ಕನ್ನಡಪ್ರಭ ವಾರ್ತೆ ಕಲಬುರಗಿ
ನಗರದಲ್ಲಿ ಭಾನುವಾರ ವೈವಸ್ವತ ಮನ್ವಂತರದ ಶ್ರೀಶಕ 1947 ವಿಶ್ವಾವಸುನಾಮ ಸಂವತ್ಸರದ ಮಾಘ ಶುದ್ಧ ಸಪ್ತಮಿ (ರಥಸಪ್ತಮಿ) ಹಿನ್ನೆಲೆ ಸಂಗಮೇಶ್ವರ ಬಡಾವಣೆಯಲ್ಲಿರುವ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಶ್ರೀ ಯಾಜ್ಞವಲ್ಕ್ಯ ಭವನದಲ್ಲಿ ರಥಸಪ್ತಮಿಯ ಹಾಗೂ ಸೂರ್ಯನಾರಾಯಣನ ವರ್ಧಂತ್ಯುತ್ಸವವನ್ನು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ರಥಸಪ್ತಮಿ ಎಂದರೆ ಸೂರ್ಯನ ಪೂಜೆಯೊಂದಿಗೆ ನಮ್ಮೊಳಗಿನ ಸೃಜನಶೀಲತೆಯನ್ನು ಮತ್ತು ಜ್ಞಾನವನ್ನು ಜಾಗೃತಗೊಳಿಸುವ ಹಬ್ಬ. ವೇದಗಳು ಸೂರ್ಯನನ್ನು ಜಗತ್ತಿನ ಆತ್ಮ ಎಂದು ಕರೆದಿವೆ, ದೇವತೆಗಳ ಶಕ್ತಿಯಾಗಿ ಸೂರ್ಯನು ಉದಯಿಸುತ್ತಿದ್ದಾನೆ ಸಮಸ್ತ ಜೀವ ರಾಶಿಗಳಿಗೂ ಸೂರ್ಯನೆ ಆತ್ಮ, ಸೂರ್ಯ ಜಗತ್ತಿನ ಕಣ್ಣು ಎಂದರು.ಸಾಹಿತಿ ಅಂಕಣಕಾರ ಶ್ರೀನಿವಾಸ್ ಸಿರನೂರಕರ್ ಮಾತನಾಡಿ, ರ್ಸೂರ್ಯೋಪಾಸನೆಗೆ ಸನಾತನ ಸಂಪ್ರದಾಯದಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ. ಭಗವಂತನಾದ ಸೂರ್ಯನಾರಾಯಣನು ಮಹರ್ಷಿ ಯಾಜ್ಞವಲ್ಕ್ಯರು ತಪಸ್ಸಿಗೆ ಮೆಚ್ಚಿ ವಾಜಿ ರೂಪದಲ್ಲಿ ಶುಕ್ಲೆ ಯುರ್ವೇದವನ್ನು ಕರುಣಿಸಿದನು ಎಂದರು. ವೈಜ್ಞಾನಿಕವಾಗಿ ಸೂರ್ಯೋಪಾಸನೆಯ ಮಹತ್ವ ತಿಳಿಸಿದರು.
ರಥಸಪ್ತಮಿ ಸೂರ್ಯನಾರಾಯಣ ವರ್ಧಂತಿ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ನೈರ್ಮಲ್ಯ ಅಭಿಷೇಕ ವಿಶೇಷವಾದ ಪೂಜೆ ಅಲಂಕಾರ , ಶ್ರೀ ಅಶ್ವಥ್ ಜೋಶಿ ಮತ್ತು ಭಾರತೀಶ್ ಮೂತಪಲ್ಲಿ ಅವರಿಂದ ಸಪ್ತಾಶ್ವರೂಢನಾದ ಶ್ರೀ ಸೂರ್ಯನಾರಾಯಣ ಉತ್ಸವ, ವೈದಿಕರಾದ ಶ್ರೀ ರಾಮಾಚಾರ್ಯ ಮತ್ತು ಮಾಧವಾಚಾರ್ಯ ವೈದಿಕತ್ವದಲ್ಲಿ ಶ್ರೀ ಸೂರ್ಯನಾರಾಯಣ ಹೋಮ, ಶ್ರೀಯೋಗೀಶ್ವರ ಯಾಜ್ಞವಲ್ಕ್ಯಅಷ್ಟೋತ್ತರ ಪಾರಾಯಣ, ಶ್ರೀ ಯಾಜ್ಞವಲ್ಕ್ರ ಕೋಟಿ ನಾಮ ಜಪ ಯಜ್ಞದ ಮಂಗಳ ಮಹೋತ್ಸವ, ನೈವೇದ್ಯ ಮಹಾಮಂಗಳಾರತಿ ವಿಜೃಂಭಣೆಯಿಂದ ಜರುಗಿದವು.ಮೈತ್ರಿಯಿ ಭಜನಾ ಮಂಡಳಿಯಿಂದ ಭಜನೆ, ಕೋಲಾಟ, ಸೂರ್ಯನಾರಾಯಣನ ವಿಶಿಷ್ಟ ಮತ್ತು ವಿಶೇಷವಾದ ರಂಗೋಲಿ ಬಿಡಿಸಲಾಗಿತ್ತು. ಸಮಿತಿಯ ಅಧ್ಯಕ್ಷ ಮಲ್ಹಾರಾವ ಗಾರಂಪಳ್ಳಿ, ಮಾಧವಾಚಾರ್ಯ ಜೋಶಿ, ಶಾಮಾಚಾರ್ಯ ಬೈಚಬಾಳ. ಶಾಮರಾವ್ ಕುಲಕರ್ಣಿ, ಸಮಿತಿಯ ಕಾರ್ಯದರ್ಶಿ ರಾಘವೇಂದ್ರ ವಕೀಲ್, ಚಂದ್ರಕಾಂತ ಗದಾರ್, ಶ್ರೀರಾಮಾಚಾರಿ ಅಗ್ನಿಹೋತ್ರಿ ಅಶೋಕ್ ಮಳ್ಳಿ, ಕೃಷ್ಣಜಿ ಕುಲಕರ್ಣಿ, ಪಾಂಡುರಂಗರಾವ್ ದೇಶಮುಖ್, ಶೇಷಗಿರಿ ಕುಲಕರ್ಣಿ, ಶ್ರೀನಿವಾಸ ದೇಸಾಯಿ, ಭೀಮಸೇನರಾವ್ ಸಿಂಧಗೇರಿ, ವೆಂಕಟೇಶ್ ಕುಲಕರ್ಣಿ ಅನಿಲ್ ಕುಲಕರ್ಣಿ ಮಂಜುನಾಥ ಕುಲಕರ್ಣಿ, ಸುರೇಶ್ ದೇಶಪಾಂಡೆ, ಪ್ರಮೋದ್ ಕುಲಕರ್ಣಿ, ಮಂದಾರ ಸರಾಫ್, ಶ್ರೀನಿವಾಸರಾವ್ ಕುಲಕರ್ಣಿ, ಶ್ರೀಧರ್ ಕುಲಕರ್ಣಿ, ಸುಧೀರ್ ಕುಲಕರ್ಣಿ, ಪ್ರಹ್ಲಾದ ದೇವರು ಸೇರಿದಂತೆ ಮೈತ್ರಿ ಭಜರ ಮಂಡಳಿಯ ಸದಸ್ಯರು ತ್ರಿಮೂರ್ತಿ ಯಾತ್ರಾ ಬಳಗ ಶ್ರೀ ರಾಘವೇಂದ್ರ ಸ್ವಾಮಿ ಭಕ್ತವೃಂದ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳು ಇದ್ದರು.