ಅಹಿಂಸೆಯ ಪ್ರತೀಕ ಮಹಾತ್ಮ ಗಾಂಧೀಜಿ: ದಿನೇಶ್

KannadaprabhaNewsNetwork | Published : Feb 1, 2025 12:03 AM

ಸಾರಾಂಶ

ಅಹಿಂಸೆಯ ಪ್ರತೀಕ ಮಹಾತ್ಮಗಾಂಧಿ ಅವರು ವಿಶ್ವಕ್ಕೆ ಮಾದರಿಯಾಗಿದ್ದು, ಇಂದು ಅವರನ್ನು ಹತ್ಯೆ ಮಾಡಿದವರನ್ನು ಬಿಜೆಪಿ ಪೂಜಿಸುತ್ತಿರುವುದು ದುರದೃಷ್ಟಕರ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ತಿಳಿಸಿದರು.

ಮಹಾತ್ಮನ ಪುಣ್ಯಸ್ಮರಣೆ । ಜಿಲ್ಲಾ ಕಾಂಗ್ರೆಸ್‌ ಆಯೋಜನೆ

ದಾವಣಗೆರೆ: ಅಹಿಂಸೆಯ ಪ್ರತೀಕ ಮಹಾತ್ಮಗಾಂಧಿ ಅವರು ವಿಶ್ವಕ್ಕೆ ಮಾದರಿಯಾಗಿದ್ದು, ಇಂದು ಅವರನ್ನು ಹತ್ಯೆ ಮಾಡಿದವರನ್ನು ಬಿಜೆಪಿ ಪೂಜಿಸುತ್ತಿರುವುದು ದುರದೃಷ್ಟಕರ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ತಿಳಿಸಿದರು.

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿಯವರ 76ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಹಿಂಸೆಯಿಂದ ಏನಾದರೂ ಸಾಧಿಸಬಹುದು ಎಂಬುದಕ್ಕೆ ಮಹಾತ್ಮಗಾಂಧಿ ಅವರು ಭಾರತ ದೇಶದ ಸ್ವಾತಂತ್ರ‍್ಯಕ್ಕಾಗಿ ನಡೆಸಿದ ಹೋರಾಟವೇ ಸಾಕ್ಷಿ ಎಂದರು.

ಸಹಕಾರ ಬ್ಯಾಂಕಿನ ನಿರ್ದೇಶಕ ಮುದೇಗೌಡ್ರು ಗಿರೀಶ್ ಮಾತನಾಡಿ, ಇಂದು ದೇಶ ಓರ್ವ ಮಹಾತ್ಮರನ್ನು ಕಳೆದುಕೊಂಡಿರುವ ದಿನ. ಇನ್ನೊಂದು ಅವರನ್ನು ಕೊಂದವರ ಪರವಾಗಿರುವವರು ಇಂದು ದೇಶವನ್ನು ಆಳುತ್ತಿದ್ದು, ಯುವಕರು ಕೊಂದವರನ್ನು ಪೂಜಿಸದೇ ಮಹಾತ್ಮರನ್ನು ಪೂಜಿಸುವಂತಾಗಬೇಕು ಎಂದು ಕರೆ ನೀಡಿದರು.

ಪಾಲಿಕೆ ಸದಸ್ಯ ಎ.ನಾಗರಾಜ ಮಾತನಾಡಿ, ಮಹಾತ್ಮ ಗಾಂಧಿ ಅವರ ಅಹಿಂಸೆ ಹೋರಾಟ ಕೇವಲ ಭಾರತವಲ್ಲ ವಿಶ್ವಾದ್ಯಂತದ ನಾಗರಿಕ ಹಕ್ಕುಗಳ ಮತ್ತು ಸ್ವಾತಂತ್ರ‍್ಯ ಆಂದೋಲನಗಳಿಗೆ ಸ್ಫೂರ್ತಿ ನೀಡಿತು. ಇದರಿಂದ ಅನೇಕ ದೇಶಗಳು ಪರದೇಶಿಗರ ಆಳ್ವಿಕೆಯಿಂದ ಮುಕ್ತಿ ಪಡೆದರು ಎಂದರು.

ಪಾಲಿಕೆ ನಾಮ ನಿರ್ದೇಶನ ಸದಸ್ಯ ಎಲ್‌ಎಂಎಚ್ ಸಾಗರ್ ಮಾತನಾಡಿ, ದೇಶಕ್ಕಾಗಿ ಹೋರಾಟ ನಡೆಸಿದವರನ್ನು ಹತ್ಯೆ ಮಾಡುವ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಭಯೋತ್ಪಾದನೆ ಹುಟ್ಟು ಹಾಕಿದ ದಿನ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ, ಯುವ ಕಾಂಗ್ರೆಸ್‌ನ ರಾಕೇಶ್, ಮಹಾನಗರ ಪಾಲಿಕೆ ನಾಮ ನಿರ್ದೇಶನ ಸದಸ್ಯ ಹನುಮಂತರಾಜ್, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಸುಭಾನ್ ಸಾಬ್, ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಮಂಜಮ್ಮ, ನಿಟುವಳ್ಳಿ ಪ್ರವೀಣ್, ದಸ್ತಗಿರಿ, ಅನಿಲ್ ಮತ್ತಿತರರು ಇದ್ದರು.

Share this article