ಮಹಾಲಿಂಗಪುರ ತಾಲೂಕು:ದೀರ್ಘಕಾಲದ ಹೋರಾಟಕ್ಕೆ ಬಿ.ವೈ. ವಿಜಯೇಂದ್ರ ಅಚ್ಚರಿ

KannadaprabhaNewsNetwork |  
Published : Jan 17, 2026, 04:00 AM IST
16 MLP 04 ಫೋಟೋ | Kannada Prabha

ಸಾರಾಂಶ

1378 ದಿನಗಳಿಂದ ನಡೆಯುತ್ತಿರುವ ಮಹಾಲಿಂಗಪುರ ತಾಲೂಕು ಹೋರಾಟ ಅತಿ ದೀರ್ಘಕಾಲದ ಮತ್ತು ಆಶ್ಚರ್ಯದಾಯಕ ಸಂಗತಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

1378 ದಿನಗಳಿಂದ ನಡೆಯುತ್ತಿರುವ ಮಹಾಲಿಂಗಪುರ ತಾಲೂಕು ಹೋರಾಟ ಅತಿ ದೀರ್ಘಕಾಲದ ಮತ್ತು ಆಶ್ಚರ್ಯದಾಯಕ ಸಂಗತಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಶುಕ್ರವಾರ ಮಧ್ಯಾಹ್ನ ಸ್ಥಳೀಯ ತಾಲೂಕು ಹೋರಾಟ ವೇದಿಕೆಗೆ ಭೇಟಿ ನೀಡಿದ ಅವರು, ಹೋರಾಟಗಾರರ ಮನವಿ ಸ್ವೀಕರಿಸಿ ಮಹಾಲಿಂಗಪುರ ಇಡೀ ರಾಜ್ಯದ ಜನರಿಗೆ ಚಿರಪರಿಚಿತವಾಗಿದ್ದು, ನಾನು ಸಹ ಮಹಾಲಿಂಗಪುರ ಹೆಸರನ್ನು ಸಾಕಷ್ಟು ಬಾರಿ ಕೇಳಿದ್ದೇನೆ. ಒಂದೂವರೆ ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ ಮಹಾಲಿಂಗಪುರ ಪಟ್ಟಣ ಸರ್ವ ರೀತಿಯಲ್ಲೂ ತಾಲೂಕು ಘೋಷಣೆಗೆ ಯೋಗ್ಯವಾಗಿದ್ದು, ಸರ್ಕಾರ ಹೋರಾಟಗಾರರ ಮನವಿಗೆ ಇದುವರೆಗೂ ಸ್ಪಂದಿಸದಿರುವುದು ವಿಷಾದನೀಯ. ಆದ್ದರಿಂದ ನಾನು ಈ ವಿಷಯವನ್ನು ಸದನದಲ್ಲಿ ಮಂಡಿಸುತ್ತೇನೆ ಮತ್ತು ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೂ ತಾಲೂಕು ಘೋಷಣೆಯ ಅನಿವಾರ್ಯತೆ ಬಗ್ಗೆ ವಿವರವಾಗಿ ತಿಳಿಸುತ್ತೇನೆ ಎಂದು ಭರವಸೆ ನೀಡಿದರು.

ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಮುಖಂಡರಾದ ಗಂಗಾಧರ ಮೇಟಿ,ಧರೆಪ್ಪ ಸಾಂಗ್ಲೀಕರ, ರಂಗನಗೌಡ ಪಾಟೀಲ, ಸುಭಾಸಗೌಡ ಪಾಟೀಲ, ವಿದ್ಯಾಧರ ಸವದಿ,ಅರ್ಜುನ ಹಲಗಿಗೌಡರ, ಸುಭಾಸ ಶಿರಬೂರ, ನಿಂಗಪ್ಪ ಬಾಳಿಕಾಯಿ, ಶಿವಲಿಂಗ ಟಿರಕಿ, ಮಹಾದೇವ ಮರಾಪುರ, ಮಾರುತಿ ಕರೋಶಿ, ಸಿದ್ದಪ್ಪ ಶಿರೋಳ, ಹಣಮಂತ ಜಮಾದಾರ, ಶಿವಾನಂದ ಅಂಗಡಿ,ಡಿ.ಬಿ.ನಾಗನೂರ, ಮಹಾಲಿಂಗಪ್ಪ ಅವರಾದಿ, ಅಣ್ಣಪ್ಪ ಕಾಮಗೌಡರ, ಈಶ್ವರ ಮುರಗೋಡ, ಪರಪ್ಪ ಬ್ಯಾಕೋಡ, ವಿನೋದ ಉಳ್ಳೆಗಡ್ಡಿ, ದುಂಡಪ್ಪ ಇಟ್ನಾಳ, ಪರಶು ಕೊಣ್ಣೂರ, ರಫೀಕ್ ಮಲದಾರ,ಕರೆಪ್ಪ ಮೇಟಿ, ರಾಜೇಂದ್ರ ಮಿರ್ಜಿ, ಭೀಮಶಿ ಸಸಲಾಟ್ಟಿ, ಬಸಪ್ಪ ಉಳ್ಳಾಗಡಿ, ಕಲೀಲ ಮುಲ್ಲಾ, ಲಕ್ಷ್ಮಣ ಕಿಲಾರಿ, ಚಿದಾನಂದ ಧರ್ಮಟ್ಟಿ, ಹನಮಂತ ರಡರಟ್ಟಿ, ಶರಣು ಹಡಪದ,ಅಲ್ಲಪ್ಪ ದಡ್ಡಿಮನಿ, ಚಿದಾನಂದ ಚಿಂದಿ, ರಾಜು ತೇರದಾಳ, ದುಂಡಪ್ಪ ಚನ್ನಾಳ, ಚನ್ನು ದೇಸಾಯಿ,ಬಂದು ಪಕಾಲಿ, ಮಲ್ಲಪ್ಪ ಸಂಗಣ್ಣವರ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಶ್ನೆಪತ್ರಿಕೆ ಲೀಕ್‌ ಆದರೆ ಪ್ರಿನ್ಸಿಪಾಲ್‌ ವಿರುದ್ಧ ಕೇಸ್‌
ಮಹಾ ಜಿಪಂ ಎಲೆಕ್ಷನ್‌ಗೆ ಮೈಸೂರು ಇಂಕ್‌ ಬಳಕೆ