ಮಹಾತ್ಮಾ ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯ ಕಲ್ಪನೆ ಅದ್ಭುತ: ಎಸ್.ಎಸ್. ಪಾಟೀಲ

KannadaprabhaNewsNetwork |  
Published : Oct 03, 2024, 01:21 AM IST
ಪೋಟೊ ಶಿರ್ಷಕೆ೦೨ಎಚ್ ಕೆ ಅರ್ ೦೨ | Kannada Prabha

ಸಾರಾಂಶ

ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಭಾರತ ಕಂಡ ಅಪ್ರತಿಮ ಪ್ರಧಾನಿಯಾಗಿ ಈ ದೇಶವನ್ನು ಸದೃಢ, ಸಮರ್ಥ ಭಾರತವನ್ನಾಗಿ ನಿರ್ಮಾಣಗೊಳಿಸಲು ತಮ್ಮನ್ನು ತೊಡಗಿಸಿಕೊಂಡ ಧೀಮಂತ ವ್ಯಕ್ತಿಗಳು ಎಂದು ಎಸ್.ಎಸ್. ಪಾಟೀಲ ಹೇಳಿದರು.

ಹಿರೇಕೆರೂರು: ಈ ದೇಶದ ಸಾಮಾಜಿಕ ಅನಿಷ್ಟಗಳನ್ನು ತೊಡೆದುಹಾಕಿ ತುಳಿತಕ್ಕೊಳಗಾದ ದೀನ-ದಲಿತರನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತರಬೇಕೆಂಬ ಕನಸು ಕಂಡವರು ಮಹಾತ್ಮ ಗಾಂಧೀಜಿ. ಅವರು ಕಂಡ ಗ್ರಾಮ ಸ್ವರಾಜ್ಯ ಕಲ್ಪನೆ ಅದ್ಬುತವಾದದ್ದು ಮತ್ತು ವಿಶ್ವಕ್ಕೆ ಮಾದರಿಯಾದದು ಎಂದು ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಹೇಳಿದರು.

ಪಟ್ಟಣದ ತಾಲೂಕು ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಘ ನಿಯಮಿತ ಹಿರೇಕೆರೂರ ಆಶ್ರಯದಲ್ಲಿ ನಡೆಯುತ್ತಿರುವ ಸಂಸ್ಥೆಯ ಶಾಲಾ-ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತ್ಯುತ್ಸವದಲ್ಲಿ ಮಾತನಾಡಿದರು,

ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಭಾರತ ಕಂಡ ಅಪ್ರತಿಮ ಪ್ರಧಾನಿಯಾಗಿ ಈ ದೇಶವನ್ನು ಸದೃಢ, ಸಮರ್ಥ ಭಾರತವನ್ನಾಗಿ ನಿರ್ಮಾಣಗೊಳಿಸಲು ತಮ್ಮನ್ನು ತೊಡಗಿಸಿಕೊಂಡ ಧೀಮಂತ ವ್ಯಕ್ತಿಗಳು. ಅವರ ಆದರ್ಶ ತತ್ವಗಳು ಮತ್ತು ವ್ಯಕ್ತಿತ್ವ ಭಾರತೀಯರೆಲ್ಲರಿಗೂ ಆದರ್ಶಪ್ರಿಯ. ಅಂತಹ ತತ್ವಗಳನ್ನು ಇಂದಿನ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಸೂಕ್ತ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಹಕಾರಿಯ ಅಧ್ಯಕ್ಷರಾದ ಎಸ್.ಬಿ. ತಿಪ್ಪಣ್ಣನವರ ಮಾತನಾಡಿ, ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಮಾಡಿರುವ ಸಾಧನೆಗಳು ಬರಿ ಭಾಷಣಕ್ಕೆ ಸೀಮಿತವಾಗದೇ ಈಗಿನ ಯುವಪೀಳಿಗೆ ಅಂತಹ ಸಾಧನೆಯಲ್ಲಿ ಸಾಗುವಂತಾಗಬೇಕು, ಅವರು ತಮ್ಮ ಸತ್ಯ, ನಿಷ್ಠೆ, ತ್ಯಾಗ, ಬಲಿದಾನಗಳಿಂದ ಜಗತ್ತೇ ನಿಬ್ಬೆರಗಾಗುವಂತೆ ಇನ್ನೊಬ್ಬರಿಗಾಗಿ ತಮ್ಮ ಬದುಕನ್ನು ಧಾರೆ ಎರೆದ ಮಹಾನ್‌ ಚೇತನ. ಅಂತಹ ಮಹಾನ್‌ಚೇತನದ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಈ ವೇಳೆ ನಿವೃತ್ತ ಮುಖ್ಯೋಪಾಧ್ಯಾಯರಾದ ವಿ.ಸಿ. ಹೊಗಿಸೊಪ್ಪನವರ, ಸಂಸ್ಥೆಯ ಪ್ರಾಂಶುಪಾಲರಾದ ಡಾ. ಎಸ್.ಬಿ. ಚನ್ನಗೌಡ್ರ, ಬಿ.ಪಿ. ಹಳ್ಳೇರ, ಕೆ.ಹೆಚ್. ಮಾವಿನತೋಪ, ಮುಖ್ಯೋಪಾಧ್ಯಾಯರಾದ ಆರ್.ಹೆಚ್. ಬೆಟ್ಟಳ್ಳೇರ, ಆರ್.ಹೆಚ್. ಪೂಜಾರ, ಸತೀಶ ಬಣಕಾರ, ಬಿ.ವ್ಹಿ. ಸನ್ನೇರ, ರವಿ ಬಡಳ್ಳೇರ ಹಾಗೂ ಸಂಸ್ಥೆಯ ಶಾಲಾ-ಕಾಲೇಜುಗಳ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು. ಆರ್.ಎಂ. ಕರೇಗೌಡ್ರ ನಿರೂಪಿಸಿದರು. ಪಿ.ಎಂ. ಡಮ್ಮಳ್ಳಿ ವಂದಿಸಿದರು.

PREV

Recommended Stories

ಮಠದ ಪರಂಪರೆ ರಕ್ಷಣೆಗೆ ಜೀವನ ಮೀಸಲಿಡುವೆ
ನಷ್ಟದಲ್ಲಿರುವ ಸಹಕಾರಿಗಳ ಉಳಿಸಿ, ಬೆಳೆಸಲು ಸಂಕಲ್ಪ