ಮುಂಬೈಗೂ ಮಹಾಲಕ್ಷೀ ಬ್ಯಾಂಕ್ ವಿಸ್ತರಣೆ: ಯಶ್‌ಪಾಲ್ ಸುವರ್ಣ

KannadaprabhaNewsNetwork |  
Published : Aug 27, 2026, 03:15 AM IST
ಮಹಾಲಕ್ಷ್ಮೀ ಬ್ಯಾಂಕಿನಮಹಾಸಭೆಯಲ್ಲಿ ಪ್ರತಿಭಾಪುರಸ್ಕಾರ ನಡೆಯಿತು | Kannada Prabha

ಸಾರಾಂಶ

ಕರಾವಳಿಯ ಪ್ರತಿಷ್ಠಿತ ಮಹಾಲಕ್ಷ್ಮೀ ಕೋ ಓಪರೇಟಿವ್ ಬ್ಯಾಂಕ್‌ನ 48ನೇ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಅಧ್ಯಕ್ಷ, ಶಾಸಕ ಯಶ್‌ಪಾಲ್ ಎ. ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.

ಉಡುಪಿ: ಕರಾವಳಿಯ ಪ್ರತಿಷ್ಠಿತ ಮಹಾಲಕ್ಷ್ಮೀ ಕೋ ಓಪರೇಟಿವ್ ಬ್ಯಾಂಕ್‌ನ 48ನೇ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಅಧ್ಯಕ್ಷ, ಶಾಸಕ ಯಶ್‌ಪಾಲ್ ಎ. ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಸರ್ವರನ್ನು ಸ್ವಾಗತಿಸಿ ಮಾತನಾಡಿದ ಅಧ್ಯಕ್ಷರು, ಮಹಾಲಕ್ಷ್ಮೀ ಬ್ಯಾಂಕ್ ತನ್ನ ವ್ಯವಹಾರವನ್ನು ಮಹಾನಗರಿ ಮುಂಬೈಗೂ ವಿಸ್ತರಿಸುವ ಯೋಜನೆ ಆಡಳಿತ ಮಂಡಳಿಯ ಮುಂದಿದೆ. ಬ್ಯಾಂಕು ನಿರಂತರ 16 ವರ್ಷಗಳಿಂದ ಅತಿ ಹೆಚ್ಚು ಡಿವಿಡೆಂಡ್ ನೀಡುವ ಕರಾವಳಿ ಭಾಗದ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಬ್ಯಾಂಕಿನ ನಿವ್ವಳ ಲಾಭದಲ್ಲಿ ಸಹಕಾರ ಶಿಕ್ಷಣ ನಿಧಿಗೆ 15,51,089 ರು.ಗಳನ್ನು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿಯವರಿಗೆ ಅಧ್ಯಕ್ಷರು ಹಸ್ತಾಂತರಿಸಿದರು.

ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ ಸಹಕಾರಿ ಸಂಸ್ಥೆಗೆ ಸಮರ್ಥ ನಾಯಕತ್ವ ಸಿಕ್ಕಿದಲ್ಲಿ ಯಾವ ರೀತಿ ಪ್ರಗತಿ ಸಾಧಿಸಬಹುದು ಎಂಬುದಕ್ಕೆ ಮಹಾಲಕ್ಷ್ಮೀ ಬ್ಯಾಂಕಿನ ಸಮಗ್ರ ಅಭಿವೃದ್ಧಿಯೇ ಕೈಗನ್ನಡಿ. ಯಶ್ಪಾಲ್ ಸುವರ್ಣ ಅವರು ಮಹಾಲಕ್ಷ್ಮೀ ಬ್ಯಾಂಕಿನ ಅಧ್ಯಕ್ಷರಾಗಿ ಅತ್ಯುತ್ತಮವಾಗಿ ಮುನ್ನಡೆಸುತಿದ್ದು, ಸಹಕಾರಿ ಮುಖಂಡರಾಗಿ ಕರಾವಳಿ ಜಿಲ್ಲೆಯ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ ಎಂದರು. ಮಲ್ಪೆ ಮೀನುಗಾರ ಸಂಘದ ಮಾಜಿ ಅಧ್ಯಕ್ಷರಾದ ದಯಾನಂದ ಕೆ. ಸುವರ್ಣ ಅವರು, ಇತ್ತೀಚಿನ ಕೆಲವು ದಿನಗಳಿಂದ ಬ್ಯಾಂಕಿನ ಏಳಿಗೆ ಸಹಿಸದೆ ಅಪಪ್ರಚಾರ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಆಡಳಿತ ಮಂಡಳಿ ಕಾನೂನು ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು. ದಕ ಮೊಗವೀರ ಮಹಾಜನ ಸಂಘ ಉಚ್ಚಿಲ ದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬ್ಯಾಂಕಿನ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಷಡ್ಯಂತ್ರವನ್ನು ಮೊಗವೀರ ಸಮಾಜ ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಸಮಾರಂಭದಲ್ಲಿ ಶೈಕ್ಷಣಿಕ ಕ್ಷೇತ್ರದ ಸಾಧಕರಿಗೆ, 25 ಗಂಟೆ ಗಾಯನದ ವಿಶ್ವದಾಖಲೆ ಮಾಡಿರುವ ವಿದುಷಿ ಸಂಗೀತ ಬಾಲಚಂದ್ರ ರಿಯಾಲಿಟಿ ಶೋ ಪ್ರತಿಭೆ ವೃದ್ಧಿ ಆರ್. ಕೊಳಂಬೆ ಅವರನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.

ಸಮಾರಂಭದಲ್ಲಿ ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ, ಮೀನುಗಾರ ಮುಖಂಡರಾದ ರಾಮಚಂದ್ರ ಕುಂದರ್, ಶಿವಪ್ಪ ಟಿ. ಕಾಂಚನ್, ಸತೀಶ್ ಕುಂದರ್, ರತ್ನಾಕರ ಸಾಲ್ಯಾನ್, ದಯಾನಂದ ಕುಂದರ್, ಶರಣ್ ಕುಮಾರ್ ಮಟ್ಟು, ದಯಾಕರ ಸುವರ್ಣ, ನಾಗರಾಜ ಕುಂದರ್, ನಾಗರಾಜ ಸುವರ್ಣ, ಗುಂಡು ಬಿ. ಅಮೀನ್, ದೇವಪ್ಪ ಕಾಂಚನ್, ವಿಜಯ ಬಂಗೇರ, ಲೋಕೇಶ್ ಸಾಲ್ಯಾನ್, ಅರುಣ್ ಕುಮಾರ್, ಹರೀಶ್ಚಂದ್ರ ಮೆಂಡನ್, ಸುಂದರ ಪಿ. ಸಾಲ್ಯಾನ್ ಹಾಗೂ ಬ್ಯಾಂಕಿನ ಉಪಾಧ್ಯಕ್ಷರಾದ ವಾಸುದೇವ ಸಾಲ್ಯಾನ್, ನಿರ್ದೇಶಕರುಗಳಾದ ಶಶಿಕಾಂತ ಬಿ ಕೋಟ್ಯಾನ್, ಶೋಭೇಂದ್ರ ಸಸಿಹಿತ್ಲು, ಕೆ. ಸಂಜೀವ ಶ್ರೀಯಾನ್, ವಿನಯ ಕರ್ಕೇರ, ನಾರಾಯಣ ಟಿ ಅಮೀನ್, ಸುರೇಶ್ ಬಿ ಕರ್ಕೇರ, ಶಿವರಾಮ ಕುಂದರ್, ವೆಂಕಟರಮಣ ಕಿದಿಯೂರು, ವನಜಾ ಜೆ ಪುತ್ರನ್, ಶ್ರೀಮತಿ ವನಜ ಕಿದಿಯೂರು, ಸದಾನಂದ ಬಳ್ಕೂರು, ವೃತ್ತಿಪರ ನಿರ್ದೇಶಕರಾದ ಮಂಜುನಾಥ ಎಸ್. ಕೆ, ಸಿ.ಎ. ಅಜಿತ್ ಕುಮಾರ್, ಹರೀಂದ್ರನಾಥ ಶೆಟ್ಟಿ, ಪಾರ್ಶ್ವನಾಥ ಹಾಗೂ ಬ್ಯಾಂಕಿನ ವ್ಯವಸ್ಥಾಪನಾ ನಿರ್ದೇಶಕರಾದ ಶ್ರೀ ಶರತ್ ಕುಮಾರ್ ಶೆಟ್ಟಿ ಎನ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶಾರಿಕಾ ಕಿರಣ್ ಉಪಸ್ಥಿತರಿದ್ದರು.1000 ಕೋಟಿ ರು. ಠೇವಣಿಯ ಗುರಿ !: 2027-28ನೇ ಸಾಲಿನಲ್ಲಿ ಬ್ಯಾಂಕಿನ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ 1000 ಕೋಟಿ ರು. ಠೇವಣಿ ಸಂಗ್ರಹ ಹಾಗೂ 1 ಲಕ್ಷ ಗ್ರಾಹಕರನ್ನು ಹೊಂದುವ ಗುರಿ ಇದೆ ಎಂದು ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಸುಮಾರು 7.5 ಕೋಟಿ ರು. ವೆಚ್ಚದಲ್ಲಿ ಉಡುಪಿ ಹೃದಯಭಾಗದಲ್ಲಿ ಸ್ವಂತ ಕಟ್ಟಡಕ್ಕೆ ಶೀಘ್ರದಲ್ಲಿಯೇ ಉಡುಪಿ ಶಾಖೆ ಸ್ಥಳಾಂತರಗೊಳ್ಳಲಿದೆ. ಗಂಗೊಳ್ಳಿ ಶಾಖೆ ಸ್ವಂತ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಸುರತ್ಕಲ್ ಶಾಖೆ ಗ್ರಾಹಕರ ಸೇವೆಗಾಗಿ ವಿಸ್ತರಣೆಗೊಳ್ಳುತ್ತಿದ್ದು, ಹೆಜಮಾಡಿ ಶಾಖೆಯನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸುವ ಬಗ್ಗೆಯೂ ನಿರ್ಧರಿಸಲಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಗಾ ಬಸದಿಯಲ್ಲಿ ನೂತನ ಸಭಾಭವನಕ್ಕೆ ಭೂಮಿಪೂಜೆ
ಮಹಿಳೆಯರ ಶಕ್ತಿಗೆ ಸಾಕ್ಷಿಯಾದ ಅದ್ಧೂರಿ ರಥೋತ್ಸವ!