ಮಹಾಶಿವರಾತ್ರಿ: ವಿವಿಧ ದೇಗುಲಗಳಲ್ಲಿ ಶಿವನಾಮ ಸ್ಮರಣೆ

KannadaprabhaNewsNetwork |  
Published : Feb 28, 2025, 12:51 AM IST
27ಕೆಎಂಎನ್ ಡಿ25 | Kannada Prabha

ಸಾರಾಂಶ

ರಾತ್ರಿಯಿಂದ ಬೆಳಗಿನ ಜಾವದವರೆಗೆ ಪೂಜೆ, ಜಾಗರಣೆ, ವಿವಿಧ ಗ್ರಾಮಗಳಲ್ಲಿ ಯುವಕರು ಇಡೀರಾತ್ರಿ ಕಬಡ್ಡಿ, ವಾಲಿಬಾಲ್, ಷಟಲ್‌ನಂತಹ ವಿವಿಧ ಕ್ರೀಡೆಗಳನ್ನು ಆಯೋಜಿಸಿದ್ದರು. ಪ್ರತಿಮನೆಗಳ ಮುಂದೆ ರಂಗೋಲಿ ಬಿಡಿಸಿ ದೀಪ ಹಚ್ಚಿ ಶಿವನ ಪ್ರಾರ್ಥಿಸಿದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಹೋಬಳಿಯ ವಿವಿಧ ದೇವಾಲಯಗಳಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಶಿವಸ್ಮರಣೆ ಸಂಭ್ರಮದಿಂದ ಜರುಗಿತು.

ದೇವಾಲಯದಲ್ಲಿ ಅರ್ಚಕರು ಮುಕ್ಕಣ್ಣನಿಗೆ ಪಂಚಾಮೃತ ಅಭಿಷೇಕ, ಶತರುದ್ರಾಭಿಷೇಕ ಮಾಡಿದರು. ಶಿವನಿಗೆ ಪ್ರಿಯವಾದ ಬಿಲ್ವಾರ್ಚನೆ, ಭಸ್ಮಾರ್ಚನೆ, ಪುಷ್ಪಾರ್ಚನೆಯಂತಹ ವಿವಿಧ ಪೂಜಾ ವಿಧಿವಿಧಾನಗಳನ್ನು ನಡೆಸಿದರು. ಭಸ್ಮ, ಬಿಲ್ವಪತ್ರೆ, ತೀರ್ಥ ಪ್ರಸಾದ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ಭಕ್ತರು ಸ್ವೀಕರಿಸಿದರು.

ಕಿಕ್ಕೇರಿ ಬ್ರಹ್ಮೇಶ್ವರ ದೇಗುಲದಲ್ಲಿ ವಿಶೇಷ ಪೂಜೆಗಳು ಸಾಂಘವಾಗಿ ಜರುಗಿತು. ಗದ್ದೆಹೊಸೂರುವಿನ ಜೋಡಿ ಬಸವೇಶ್ವರ ದೇವಾಲಯದಲ್ಲಿ ಧರ್ಮದರ್ಶಿ ಮೋಹನ್‌ಬಾಬು ವಿಶೇಷ ಪೂಜೆಗಳನ್ನು ಹಮ್ಮಿಕೊಂಡಿದ್ದರು.

ರಾತ್ರಿಯಿಂದ ಬೆಳಗಿನ ಜಾವದವರೆಗೆ ಪೂಜೆ, ಜಾಗರಣೆ, ವಿವಿಧ ಗ್ರಾಮಗಳಲ್ಲಿ ಯುವಕರು ಇಡೀರಾತ್ರಿ ಕಬಡ್ಡಿ, ವಾಲಿಬಾಲ್, ಷಟಲ್‌ನಂತಹ ವಿವಿಧ ಕ್ರೀಡೆಗಳನ್ನು ಆಯೋಜಿಸಿದ್ದರು. ಪ್ರತಿಮನೆಗಳ ಮುಂದೆ ರಂಗೋಲಿ ಬಿಡಿಸಿ ದೀಪ ಹಚ್ಚಿ ಶಿವನ ಪ್ರಾರ್ಥಿಸಿದರು.

ಸಾಸಲು ಶಂಭುಲಿಂಗೇಶ್ವರ, ಸೋಮೇಶ್ವರ, ಗದ್ದೆಹೊಸೂರುವಿನ ಜೋಡಿಬಸವೇಶ್ವರ, ಗೋವಿಂದನಹಳ್ಳಿಯ ಪಂಚಲಿಂಗೇಶ್ವರ, ಮಾದಾಪುರ ಗ್ರಾಮದ ರಾಮೇಶ್ವರ, ತ್ರಯಂಭಕೇಶ್ವರ, ಮಂದಗೆರೆಯ ಅಂಕನಾಥೇಶ್ವರ, ತೆಂಗಿನಘಟ್ಟ, ಊಗಿನಹಳ್ಳಿಯ ಈಶ್ವರ ದೇವಾಲಯ, ಲಕ್ಷ್ಮೀಪುರ ಗ್ರಾಮದ ಸಿದ್ಧರಾಮೇಶ್ವರ, ಐಕನಹಳ್ಳಿ ಗ್ರಾಮದ ಬಸವೇಶ್ವರ, ಬೂವಿನಹಳ್ಳಿ ಗ್ರಾಮದ ಬಸವೇಶ್ವರ ಮತ್ತಿತರ ದೇವಾಲಯಗಳಲ್ಲಿ ಜಾಗರಣೆ ವಿಶೇಷವಾಗಿ ಸಜ್ಜುಗೊಳಿಸಲಾಗಿತ್ತು.

ಈ ವೇಳೆ ಅನಿಲ್‌ಶಾಸ್ತ್ರೀ, ಆದಿತ್ಯ ಭಾರದ್ವಜ್, ಮಹಬಲರಾವ್‌ಶರ್ಮ, ಗಣೇಶರಾವ್, ಕೆ.ಎಸ್. ಪ್ರಭಾಕರ್, ಶ್ರೀಹರಿ ಶರ್ಮ, ನರಸಿಂಹ, ಕೆ.ಎಸ್. ಪರಮೇಶ್ವರಯ್ಯ, ಕೆ.ಬಿ. ವೆಂಕಟೇಶ್, ದೀಪಕ್, ರಘು, ಪ್ರಸಾದ್, ಭಜರಂಗದಳ ಅಕ್ಷಯ್ ಮತ್ತಿತರರಿದ್ದರು. ಕಿಕ್ಕೇರಿ ಇನ್ಸ್ ಪೆಕ್ಟರ್ ರೇವತಿ ಸಿಬ್ಬಂದಿಯೊಂದಿಗೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.ಮಾ.೨ರಂದು ಶ್ರೀ ಅನ್ನಪೂರ್ಣೇಶ್ವರಿ ರಥೋತ್ಸವ

ಮಂಡ್ಯ:

ಇಲ್ಲಿನ ವಿದ್ಯಾನಗರದಲ್ಲಿರುವ ಶ್ರೀಅನ್ನದಾತೆ ಅನ್ನಪೂರ್ಣೇಶ್ವರಿ ರಥೋತ್ಸವವು ಮಾ.೨ರಂದು ಬೆಳಗ್ಗೆ ೧೧ ಗಂಟೆಗೆ ನಡೆಯಲಿದೆ. ಶಾಸಕ ಪಿ.ರವಿಕುಮಾರ್ ಅವರು ರಥೋತ್ಸವಕ್ಕೆ ಚಾಲನೆ ನೀಡುವರು. ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್ ಭಾಗವಹಿಸುವರು. ಬೆಳಗ್ಗೆ ೯ ಗಂಟೆಗೆ ಮುತ್ತೈದೆ ಪೂಜೆ, ಮಹಿಳೆಯರಿಂದ ದೇವಿ ಉತ್ಸವ ನಡೆಯಲಿದೆ. ಶ್ರೀರಂಗಪಟ್ಟಣದ ರಾಘವ ತಂಡದವರಿಂದ ಸ್ಯಾಕ್ಸೋಫೋನ್, ಚಂಡೆ ವಾದ್ಯದೊಂದಿಗೆ ನಿಹಾಲ್‌ಸಿಂಗ್‌ ಅವರಿಂದ ಪಂಜಾಬಿ ಡೋಲು, ಮಧ್ಯಾಹ್ನ ೧೨ ಗಂಟೆಗೆ ಮುತ್ತಪ್ಪ ದೈವ ಕೋಲ, ಸಂಜೆ ೫ ಗಂಗೆ ಮಹಿಳೆಯರಿಗೆ ಮಡಿಲಕ್ಕಿ ತುಂಬುವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ