24ರಿಂದ ನೀಲಗುಂದ ಗುದ್ನೇಶ್ವರ ಮಠದಲ್ಲಿ ಮಹಾ ಶಿವರಾತ್ರಿ

KannadaprabhaNewsNetwork |  
Published : Feb 21, 2025, 11:45 PM IST
ಲಿಂ. ಗುದ್ನೇಶ್ವರ ಸ್ವಾಮಿಗಳು ಜ್ಞಾನಗಿರಿ ನೀಲಗುಂದ | Kannada Prabha

ಸಾರಾಂಶ

ಸಮೀಪದ ನೀಲಗುಂದ ಗ್ರಾಮದಲ್ಲಿ ಫೆ. 24, 25, 26ರಂದು ದಿವ್ಯ ಚೇತನ ಟ್ರಸ್ಟ ಜ್ಞಾನಗಿರಿ ಗುದ್ನೇಶ್ವರಮಠದ ಆವರಣದಲ್ಲಿ ಮಹಾಶಿವರಾತ್ರಿ ಕಾರ್ಯಕ್ರಮ ನೆರವೇರುವದು.

ಕನ್ನಡಪ್ರಭ ವಾರ್ತೆ ಮುಳಗುಂದ

ಸಮೀಪದ ನೀಲಗುಂದ ಗ್ರಾಮದಲ್ಲಿ ಫೆ. 24, 25, 26ರಂದು ದಿವ್ಯ ಚೇತನ ಟ್ರಸ್ಟ ಜ್ಞಾನಗಿರಿ ಗುದ್ನೇಶ್ವರಮಠದ ಆವರಣದಲ್ಲಿ ಮಹಾಶಿವರಾತ್ರಿ ಕಾರ್ಯಕ್ರಮ ನೆರವೇರುವದು.

ಫೆ.24ರಂದು ಬೆಳಗ್ಗೆ 10ಕ್ಕೆ ರಕ್ತದಾನ ಶಿಬಿರ ಹಾಗೂ ಗದಗ ಜಿಲ್ಲಾ ವೈದ್ಯಕೀಯ ಸಂಸ್ಥೆ ಮತ್ತು ಜಿಲ್ಲಾ ಆಸ್ಪತ್ರೆ ಇವರ ಸಹಯೋಗದಲ್ಲಿ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30ಕ್ಕೆ ದಿವ್ಯ ಚೇತನ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ. ಸಾನ್ನಿಧ್ಯವನ್ನು ಶಲವಡಿ ವಿರಕ್ತಮಠದ ಗುರುಶಾಂತ ಸ್ವಾಮಿಗಳು ವಹಿಸಿಕೊಳ್ಳುವರು. ಮುಖ್ಯ ಅತಿಥಿಗಳಾಗಿ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಎಚ್. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಡಿಡಿಪಿಐ. ಆರ್.ಎಸ್. ಬುರಡಿ, ಗದಗ ಗ್ರಾಮೀಣ ಬಿಇಓ ವಿ.ವಿ. ನಡುವಿನಮನಿ, ಚಿಕ್ಕಟ್ಟಿ ಶಾಲೆ ಸಂಸ್ಥಾಪಕ ಎಸ್.ವಾಯ್. ಚಿಕ್ಕಟ್ಟಿ, ನಾಗರಾಜ ಯಂಡಿಗೇರಿ, ಶರಣು ರಡ್ಡೇರ, ದಾನಿ ಮೇಡಮ್, ಗಿರೀಶ ಡಬಾಲಿ, ಬಸವರಾಜ ಪಲ್ಲೇದ, ಸಂಜಯ ನೀಲಗುಂದ ಇತರರು ಭಾಗವಹಿಸಲಿದ್ದಾರೆ. ಫೆ.25ರಂದು ಸಂಜೆ 6.30ಕ್ಕೆ ಅನುಭಾವ ಗೋಷ್ಠಿ ಕಾರ್ಯಕ್ರಮ ನೆರವೇರಲಿದ್ದು, ಸಾನಿಧ್ಯವನ್ನು ಮುಳಗುಂದ ಗವಿಮಠ, ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು, ಉದ್ಘಾಟಕರಾಗಿ ವಿಪ ಸದಸ್ಯ ಎಸ್.ವಿ. ಸಂಕನೂರ ಆಗಮಿಸುವರು. ಮಾಜಿ ಶಾಸಕ ಡಿ.ಆರ್. ಪಾಟೀಲ ಅಧ್ಯಕ್ಷತೆ, ಮುಖ್ಯ ಅಥಿತಿಗಳಾಗಿ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಅತಿಥಿಗಳಾಗಿ ಎಸ್.ಎಂ.ನೀಲಗುಂದ, ಮಲ್ಲಿಕಾರ್ಜುನ ಸುರಕೋಡ, ರಾಮಣ್ಣ ಕಮಾಜಿ, ಯಲ್ಲಪ್ಪ ಅದರಗುಂಚಿ, ಚನ್ನಬಸಪ್ಪ ಕತ್ತಿ, ಶಿವಪ್ಪ ಕೋಳಿವಾಡ ಭಾಗವಹಿಸಲಿದ್ದಾರೆ. ಶಶಿಕಲಾ ಪೂಜಾರ, ಬೊಂಬಾಟ್ ಬಸಣ್ಣ, ಲಲಿತಾ ಕುರಹಟ್ಟಿ ಇವರಿಗೆ ಸನ್ಮಾನ ನಡೆಯಲಿದೆ. ಫೆ. 26ರಂದು ಸಂಜೆ 6.30ಕ್ಕೆ ಮಹಾಶಿವರಾತ್ರಿ ಜಾಗರಣೆ ಕಾರ್ಯಕ್ರಮ ನೆರವೇರಲಿದ್ದು, ಹೊಸಳ್ಳಿ ಬೂದೀಶ್ವರ ಮಠದ ಅಭಿನವ ಬೂದೀಶ್ವರ ಸ್ವಾಮಿಗಳು ಹಾಗೂ ಬೆಳ್ಳಟ್ಟಿ ರಾಮಲಿಂಗೇಶ್ವರ ಮಠದ ಬಸವರಾಜ ಸ್ವಾಮೀಜಿ ಸಾನಿಧ್ಯ ವಹಿಸುವರು. ಉದ್ಘಾಟನೆ ಸೂರಜ ಅಳವಂಡಿ, ಮುಖ್ಯ ಅತಿಥಿಗಳಾಗಿ ಕಾನೂನು, ಪ್ರವಾಸೋದ್ಯಮ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ, ಅಧ್ಯಕ್ಷರಾಗಿ ಅಗ್ನಿಶಾಮಕ ಮತ್ತು ತುರ್ತುಸ್ಥಿತಿ ವಿಭಾಗದ ಡಿಆಯ್‌ಜಿಪಿ ರವಿ ಚನ್ನಣ್ಣವರ, ಗೌರಮ್ಮ ಬಡ್ನಿ, ಅಪ್ಪಣ್ಣ ಇನಾಮತಿ, ಎಂ.ಡಿ. ಬಟ್ಟೂರ, ಡಾ. ಎಸ್.ಸಿ. ಚವಡಿ, ಸಿದ್ದಲಿಂಗೇಶ್ವರ ಪಾಟೀಲ ಭಾಗವಹಿಸುವರು. ಈ ಸಂದರ್ಭದಲ್ಲಿ ಅಹೋರಾತ್ರಿ ಶಹನಾಯಿ, ಸಂಗೀತ ಕಾರ್ಯಕ್ರಮ, ಮ್ಯಾಜಿಕ್ ಪ್ರದರ್ಶನ ಹಾಗೂ ಹಾಸ್ಯ ಕಾರ್ಯಕ್ರಮಗಳು ಜಾಗರಣೆ ಅಂಗವಾಗಿ ನಡೆಯಲಿದೆ. ಕಾರಣ ಈ ಎಲ್ಲ ಕಾರ್ಯಕ್ರಮಕ್ಕೆ ತಾವು ಆಗಮಿಸಿ ಶೋಭೆ ತರಬೇಕೆಂದು ಗುದ್ನೇಶ್ವರ ಮಠದ ಪ್ರಭುಲಿಂಗದೇವರು ವಿನಂತಿಸಿದ್ದಾರೆ.21ಜಿಡಿಜಿ5

ಲಿಂ. ಗುದ್ನೇಶ್ವರ ಸ್ವಾಮಿಗಳು ಜ್ಞಾನಗಿರಿ ನೀಲಗುಂದ21ಜಿಡಿಜಿ5ಎ

ಪ್ರಭುಲಿಂಗದೇವರು ಗುದ್ನೇಶ್ವರಮಠ ನೀಲಗುಂದ.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ