ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಮಂಗಳವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯಲ್ಲಿ ಮಾತನಾಡಿದ ಅವರು, ಯಾವುದೇ ನೋವು ಮತ್ತು ಅನ್ಯಾಯದ ವಿರುದ್ಧ ಚಳವಳಿ ನಡೆಯುತ್ತಿದ್ದರೂ ಅಲ್ಲಿ ಶಾಶ್ವತವಾಗಿ ನಾವು ಎರಡು ಭಾವಚಿತ್ರಗಳನ್ನು ಕಾಣುತ್ತೇವೆ. ಒಂದು ಮಹಾತ್ಮ ಗಾಂಧಿ ಅವರದ್ದು ಮತ್ತೊಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರದ್ದು. ಭಾರತ ಕಂಡಂತಹ ಪ್ರಪ್ರಥಮ ಮತ್ತು ಪ್ರಬಲ ಮಹಿಳಾವಾದಿ ಅಂಬೇಡ್ಕರ್ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಎಸ್. ರಾಜಶೇಖರಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಗಾಯಕ ಅಮ್ಮ ರಾಮಚಂದ್ರ ಸಂವಿಧಾನ ಪೀಠಿಕೆಯನ್ನು ಹಾಡಿದರು. ಸಾಂಸ್ಕೃತಿಕ ವೇದಿಕೆಯ ಅಧ್ಯಾಪಕ ಕಾರ್ಯದರ್ಶಿ ಡಾ.ಜಿ.ಬಿ. ದೊರೆಸ್ವಾಮಿ ಸ್ವಾಗತಿಸಿದರು. ಅಧ್ಯಾಪಕ ಖಜಾಂಚಿ ಡಾ. ಅಶ್ವಿನಿ ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕ ಎಂ. ನಂಜುಂಡಯ್ಯ ವಂದಿಸಿದರು.