-ಮಾಘ ಮಳೆಗೆ ಬೆಳೆ ಹಾಳಾಗಿ ಕಂಗಾಲಾದ ರೈತರು । ಭೀಮಾ ನೀರಿನ ವಿಚಾರದಲ್ಲಿ ಮಹಾರಾಷ್ಟ್ರದ ಬೇಕಾಬಿಟ್ಟಿತನ । ಜನರ ಆಕ್ರೋಶ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಜಿಲ್ಲೆಯಲ್ಲಿ ರೈತರ ಪಾಡು ಕೋಳುವವರೆ ಬಲ್ಲ ಎಂಬಂತಾಗಿದೆ. ರೋಹಿಣಿ ಮಳೆಗೆ ಹೆಸರು, ಉದ್ದು ಉತ್ತಿಬಿತ್ತಿ, ಅಲ್ಪ ಹಣ ಮಾಡಿಕೊಳ್ಳಲು ಮುಂದಾಗಿದ್ದ ರೈತರು ಈಗ ಹೈರಾಣಾಗಿದ್ದಾರೆ.
ಮಹಾರಾಷ್ಟ್ರದವರು ಬೇಸಿಗೆಯಲ್ಲಿ ನದಿ ಒಣಗಿದ ನಂತರವೂ ಹನಿ ನೀರು ಬಿಡಲೊಪ್ಪದೆ, ಇದೀಗ ಮಳೆಗಾಲದಲ್ಲಿ ಹೇಳದೆ ಕೇಳದೆ ಲಕ್ಷಾಂತರ ಕ್ಯುಸೆಕ್ ನೀರು ಹರಿಬಿಡ್ತಾರೆ, ಇದನ್ನ ಪ್ರಶ್ನಿಸುವ ಎದೆಗಾರಿಕೆ ಜನನಾಯಕರ ಬಳಿ ಇಲ್ಲ. ಸರ್ಕಾರವೂ ಈ ವಿಷಯವಾಗಿ ಮೌನವಾಗಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಮಳಿಗಾಲದಲ್ಲಿ ನೀರು ಹರಿ ಬಿಡ್ತಾರೆ, ಬೇಸಿಗೆಯಲ್ಲಿ ಇದೇ ಉಜನಿಯಿಂದ ನೀರು ಬಿಡುವುದಿಲ್ಲ, ಆದರೆ, ಮಳೆಗಾಲದಲ್ಲಿ ನೀರು ಬಿಟ್ಟು ನಮ್ಮನ್ನ ಮುಳುಗಿಸುವ ಪ್ರಯತ್ನದಲ್ಲಿದ್ದಾರೆ ಎಂದು ತೇಲ್ಲೂಣಗಿ, ಗಾಣಗಾಪುರ ರೈತರು ಗೋಳಾಡುತ್ತಿದ್ದಾರೆ.
ನಮ್ಮ ಪಾಲಿನ 15 ಟಿಎಂಸಿ ನೀರನ್ನು ಬಳಸುವಲ್ಲಿಯೇ ನಾವು ಮುಗ್ಗರಿಸಿದ್ದೇವೆ. ಈಗ ನೋಡಿದರೆ ಮಹಾರಾಷ್ಟ್ರ ಬೇಕಾಬಿಟ್ಟಿ ನೀರು ಹರಿಬಿಟ್ಟು ತನಗೆ ಯಾರದ್ದೇನು ಅಡಚಣೆ ಇಲ್ಲವೆಂಬಂತೆ ಧೋರಣೆ ತೋರುತ್ತಿದೆ. ಮಹಾರಾಷ್ಟ್ರ ಸರ್ಕಾರದ ಈ ಧೋರಣೆಗೆ ಸರ್ಕಾರ, ಯಾವೊಬ್ಬ ಶಾಸಕರು, ಸಚಿವರು ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ಹೀಗಾಗಿ, ನಮ್ಮ ಗೋಳಿಗೆ ಕೊನೆಯೇ ಇಲ್ಲವೆಂದು ರೈತರು ಗೋಳಾಡುತ್ತಿದ್ದಾರೆ.
ಸದನದಲ್ಲಿ ಮಾತು- ಫಲಶೃತಿ ಶೂನ್ಯ
-----------------
ಮೇಲೆ ಮಳೆ, ಕೆಳಗೆ ಹೊಳೆ ಎಂದು ಬೆಳೆ ಹಾಳಾಗಿ ಗೋಳಾಡುತ್ತಿದ್ದಾರೆ. ಬೇಸಿಗೆಯಲ್ಲಿ ನದಿ ಬತ್ತುತ್ತದೆ, ಕಳೋರಿಲ್ಲ, ಮಳಿಗಾಲದಲ್ಲಿ ಪ್ರವಾಹ ಬರ್ತದೆ ಕೇಳೋರಿಲ್ಲ. ಬೆಳೆ ಹಾಳು. ಹೀಗಾಗಿ ಭೀಮಾ ತೀರದ ರೈತರ ಗೋಳಿಗೆ ಕೊನೆಯೇ ಇಲ್ಲವೆಂಬಂತಾಗಿದೆ. ಜನನಾಯಕರು ಭೀಮಾ ನದಿ ನೀರಿನ ವಿಚಾರದಲ್ಲಿ ಮಹಾ ಮೋಸವನ್ನ ಪ್ರಶ್ನಿಸಬೇಕು, ಅಂತಾರಾಜ್ಯ ವಿವಾದ ಎಂದು ವಿಷಯ ಕೇಂದ್ರದ ಮುಂದಿಟ್ಟು ಗಮನಹರಿಸಬೇಕೆಂದು ಕೋರಿದಾಗ ಮಾತ್ರ ಸಮಸ್ಯೆಗೆ ಪರಿಹಾರ, ಇಲ್ಲದಿದ್ದಲ್ಲಿ ಮಳೆಗಾಲದಲ್ಲಿ ಮುಳಗೋದು, ಬೇಸಿಗೆಯಲ್ಲಿ ಒಣಗೋದು ಎಂದು ರೈತರೇ ಹೇಳುತ್ತಿದ್ದಾರೆ.
---------------ಫೋಟೋ- ಹೆವ್ವಿ ರೇನ್
ಫೋಟೋ- ಎಂಎಲ್‌ಎ ಕಲಬುರಗಿಫೋಟೋ- ಫಾರ್ಮರ್ ಭೀಮಾ