ಹುಬ್ಬಳ್ಳಿ: ತಾಲೂಕಿನ ವರೂರಿನ ದಿಗಂಬರ ಜೈನ ನವಗ್ರಹ ತೀರ್ಥಕ್ಷೇತ್ರದಲ್ಲಿ 2025ರ ಜನವರಿ 15ರಿಂದ 26ರ ವರೆಗೆ ನಡೆಯಲಿರುವ ಪಾರ್ಶ್ವನಾಥ ಭಗವಾನರ ಮಹಾಮಸ್ತಕಾಭಿಷೇಕಕ್ಕೆ ಬರುವವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ವೆಬ್‌ಸೈಟ್ ಸಿದ್ಧಪಡಿಸಿರುವುದಾಗಿ ನವಗ್ರಹ ತೀರ್ಥಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜರು ಹೇಳಿದರು.
ನೂರಕ್ಕೂ ಅಧಿಕ ಸಮಿತಿ:
ಜನವರಿಯಲ್ಲಿ ನಡೆಯಲಿರುವ ಈ ಮಹಾಮಸ್ತಕಾಭಿಷೇಕ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಇದರಲ್ಲಿ ಜೈನ ಸಾಹಿತ್ಯ ಸಮ್ಮೇಳನ, ಸಂಗೀತ ಕಾರ್ಯಕ್ರಮ, ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಲಕ್ಷಾಂತರ ಜನ ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಆಗಮಿಸುವ ಭಕ್ತರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಸಕಲ ವ್ಯವಸ್ಥೆ ಮಾಡಲು ನೂರಕ್ಕೂ ಅಧಿಕ ಸಮಿತಿಗಳನ್ನು ರಚಿಸಲಾಗುತ್ತಿದೆ.ಎಲ್ಲರೂ ಕೈಜೋಡಿಸಿ
ಈಗಾಗಲೇ ಹಲವು ಪ್ರಮುಖ ಸಮಿತಿಗಳನ್ನು ರಚಿಸಿದ್ದು, ಅವೆಲ್ಲವೂ ಕಾರ್ಯರೂಪದಲ್ಲಿವೆ. ಲೋಕಕಲ್ಯಾಣಕ್ಕಾಗಿ ಹಮ್ಮಿಕೊಳ್ಳಲಾಗುತ್ತಿರುವ ಈ ಮಹಾ ಮಸ್ತಕಾಭಿಷೇಕದ ಯಶಸ್ಸಿಗೆ ನಿತ್ಯವೂ ಅನ್ಯಸಂತರ್ಪಣೆಗೆ ಬೇಕಾದ ದವಸ, ಧಾನ್ಯಗಳನ್ನು ಭಕ್ತರಿಂದ ಸಂಗ್ರಹಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಒಟ್ಟಾರೆ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.ವೆಬಿನಾರ್
ಬಾಲಕರು ಹೃದಯಾಘಾತದಿಂದ ಮರಣ ಹೊಂದುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶೀಘ್ರದಲ್ಲಿಯೇ ನುರಿತ ತಜ್ಞ ವೈದ್ಯರಿಂದ ವೆಬಿನಾರ್ ಮೂಲಕ ಜಾಗೃತಿ ಮೂಡಿಸುವ ಆಲೋಚನೆ ಹಾಕಿಕೊಳ್ಳಲಾಗಿದೆ. ಇನ್ನೊಂದು ವಾರದಲ್ಲಿ ಚರ್ಚಿಸಿ ದಿನಾಂಕ ಘೋಷಿಸುವುದಾಗಿ ಹೇಳಿದರು.