ಯಲಬುರ್ಗಾ: ರಾಜನಹಳ್ಳಿಯಲ್ಲಿ ಜರುಗಲಿರುವ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕಾಧ್ಯಕ್ಷ ಯಲ್ಲಪ್ಪ ಹಡಗಲಿ ಹೇಳಿದರು.
ಫೆ. 8 ಮತ್ತು 9ರಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನಡೆಯಲಿದೆ. ಜಾತ್ರೆ ಹಾಗೂ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಮತ್ತು ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಿಎಂ ಸಿದ್ದರಾಮಯ್ಯನ ಸೇರಿದಂತೆ ಸಚಿವರು,ಸಮಾಜದ ರಾಜ್ಯಮಟ್ಟದ ಗಣ್ಯರು ಭಾಗವಹಿಸುವವರು. ವಾಲ್ಮೀಕಿ ಸಮಾಜದ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಜಾತ್ರೆ ನಡೆಯಲಿದೆ.ಹೀಗಾಗಿ ಸಮಾಜದ ಬಾಂಧವರು ತನು-ಮನ-ಧನ ಸಹಾಯ ಸಹಕಾರ ನೀಡಬೇಕು ಎಂದರು.
ತಾಲೂಕಿನಲ್ಲಿ ಸಮಾಜದ ಸಂಘಟನೆಯಲ್ಲಿ ಯಾವುದೇ ಗೊಂದಲವಿಲ್ಲ.ಗುರುಪೀಠದ ಅಡಿಯಲ್ಲಿ ಇರುವುದೇ ಇದೇ ಘಟಕವಾಗಿದೆ.ಬೇರೆ ಬೇರೆ ಸಂಘಟನೆಗಳು ಜನರ ಹಾದಿ ತಪ್ಪಿಸುತ್ತಿವೆ.ಜನತೆ ಸಂಘಟಿತರಾಗಬೇಕು. ಸಮಾಜ ಆರ್ಥಿಕ,ಸಾಮಾಜಿಕ,ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದರು.ಈ ಸಂದರ್ಭ ವಾಲ್ಮೀಕಿ ಗುರುಪೀಠದ ಮಠದ ತಾಲೂಕು ಧರ್ಮದರ್ಶಿ ಫಕೀರಪ್ಪ ತಳವಾರ್, ಜಾತ್ರಾ ಸಮಿತಿ ಅಧ್ಯಕ್ಷ ಯಮನೂರಪ್ಪ ತಳವಾರ್, ಶರಣಪ್ಪ ಹೊಸ್ಕೇರಿ, ದ್ಯಾಮಣ್ಣ ಗೌಡ್ರ, ಶ್ರೀಕಾಂತಗೌಡ ಮಾಲಿಪಾಟೀಲ್, ಕಳಕಪ್ಪ ತಳವಾರ್, ಕನಕಪ್ಪ ಪೂಜಾರ, ಮುದಕಪ್ಪ ಆಡಿನ, ಬಸವರಾಜ ಜಂಬಾಳಿ, ಭೀಮಣ್ಣ ಹವಳಿ, ಶಂಕರಗೌಡ ಸಾಲಭಾವಿ, ಮಾನಪ್ಪ ತಲ್ಲೂರು ಇತರರು ಇದ್ದರು.