ಸಂಸ್ಕೃತಿ ಉಳಿಯುವಲ್ಲಿ ಮಹರ್ಷಿ ವಾಲ್ಮೀಕಿ ಕೊಡುಗೆ ಅಪಾರ

KannadaprabhaNewsNetwork |  
Published : Oct 08, 2025, 01:01 AM IST
ಪೊಟೊ ಶಿರ್ಷಕೆ07ಎಚ್‌ಕೆಆರ್ 01 | Kannada Prabha

ಸಾರಾಂಶ

ದೇಶದಲ್ಲಿ ನಮ್ಮ ಸಂಸ್ಕೃತಿ, ಧಾರ್ಮಿಕತೆ, ಆಚಾರ ವಿಚಾರಗಳು ಇನ್ನೂ ಗಟ್ಟಿಯಾಗಿ ಉಳಿದುಕೊಳ್ಳಲು ಶ್ರೀ ಮಹರ್ಷಿ ವಾಲ್ಮೀಕಿಯಂತಹ ಮಹನೀಯರ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.

ಹಿರೇಕೆರೂರು: ದೇಶದಲ್ಲಿ ನಮ್ಮ ಸಂಸ್ಕೃತಿ, ಧಾರ್ಮಿಕತೆ, ಆಚಾರ ವಿಚಾರಗಳು ಇನ್ನೂ ಗಟ್ಟಿಯಾಗಿ ಉಳಿದುಕೊಳ್ಳಲು ಶ್ರೀ ಮಹರ್ಷಿ ವಾಲ್ಮೀಕಿಯಂತಹ ಮಹನೀಯರ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ಪಟ್ಟಣದ ಸರ್ವಜ್ಞ ಕಲಾ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪಟ್ಟಣ ಪಂಚಾಯತ್, ಸಮಾಜಕಲ್ಯಾಣ ಇಲಾಖೆ ಹಾಗೂ ತಾಲೂಕು ವಾಲ್ಮೀಕಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.ಮಹರ್ಷಿ ವಾಲ್ಮೀಕಿಯವರ ಸಂಪೂರ್ಣ ಜೀವನವು ದುಷ್ಟ ಕಾರ್ಯಗಳನ್ನು ತ್ಯಜಿಸಲು ಮತ್ತು ಒಳ್ಳೆಯ ಕಾರ್ಯಗಳು ಮತ್ತು ಭಕ್ತಿಯ ಮಾರ್ಗವನ್ನು ಅನುಸರಿಸಲು ದಾರಿ ಮಾಡಿಕೊಡುತ್ತದೆ. ಈ ಮಹಾನ್ ಸಂದೇಶವನ್ನು ಜನರಿಗೆ ಹರಡಲು ಹಾಗೂ ಅವರಿಗೆ ಗೌರವವನ್ನು ಸಲ್ಲಿಸುವುದಕ್ಕಾಗಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ. ಹಿಂದುಳಿದ ಹಾಗೂ ಶೋಷಿತ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಮೂಲಕ ಅವರನ್ನು ಸಾಮಾಜಿಕ, ಶೈಕ್ಷ ಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿಗೊಳಿಸುವ ಸಲುವಾಗಿ ಮಹರ್ಷಿ ವಾಲ್ಮೀಕಿ ಶ್ರಮಿಸಿದರು.ತಹಸೀಲ್ದಾರ್ ಎಂ.ರೇಣುಕಾ ಮಾತನಾಡಿ, ಮಹರ್ಷಿ ವಾಲ್ಮೀಕಿಯು ಸಂಸ್ಕೃತದಲ್ಲಿ ಮೊಟ್ಟ ಮೊದಲು ರಚಿಸಿರುವ ರಾಮಾಯಣವೆಂಬ ಮಹಾಗ್ರಂಥದ ಚರಿತ್ರೆಯನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡು ಪರಿವರ್ತನಾ ಜೀವನ ನಡೆಸುವ ಮೂಲಕ ಗುರಿ ಸಾಧನೆಗೆ ಮುಂದಾಗಬೇಕು. ಅವರ ತತ್ವ ಆದರ್ಶಗಳನಪ್ರತಿಯೊಬ್ಬರೂ ಪಾಲನೆ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದರು.ಈ ಸಂದರ್ಭದಲ್ಲಿ ಪಪಂ ಮುಖಾಯಧಿಕಾರಿ ಕೋಡಿ ಭಿಮರಾಯ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ್, ತಾ.ಪಂ ಕಾರ್ಯನಿರ್ವಾಕಾಧಿಕಾರಿ ರವಿ ಎನ್., ಸಮಾಜಕಲ್ಯಾಣ ಸಹಾಯಕ ನಿರ್ದೇಶಕ ಗಿರೀಶ ಮುಡಿಯಮ್ಮನವರ, ಎಚ್.ಎಚ್. ಜಾಡರ, ಪ.ಪಂ. ಅಧ್ಯಕ್ಷೆ ಸುಧಾ ಚಿಂದಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ಪ.ಪಂ. ಉಪಾಧ್ಯಕ್ಷ ರಾಜು ಕರಡಿ ಸದಸ್ಯರಾದ ಕವಿತಾ ಹರ‍್ನಳ್ಳಿ, ರಜಿಯಾ ಅಸದಿ, ಬಸವರಾಜ ಕಟ್ಟಿಮನಿ, ಮುಖಂಡರಾದ ಜಿ.ಎಚ್. ತಳವಾರ, ಎನ್.ಎಂ. ಈಟೇರ, ರಮೇಶ ಹುಲ್ಲತ್ತಿ, ಮಾರುತಿ ಕನವಳ್ಳಿ, ಹುಚ್ಚಪ್ಪ ಗೋಣೆರ್, ರಮೇಶ ಮಾಳಮ್ಮನವರ, ಹೊನ್ನಪ್ಪ ಸಾಲಿ, ಅಂಜನಯ್ಯ ಬಿ ಅರ್., ಮಂಜು ಶಿವನಕ್ಕನವರ, ವೀರಭದ್ರಗೌಡ ಗೌಡರ, ಪ್ರೇಮಾ ಇಳಗೇರ, ಗಣೇಶ ನಾಯಕ, ಜೆ. ರೇಷ್ಮಾ, ಬಿ.ಆರ್,ರುದ್ರಗೌಡ, ದೊಡ್ಡಮಲ್ಲಪ್ಪನವರ, ರಾಜು ಮಾದರ ಸೇರಿದಂತೆ ಸಮಾಜದ ಮುಖಂಡರು ಸಿಬ್ಬಂದಿ ಇದ್ದರು.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ