂದ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಸೌಮ್ಯನಾಥ ಸ್ವಾಮೀಜಿ, ಚಕ್ರಭಾವಿ ಜಂಗ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಅಂಕನಹಳ್ಳಿ ಮಠಾಧ್ಯಕ್ಷರಾದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಶಾಸಕ ಎಚ್. ಸಿ.ಬಾಲಕೃಷ್ಣ, ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ಎಚ್. ಎನ್.ಅಶೋಕ್, ಮಾಜಿ ಶಾಸಕರಾದ ಎ.ಮಂಜುನಾಥ್‌, ಅಚ್ಯುತ್‌ರಾಜ್‌, ಜುಟ್ಟ‌ಹಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ಚಂದ್ರೇಗೌಡ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ