ಮಹರ್ಷಿ ವೇದವ್ಯಾಸರ ಜಯಂತಿ ಸರ್ಕಾರದಿಂದ ಆಚರಿಸಬೇಕು: ಜೆ.ಬಿ. ಗಾರವಾಡ

KannadaprabhaNewsNetwork |  
Published : Jul 25, 2025, 01:12 AM IST
ಗದಗ ಉಡಚಮ್ಮದೇವಿ ಗುಡಿ ಓಣಿಯಲ್ಲಿ ಆದಿಕುಲಗುರು ಮಹರ್ಷಿ ಶ್ರೀ ವೇದವ್ಯಾಸರ ಜಯಂತಿಯನ್ನ ಆಚರಿಸಲಾಯಿತು. | Kannada Prabha

ಸಾರಾಂಶ

ಗದಗ ನಗರದ ಉಡಚಮ್ಮದೇವಿ ಗುಡಿ ಓಣಿಯಲ್ಲಿ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ವಿವಿಧೋದ್ದೇಶಗಳ ಸೇವಾ ಟ್ರಸ್ಟ್ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದಿಂದ ಆದಿಕುಲಗುರು ಮಹರ್ಷಿ ಶ್ರೀ ವೇದವ್ಯಾಸರ ಜಯಂತಿ ಆಚರಿಸಲಾಯಿತು.

ಗದಗ: ಮಹರ್ಷಿ ವೇದವ್ಯಾಸರ ಕುರಿತು ಶೈಕ್ಷಣಿಕ ಪಠ್ಯದಲ್ಲಿ ಸೇರಿಸಬೇಕು ಹಾಗೂ ರಾಜ್ಯ ಸರ್ಕಾರದಿಂದ ಅವರ ಜಯಂತಿ ಆಚರಿಸಬೇಕು ಎಂದು ಅಂಬಿಗರ ಚೌಡಯ್ಯ ವಿವಿಧೋದ್ದೇಶಗಳ ಸೇವಾ ಟ್ರಸ್ಟ್‌ ಜಿಲ್ಲಾಧ್ಯಕ್ಷ ಜೆ.ಬಿ. ಗಾರವಾಡ ಆಗ್ರಹಿಸಿದರು. ನಗರದ ಉಡಚಮ್ಮದೇವಿ ಗುಡಿ ಓಣಿಯಲ್ಲಿ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ವಿವಿಧೋದ್ದೇಶಗಳ ಸೇವಾ ಟ್ರಸ್ಟ್ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದಿಂದ ನಡೆದ ಆದಿಕುಲಗುರು ಮಹರ್ಷಿ ಶ್ರೀ ವೇದವ್ಯಾಸರ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು. ನಮ್ಮ ಸಮಾಜದ ಕುಲಗುರು ವೇದವ್ಯಾಸರು ಜಗತ್ತಿಗೆ ಜ್ಞಾನ ನೀಡಿ ವೇದಗಳ ಕಾಲದಿಂದಲೂ ಅತ್ಯಂತ ಪ್ರಸಿದ್ಧಿ ಪಡೆದವರು. ಮಹಾಭಾರತ ರಚಿಸಿದ ವೇದವ್ಯಾಸರು ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಸರಳಗೊಳಿದರು. ಇಂತಹ ಹಲವಾರು ಮಹನೀಯರು ನಮ್ಮ ಸಮಾಜದಲ್ಲಿ ಆಗಿ ಹೋಗಿದ್ದು ಈಗಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದರು.ಈ ವೇಳೆ ವೇದವ್ಯಾಸರ ಜೀವನ ಸಂದೇಶ ಕುರಿತು ಡಾ. ಗಣೇಶ ಸುಲ್ತಾನಪುರ ಉಪನ್ಯಾಸ ನೀಡಿದರು.ಟ್ರಸ್ಟ್‌ನ ನಿರ್ದೇಶಕ ಮಂಜುನಾಥ ಕುಪ್ಪಣ್ಣ ಪ್ರಾಸ್ತಾವಿಕ ಮಾತನಾಡಿದರು. ಹಿರಿಯರಾದ ಉಮೇಶ ಪೂಜಾರ, ಕೆ.ಎನ್. ಸುಣಗಾರ, ಚಂದ್ರಶೇಖರ ಪೂಜಾರ, ಪ್ರಕಾಶ ಪೂಜಾರ, ಉಡಚಪ್ಪ ಬಾರಕೇರ, ಮಾರುತಿ ಪೂಜಾರ, ಶ್ರೀಕಾಂತ ಪೂಜಾರ, ಗೋಪಾಲ ಲಕ್ಷ್ಮೇಶ್ವರ, ರವಿಕುಮಾರ ಸವಣೂರ, ಶ್ರೀಧರ ಸುಣಗಾರ, ರಾಜು ಬಾರಕೇರ, ಕಿರಣಕುಮಾರ ಪೂಜಾರ, ಅರ್ಜುನ ಪೂಜಾರ, ಚಾಮರಾಜ ಪೂಜಾರ, ಬಸವರಾಜ ಜಗಳೂರ, ಹನುಮಂತ ಮಾನ್ವಿ, ಕೃಷ್ಣಾ ಬಾರಕೇರ, ವಿನೋದ ಜಕನೂರ, ಸುನೀಲ ಮಾನ್ವಿ, ಮಹೇಶ ಪೂಜಾರ, ಪಾರವ್ವ ಪೂಜಾರ, ಶಂಕರವ್ವ ಪೂಜಾರ, ಮಹಾಲಕ್ಷ್ಮೀ ಮಠಪತಿ, ರತ್ನಾ ಲಕ್ಷ್ಮೇಶ್ವರ, ಗೀತಾ ಪೂಜಾರ, ಲಕ್ಷ್ಮೀ ಲಕ್ಷ್ಮೇಶ್ವರ, ಚನ್ನಮ್ಮ ಪೂಜಾರ, ಶೋಭಾ ಬಾರಕೇರ, ಲಲಿತಾ ಲಕ್ಷ್ಮೇಶ್ವರ, ಮಂಗಲಾ ಲಕ್ಷ್ಮೇಶ್ವರ, ದ್ಯಾಮವ್ವ ಲಕ್ಷ್ಮೇಶ್ವರ, ಅನಸೂಯಾ ಯತ್ನಟ್ಟಿ, ಕಮಲವ್ವ ಪೂಜಾರ, ಸವಿತಾ ಬಾರಕೇರ, ಅನ್ನಪೂರ್ಣಾ ಸವಣೂರ ಇದ್ದರು. ಮಂಜುನಾಥ ಸುಣಗಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

PREV

Recommended Stories

ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ
ರಾಜಕೀಯ ದುರುದ್ದೇಶಕ್ಕೆ ದೇವಾಲಯಗಳ ಬಳಕೆ ಸಲ್ಲದು