ವಿಶ್ವಕರ್ಮರು ಸಮಾಜಕ್ಕೆ ಉತ್ತಮ ಸಂಸ್ಕೃತಿ ನೀಡಿದ್ದಾರೆ

KannadaprabhaNewsNetwork |  
Published : Sep 18, 2024, 01:53 AM ISTUpdated : Sep 18, 2024, 01:54 AM IST
6 | Kannada Prabha

ಸಾರಾಂಶ

ಪ್ರತಿಯೊಬ್ಬ ಮನುಷ್ಯನು ಇಂದು ಯಾವುದೇ ಕೆಲಸ ಕಾರ್ಯ ನಿರ್ವಹಿಸಿ ಬದುಕುತ್ತಿರುವುದು ವಿಶ್ವಕರ್ಮರು ಮಾಡಿಕೊಟ್ಟಂತಹ ವಸ್ತುಗಳಿಂದಲೇ.

ಕನ್ನಡಪ್ರಭ ವಾರ್ತೆ ಮೈಸೂರುಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಸಮಾಜಕ್ಕೆ ನೀಡಿದ ಮಹಾಪುರುಷ ವಿಶ್ವಕರ್ಮರು ಎಂದು ಶಾಸಕ ಕೆ. ಹರೀಶ್ ಗೌಡ ಹೇಳಿದರು.ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾಮಂದಿರದ ಕಿರುರಂಗಮoದಿರದಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನು ಇಂದು ಯಾವುದೇ ಕೆಲಸ ಕಾರ್ಯ ನಿರ್ವಹಿಸಿ ಬದುಕುತ್ತಿರುವುದು ವಿಶ್ವಕರ್ಮರು ಮಾಡಿಕೊಟ್ಟಂತಹ ವಸ್ತುಗಳಿಂದಲೇ. ಇಂದಿನ ಯುಗದಲ್ಲಿ ಯಾವುದೆ ಮದುವೆ, ನೆಗಿಲು ಹಿಡಿದು ಹೊಲ ಉಳುಮೆ ಮಾಡಬೇಕಾದರೂ, ಗುಡಿಯಲ್ಲಿ ದೇವರನ್ನಿಟ್ಟು ಪೂಜಿಸಬೇಕಾದರೂ, ಮೂರ್ತಿಯನ್ನು ಕೆತ್ತಲು ವಿಶ್ವಕರ್ಮರ ಅವಶ್ಯಕತೆ ಇದೆ ಎಂದರು.ಭಾರತ ದೇಶದ ಪ್ರಜೆಗಳಲ್ಲಿ ಇರುವಂತಹ ಸಂಸ್ಕಾರಕ್ಕೆ ಮುಖ್ಯ ಕಾರಣಕರ್ತರು ವಿಶ್ವಕರ್ಮರಾಗಿದ್ದು, ಕೇವಲ ವಿಶ್ವಕರ್ಮ ಜನಾಂಗ ಮಾತ್ರವಲ್ಲದೆ ಸರ್ವ ಜನಾಂಗಕ್ಕೂ ಉಪಯೋಗವಾಗುವಂತೆ ಕೆಲಸ ಮಾಡಿದ್ದಾರೆ. ಚಾಮರಾಜ ಕ್ಷೇತ್ರದಲ್ಲಿ ವಿಶ್ವಕರ್ಮ ವೃತ್ತ ಎಂದು ನಾಮಕರಣ ಮಾಡಿ ಅನಾವರಣಗೊಳಿಸಲಾಗಿದೆ ಎಂದು ತಿಳಿಸಿದರು.ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಇಡೀ ಜಗತ್ತಿನಲ್ಲಿ ಕಾಯಕ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಾಜದಲ್ಲಿನ ಶ್ರಮ ಜೀವಿಗಳಿಗೋಸ್ಕರ ಸರ್ಕಾರವು ಜಾರಿಗೆ ತಂದoತಹ ಯೋಜನೆಯೇ ವಿಶ್ವಕರ್ಮ ಯೋಜನೆ. ಜಗತ್ತಿನಲ್ಲಿ ಯಾವುದನ್ನು ಕಾಯಕ ಸಮಾಜ ಎಂದು ಹೇಳುತ್ತೇವೆಯೋ ಆ ಕಾಯಕ ಸಮಾಜವನ್ನು ಮೆಟ್ಟಿ ನಿಲ್ಲುವಂತಹ ಶ್ರಮಜೀವಿಗಳು ವಿಶ್ವಕರ್ಮರು ಎಂದು ಹೇಳಿದರು.ರಘು ಕೌಟಿಲ್ಯ ಮಾತನಾಡಿ, ವಿಶ್ವಕರ್ಮ ಜಯಂತಿ ಎಂದರೆ ಒಗ್ಗಟ್ಟಿನ ದಿನ, ಪಂಚಋಷಿಗಳ ಒಗ್ಗಟ್ಟನ್ನು ಸಾರಿದ ದಿನ. ಒಟ್ಟಿಗೆ ವಿಶ್ವಕರ್ಮ ಸಮುದಾಯದ ಪಂಚ ಗುಂಪುಗಳು ಸೇರಿದ ದಿನವನ್ನು ವಿಶ್ವಕರ್ಮ ಜಯಂತಿ ಎಂದು ಆಚರಿಸುತ್ತೇವೆ ಎಂದು ಹೇಳಿದರು.ವಿಶ್ವಕರ್ಮ ಸಮುದಾಯದವರ ವಿದ್ವತ್ತು. ವಾಸ್ತುಶಿಲ್ಪಕಲೆ ವೈಶಿಷ್ಯವನ್ನು ಸೃಷ್ಟಿ ಮಾಡುವುದರ ಮೂಲಕ ರಾಮಾಯಣ, ಮಹಾಭಾರತ, ದ್ವಾರಕಾ, ಲಂಕಾ ಎಲ್ಲಾವನ್ನು ಸೃಷ್ಟಿ ಮಾಡಿದಂತಹ ಸೃಷ್ಟಿಕರ್ತರಾಗಿದ್ದಾರೆ. ಇಡೀ ಕಾಯಕ ಸಮುದಾಯಗಳಲ್ಲಿ ಅತ್ಯಂತ ಪಾವಿತ್ರ್ಯದಂತಹ ಸಂಸ್ಕೃತಿಯನ್ನು ನೋಡುವಂತಹ ಕೇಳುವಂತಹ ಅನುಭವಿಸುವಂತಹ ಸಮಾಜ ವಿಶ್ವಕರ್ಮ ಸಮುದಾಯ. ಸುಂದರವಾದoತಹ ಬದ್ಧತೆಗೂ ಪರಿಪೂರ್ಣವಾದಂತಹ ಸಮಾಜವನ್ನು ನಿರ್ಮಾಣ ಮಾಡಿದಂತಹ ಕೀರ್ತಿ ವಿಶ್ವಕರ್ಮರಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು.ಜೊತೆಗೆ ವಿಶ್ವಕರ್ಮ ಜಯಂತಿ ಅಂಗವಾಗಿ ಬಸವಣ್ಣ, ಅಮರಶಿಲ್ಪಿ ಜಕಣಚಾರಿ ಹಾಗೂ ಮೈಸೂರಿನ ಭಾಗದವರಾದ ಅಪ್ಪಣ್ಣ, ಕುಂಬಾರ, ಗುಂಡಯ್ಯ ಮಹಾಶರಣಯ್ಯ, ಮಡಿವಾಳ ಮಾಚಯ್ಯ ಅವರಂತಹ ಸಮುದಾಯಗಳು ಸೇರಿ ಸೃಷ್ಟಿಸುವಂತಹದೇ ವಿಶ್ವಕರ್ಮ ಸಮಾಜ. ಬಸವಣ್ಣನ ಕಾಲದಲ್ಲಿ ರೈತರಿಗೆ ಕೃಷಿ ಉಪಕರಣ ಮಾಡಿಕೊಡಲು ಅಕ್ಕಸಾಲಿಗರ ಚೆನ್ನಯ್ಯ ಎಂಬ ವಿಶ್ವಕರ್ಮರು ಇರಲಿಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ ಎಂದು ನೆನೆದರು.ಈ ವೇಳೆ ತುಮಕೂರಿನ ಅಖಿಲ ಕರ್ನಾಟಕ ವಿಶ್ವಕರ್ಮ ಪೀಠದ ಶ್ರೀ ನೀಲಕಂಠಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.ಕಾರ್ಯಕ್ರಮದಲ್ಲಿ ಅಯೋಧ್ಯ ಶ್ರೀರಾಮಲಾಲ ಮೂರ್ತಿ ಕೆತ್ತನೆಯ ಶಿಲ್ಪಿ ಡಾ. ಅರುಣ್ ಯೋಗಿರಾಜ್, ಚಿಂತಕ ಪ್ರೊ.ಸಿ. ನಾಗಣ್ಣ, ಅಂತಾರಾಷ್ಟ್ರೀಯ ಕ್ರೀಡಾಪಟು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಸ್. ರಾಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಹಾಗೂ ಸಮುದಾಯದ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!