ಜನಸಾಗರದ ಮಧ್ಯೆ ಶರೀಫ ಶಿವಯೋಗಿ, ಗುರುಗೋವಿಂದ ಭಟ್ಟರ ಮಹಾರಥೋತ್ಸವ

KannadaprabhaNewsNetwork |  
Published : Feb 27, 2026, 02:30 AM IST
ಪೊಟೋ ಪೈಲ್ ನೇಮ್  ೨೬ಎಸ್‌ಜಿವಿ೨  ತಾಲೂಕಿನ ಶಿಶುನಾಳ ಗ್ರಾಮದಲ್ಲಿಯ ಶರೀಫ ಸಾಹೇಬರ ಮತ್ತು ಗುರುಗೋವಿಂದ ಭಟ್ಟರ ಮಾಹಾರಥೋತ್ಸವ ಸಾವೀರಾರು ಭಕ್ತರ ಸಡಗರ ಸಂಭ್ರಮದಿAದ ನೇರವೇರಿದ ದ್ರಶ್ಯ.೨೬ಎಸ್‌ಜಿವಿ೨ -೧  ತಾಲೂಕಿನ ಶಿಶುನಾಳ ಗ್ರಾಮದಲ್ಲಿಯ ಶರೀಫ ಸಾಹೇಬರ ಮತ್ತು ಗುರುಗೋವಿಂದ ಭಟ್ಟರ ಮಾಹಾರಥೋತ್ಸವದಲ್ಲಿ ರಥೋತ್ಸವದಲ್ಲಿ ಪಾಲ್ಗೋಂಡ ಭಕ್ತ ಸಮೂಹದ ದೃಶ್ಯ.೨೬ಎಸ್‌ಜಿವಿ೨ -೨ ತಾಲೂಕಿನ ಶಿಶುನಾಳ ಗ್ರಾಮದಲ್ಲಿಯ ಶರೀಫ ಸಾಹೇಬರ ಮತ್ತು ಗುರುಗೋವಿಂದ ಭಟ್ಟರ ದೇವಸ್ಥಾನದ ಮುಂದೆ ಡೋಳ್ಳು ಕುಣಿತದ ದೃಶ್ಯ. | Kannada Prabha

ಸಾರಾಂಶ

ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮದ ಪಂಚಾಗ್ನಿಮಠದಲ್ಲಿ ಸಂತ ಶಿಶುವಿನಹಾಳ ಶರೀಫ ಶಿವಯೋಗಿಗಳ ಹಾಗೂ ಗುರುಗೋವಿಂದ ಭಟ್ಟರ ಮಹಾರಥೋತ್ಸವ ಸಾವಿರಾರು ಭಕ್ತರ ಸಡಗರದ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.

ಶಿಗ್ಗಾಂವಿ: ತಾಲೂಕಿನ ಶಿಶುವಿನಹಾಳ ಗ್ರಾಮದ ಪಂಚಾಗ್ನಿಮಠದಲ್ಲಿ ಸಂತ ಶಿಶುವಿನಹಾಳ ಶರೀಫ ಶಿವಯೋಗಿಗಳ ಹಾಗೂ ಗುರುಗೋವಿಂದ ಭಟ್ಟರ ಮಹಾರಥೋತ್ಸವ ಸಾವಿರಾರು ಭಕ್ತರ ಸಡಗರದ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.ವಿವಿಧ ತಾಲೂಕಿನ ದೂರ, ದೂರದ ಗ್ರಾಮಗಳಿಂದ ತಂಡೋಪ ತಂಡವಾಗಿ ಸಾವಿರಾರು ಭಕ್ತರು ಆಗಮಿಸಿದ್ದರು. ಪ್ರತಿ ವರ್ಷ ನಡೆಯುವ ಅವರ ಜಾತ್ರಾ ಮಹೋತ್ಸವದಂದು ಮಹಾರಥೋತ್ಸವಕ್ಕೆ ಎತ್ತಿನ ಬಂಡಿ ಮೂಲಕ ಹರಿದು ಬರುವ ಸಾವಿರಾರು ಭಕ್ತರಲ್ಲಿ ಅನೇಕರು ಚಿಲುಮೆ ಸೇವನೆ ಮಾಡಿ ಶರೀಫರನ್ನು ಸ್ಮರಿಸಿದ್ದು ಸಾಮಾನ್ಯವಾಗಿತ್ತು. ಶರೀಫ ಗಿರಿಯಲ್ಲಿ ಬೆಳಗ್ಗೆಯಿಂದ ನಡೆಯುವ ಧಾರ್ಮಿಕ ವಿಧಿವಿಧಾನಗಳ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತರು ಭಕ್ತಿಯಿಂದ ಕಟ್ಟಿಕೊಂಡು ಬಂದ ಅನ್ನದ ಬುತ್ತಿಯನ್ನೆ ಪ್ರಸಾದ ರೂಪದಲ್ಲಿ ನೀಡುತ್ತಾರೆ. ಅನ್ನ ಪ್ರಸಾದವನ್ನು ಪಡೆಯಲು ಬಂದವರು ನೂಕುನುಗ್ಗಲು ಮಧ್ಯದಲ್ಲಿ ಪಡೆಯುವ ದೃಶ್ಯ ಸಹಜವಾಗಿತ್ತು.ವಿಶ್ವಸ್ಥ ಸಮಿತಿಯ ಧರ್ಮದರ್ಶಿಗಳು, ಜನ ಪ್ರತಿನಿಧಿಗಳು ಹಾಗೂ ಮಠಾಧೀಶರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಗ್ಗಾಂವಿ ಪೊಲೀಸರು ಸೂಕ್ತ ಬಂದೋ ಬಸ್ತ್ ಕಲ್ಪಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮದ ದಾರಿಯಲ್ಲಿ ನಡೆದರೆ ಮಾತ್ರ ಸುಖಿ ಜೀವನ: ದೊಡ್ಡನಗೌಡ ಪಾಟೀಲ
ಪೊಲೀಸರು, ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ