ರಾಮಾರೂಢ ಮಠದ ಸಂಭ್ರಮದ ಮಹಾರಥೋತ್ಸವ

KannadaprabhaNewsNetwork |  
Published : Mar 06, 2024, 02:17 AM IST
ಮಹಾರಥೋತ್ಸವ  | Kannada Prabha

ಸಾರಾಂಶ

ಕಲಾದಗಿಯಲ್ಲಿ ಶ್ರೀ ಸದ್ಗುರು ರಾಮಾರೂಢ ಮಹಾಸ್ವಾಮಿಗಳ ೬೧ನೇ ಪುಣ್ಯಾರಾಧನೆ ಹಾಗೂ ಜಾತ್ರಾಮಹೋತ್ಸವ ವಾರಗಳ ಕಾಲ ಶ್ರೀ ಮಠದಲ್ಲಿ ಸಂಭ್ರಮದಿಂದ ಜರುಗಿತು.

ಕಲಾದಗಿ: ಶ್ರೀ ಸದ್ಗುರು ರಾಮಾರೂಢ ಮಹಾಸ್ವಾಮಿಗಳ ೬೧ನೇ ಪುಣ್ಯಾರಾಧನೆ ಹಾಗೂ ಜಾತ್ರಾಮಹೋತ್ಸವ ಶ್ರದ್ಧೆ, ಭಕ್ತಿಯಿಂದ ಒಂದು ವಾರದಿಂದ ಶ್ರೀ ಮಠದಲ್ಲಿ ಜರುಗಿತು. ಶುಕ್ರವಾರ ಸಂಜೆ ಸಾವಿರಾರು ಭಕ್ತರ ಮಧ್ಯೆ ಮಹಾರಥೋತ್ಸವ ಜರುಗಿತು. ರಾಯಚೂರು-ಬೆಳಗಾವಿ ಹೆದ್ದಾರಿ ಪಕ್ಕ ಛಬ್ಬಿ ಕ್ರಾಸ್ ಬಳಿ ಇರುವ ಶ್ರೀ ರಾಮಾರೂಢ ಮಠದಲ್ಲಿ ಫೆ.೨೬ರಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ, ದಿನನಿತ್ಯ ವಿಷಯಾಧರಿತ ಶಾಸ್ತ್ರ ಪ್ರವಚನ, ಶ್ರೀ ಪರಮರಾಮಾರೂಢ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆದವು.ಮಾ.೫ರಂದು ಶ್ರೀ ಪರಮ ರಾಮಾರೂಢ ಮಹಾಸ್ವಾಮಿಗಳ ಕಿರೀಟ ಮಹಾಪೂಜೆ ನಡೆದು, ಶ್ರೀ ಪಲ್ಲಕ್ಕಿ ಮಹೋತ್ಸವ ನಡೆಯಿತು, ಸಂಜೆ ಸಾವಿರಾರು ಭಕ್ತರ ಜಯಘೋಷದ ಮಧ್ಯೆ ಮಹಾರಥೋತ್ಸವ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ
ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?