ಕನ್ನಡಪ್ರಭ ವಾರ್ತೆ ಮಹಾಲಿಂಗಪುರಕಠೋರವಾದ ತಪಸಿಗೆ ಒಳಿಯದ ದೇವರಿಲ್ಲ ಎನ್ನುವ ನಾನ್ನುಡಿಯಂತೆ ಅಂದಿನ ಕಾಲದಲ್ಲಿ ಜಗತ್ತಿನ ಜೀವ ರಾಶಿಗಳ ದಾಹ ತೀರಿಸಲು ಕಠೋರ ತಪಸ್ಸು ಮಾಡಿ ಗಂಗೆಯನ್ನು ಧರೆಗಿಳಿಸಿ ಸಕಲ ಜೀವ ರಾಶಿಗಳ ದಾಹ ತೀರಿಸಿದ ಭಗವಂತ ಭಗೀರಥ ಎಂದು ಸ್ಥಳೀಯ ಭಗೀರಥ ಸಮುದಾಯದ ಮುಖಂಡ ಮಹಾಲಿಂಗಪ್ಪ ಲಾತೂರ ಹೇಳಿದರು.
ಪುರಸಭೆ ಸದಸ್ಯ ಶೇಖರ ಅಂಗಡಿ ಮಾತನಾಡಿ, ಕಾಡುಪಾಲದ ಅಶಿತ ಮಹಾರಾಜನ ವೀರ ಪುತ್ರನಾದ ಸಗರ ಮಹಾರಾಜನಿಂದ ಮುಂದುವರಿದ ಸೂರ್ಯವಂಶ ಸಗರ ಮಹಾರಾಜನ ಮೊದಲನೇ ಹೆಂಡತಿ ವಿಧರ್ಭ ರಾಜನ ಮಗಳು ಕೇಶನಿ. ಅರಿಷ್ಠೆಮಿ ರಾಜನ ಮಗಳೇ ಸುಮತಿ ಸಗರ ರಾಜನ ಎರಡನೇ ಹೆಂಡತಿಯಾಗಿದ್ದಳು. ಅಯೋಧ್ಯ ರಾಜ್ಯವನ್ನು ಆಳುತ್ತಿದ್ದ ಸಗರ ಮಹಾರಾಜ 99 ಬಾರಿ ಅಶ್ವಮೇಧ ಯಾಗ ಮಾಡಿ, ಪುತ್ರ ಸಂತಾನವಿಲ್ಲದೆ ಮನನೊಂದು ರಾಜ್ಯ ತೊರೆದು ಬೃಗು ಪ್ರಸ್ರವಣ ಪ್ರದೇಶದಲ್ಲಿ ಪುತ್ರ ಸಂತಾನಕ್ಕಾಗಿ ಇಬ್ಬರೂ ಪತ್ನಿಯರ ಸಮೇತ ತಪಸ್ಸು ಮಾಡಿ ಬೃಗು ಋಷಿಯ ವರ ಪಡೆದು ಅಂಶುಮಾನ ಎಂಬ ಪುತ್ರನನ್ನು ಪಡೆದರು. ಅಂಶುಮಾನ ಮಗನಾಗಿ ದಿಲೀಪ, ದಿಲೀಪನ ಮಗನಾಗಿ ಹುಟ್ಟಿದವನೇ ಲೋಕಕಲ್ಯಾಣ ಕಾರಕ ಭಗೀರಥ ಎಂದರು.
ಪುರಸಭೆ ಸದಸ್ಯರಾದ ರವಿ ಜವಳಗಿ ಮಾತನಾಡಿ, ಬ್ರಹ್ಮದೇವ ವರಕೊಟ್ಟ ಫಲವಾಗಿ ಪಾತಾಳದ ಕಡೆಗೆ ಹರಿಯುತ್ತಿರುವ ಗಂಗೆಯು ಋಷಿ ಜಹ್ನುವಿನ ಆಶ್ರಮವನ್ನು ಮುಳುಗಿಸಿತು. ದೇವಿಯ ಅಹಂಕಾರ ಶಿಕ್ಷಿಸಲು ಋಷಿ ನದಿಯನ್ನು ನುಂಗಿದ. ಭಗೀರಥನ ಒತ್ತಾಯದ ಮನವಿಯಿಂದಲೇ ಋಷಿಯು ತನ್ನ ಕಿವಿಯ ಮೂಲಕ ನದಿಯನ್ನು ಹೊರಗೆ ತಳ್ಳಲು ಒಪ್ಪಿಗೆ ನೀಡಿದ ಇದು ಭಗೀರಥರ ಪ್ರಯತ್ನದ ಫಲ ಎಂದರು.ಈ ಸಂಧರ್ಭದಲ್ಲಿ ಮುತ್ತಪ್ಪ ಲಾತುರ, ಲಕ್ಕಪ್ಪ ಲಾತೂರ, ಗಂಗಪ್ಪ ಲಾತೂರ, ಮಲ್ಲಪ್ಪ ಲಾತೂರ, ಮಹಾದೇವ ಬೆಳವಣಿಕಿ, ಲಕ್ಷ್ಮಣ ಮುಗಳಖೊಡ, ಮಹಾಂತೇಶ ಸಣಕಲ, ನಿಂಗಪ್ಪ ಉಸುಳಿ, ಮಹಾಲಿಂಗಪ್ಪ ಲಾತೂರ, ಬಾಳು ಮನ್ನಿಕೇರಿ ಸೇರಿ ಹಲವರು ಇದ್ದರು.