ಮಹನೀಯ ಜಯಂತಿ ಜಾತಿಗೆ ಸೀಮಿತ: ಸುನಿಲ್ ಬೋಸ್ ವಿಷಾದ

KannadaprabhaNewsNetwork | Published : Nov 20, 2024 12:31 AM

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಪರಿವರ್ತನೆಗಾಗಿ ಹಲವು ಗಣ್ಯರು ಆಮೂಲಾಗ್ರ ಆದರ್ಶಗಳನ್ನು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಆದರೆ ಅಂತಹ ಸಮಾಜ ಸುಧಾರಕರು, ತತ್ವಜ್ಞಾನಿಗಳು, ಧಾರ್ಮಿಕ ನಾಯಕರು, ಸಂತರ ಜಯಂತಿಯ ಆಚರಣೆಯ ವೇಳೆ ಅವರ ಜಾತಿಯನ್ನು ಹುಡುಕಿ ಅವರ ಸುಮುದಾಯದವರು ಮಾತ್ರ ಮಹನೀಯರ ಜಯಂತಿಯನ್ನು ಆಚರಿಸಲು ಸೀಮಿತ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಸಮಾಜಕ್ಕೆ ಪರಿವರ್ತನೆಗಾಗಿ ಉತ್ತಮ ಆದರ್ಶಗಳನ್ನು ನೀಡಿರುವ ಹಲವು ಮಹನೀಯರ ಜಯಂತಿಗಳನ್ನು ಒಂದು ಜಾತಿಗೆ ಸೀಮಿತಗೊಳಿಸುತ್ತಿರುವುದು ಅತ್ಯಂತ ಕಳವಳಕಾರಿ. ಇದು ಮಾನವನನ್ನು ಅತ್ಯಂತ ಕುಬ್ಜಗೊಳಿಸುತ್ತದೆ ಎಂದು ಸಂಸದ ಸುನಿಲ್ ಬೋಸ್ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಕಚೇರಿ ಮುಂಭಾಗ ನಡೆದ ಕನಕದಾಸರ 537ನೇ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಪರಿವರ್ತನೆಗಾಗಿ ಹಲವು ಗಣ್ಯರು ಆಮೂಲಾಗ್ರ ಆದರ್ಶಗಳನ್ನು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಆದರೆ ಅಂತಹ ಸಮಾಜ ಸುಧಾರಕರು, ತತ್ವಜ್ಞಾನಿಗಳು, ಧಾರ್ಮಿಕ ನಾಯಕರು, ಸಂತರ ಜಯಂತಿಯ ಆಚರಣೆಯ ವೇಳೆ ಅವರ ಜಾತಿಯನ್ನು ಹುಡುಕಿ ಅವರ ಸುಮುದಾಯದವರು ಮಾತ್ರ ಮಹನೀಯರ ಜಯಂತಿಯನ್ನು ಆಚರಿಸಲು ಸೀಮಿತ ಮಾಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕನಕದಾಸರು ಸಮ ಸಮಾಜದ ನಿರ್ಮಾಣಕ್ಕಾಗಿ ಅಂದಿನ ಕಾಲಘಟ್ಟದಲ್ಲೇ ಹೋರಾಟ ಮಾಡಿದವರು. ಪ್ರಸ್ತುತ ದಿನಗಳಲ್ಲಿ ಅಂಬೇಡ್ಕರ್ ರಚಿತ ಬಲಿಷ್ಟ ಸಂವಿಧಾನವಿದ್ದರೂ ಜಾತೀಯತೆ ಅಳಿಸಲು ಸಾಧ್ಯವಾಗಿಲ್ಲ. ಆದರೆ 500 ವರ್ಷಗಳ ಹಿಂದೆಯೇ ಕನಕದಾಸರು ಮೇಲ್ವರ್ಗ ವಿರುದ್ದ ಸೆಟೆದು ನಿಂತು ಸಮಸಮಾಜದ ನಿರ್ಮಾಣಕ್ಕೆ ಹೋರಾಡಿದ್ದರು. ಎಲ್ಲ ಶೋಷಿತ ಸಮುದಾಯದವರು ಮಹನೀಯರ ಜಯಂತಿಯಲ್ಲಿ ಭಾಗವಹಿಸುವುದರಿಂದ ಅವರು ಸಮಾಜದ ಮುನ್ನೆಲೆಗೆ ಬರಲು ಮನೋಸ್ಥೈರ್ಯ ಹೆಚ್ಚುತ್ತದೆ. ಹಾಗಾಗಿ ತಳಸಮುದಾಯದವರು ಸಾಮಾಜಿಕವಾಗಿ ಮುನ್ನೆಲೆಗೆ ಬರುವ ಮುಖೇನ ತಮ್ಮ ಅಸ್ತಿತ್ವವ್ನನು ಉಳಿಸಿಕೊಳ್ಳಬೇಕು ಸಲಹೆ ನೀಡಿದರು.

ದೊರೆ ಸ್ವಾಮೀಜಿ, ಪುರಸಭಾ ಅಧ್ಯಕ್ಷ ಬಿ. ವಸಂತ, ಸದಸ್ಯರಾದ ಟಿ.ಎಂ. ನಂಜುಂಡಸ್ವಾಮಿ, ಸೋಮಣ್ಣ, ತುಂಬಲ ಪ್ರಕಾಶ್, ಬಾದಾಮಿ ಮಂಜು , ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎಸ್. ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಸವರಾಜು, ಮುಖಂಡರಾದ ದೊಡ್ಡಬಾಗಿಲು ಮಲ್ಲಿಕಾರ್ಜುನ ಸ್ವಾಮಿ, ಗಣೇಶ್, ರಾಮಲಿಂಗಯ್ಯ, ಬಿ. ಮರಯ್ಯ, ಮಾದೇಶ್, ಮಹದೇವಯ್ಯ, ಪ್ರಶಾಂತಬಾಬು, ಪುಟ್ಟಯ್ಯ, ತಹಸೀಲ್ದಾರ್ ಟಿ. ಜಿ. ಸುರೇಶ್ ಆಚಾರ್, ಬಿಇಒ ಶಿವಮೂರ್ತಿ, ಸಮಾಜ ಕಲ್ಯಾಣಾಧಿಕಾರಿ ರಾಮೇಗೌಡ, ಪುರಸಭಾ ಮುಖ್ಯಾಧಿಕಾರಿ ಬಿ.ಕೆ. ವಸಂತಕುಮಾರಿ, ಆರ್.ಐ ಮಹೇಂದ್ರ, ಸಿದ್ದರಾಜು, ನಿತಿನ್, ಅರುಣ್ , ಪ್ರಮೋದ್ ಇದ್ದರು.

Share this article