ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪಟ್ಟಣದಲ್ಲಿ ಸ್ಪಂದನಾ ಫೌಂಡೇಷನ್ ಶ್ರೀ ಬಾಲಾಜಿ ವಿದ್ಯಾ ಸೇವಾ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ 155ನೇ ಗಾಂಧೀಜಿ ಹಾಗೂ 120ನೇ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯಲ್ಲಿ ಮಾತನಾಡಿ, ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆ ಕನಸಾಗಿಯೇ ಉಳಿದಿದೆ ಎಂದು ವಿಷಾದಿಸಿದರು.
ದೇಶ ಪ್ರೇಮ, ಸ್ವಾಭಿಮಾನ ಮೂಡದೆ ದೇಶದ ಸಮಸ್ಯೆ ಬಗೆಹರಿಯಲಾರದು. ಗಾಂಧೀಜಿಯವರು ಹಾಕಿಕೊಟ್ಟ ಸತ್ಯ, ಅಹಿಂಸೆ, ಸನ್ನಡತೆ, ರಾಷ್ಟ್ರಪ್ರೇಮ, ಗ್ರಾಮ ಶುಚಿತ್ವವನ್ನು ಮೈಗೂಡಿಸಿಕೊಳ್ಳದೆ ದೇಶದ ಸಮಸ್ಯೆ ಪರಿಹಾರ ಸಾಧ್ಯವೇ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಎಳೆಯ ಮನಸ್ಸುಗಳಲ್ಲಿ ಮೊಬೈಲ್ ಹಾವಳಿಯಿಂ ಹುತಾತ್ಮರಾದ ಮಹನೀಯರ ಸ್ಮರಣೆ ಮರೆಯಾಗುತ್ತಿದೆ. ವಿದ್ಯಾವಂತ ಪೋಷಕರು ಜಯಂತಿ ಆಚರಣೆ ಹಿನ್ನೆಲೆ, ಉದ್ದೇಶವನ್ನು ತಿಳಿಸಬೇಕಿದೆ ಎಂದರು.
ಲಾಲ್ ಬಹದ್ದೂರ್ ಶಾಸ್ತ್ರೀಜಿ ಅಂದು ದೇಶ ಆಹಾರ ಕ್ಷಾಮದಲ್ಲಿ ಬಸವಳಿಯುತ್ತಿದ್ದಾಗ ವಾರದ ಒಂದು ಹೊತ್ತಿನ ಊಟ ಬಿಡಲುಕರೆ ನೀಡಿದರು. ಆಹಾರ, ಹಸಿರು ಕ್ರಾಂತಿ ಜೊತೆಗೆ ನೆರೆಯ ಶತ್ರುಗಳ ಆಕ್ರಮಣವನ್ನು ಹಿಮ್ಮೆಟಿಸಿದರು. ಉಪವಾಸ ಆಚರಣೆ ವಾರದ ಒಂದು ದಿನ ಮಾಡಿದರೆ ಆರೋಗ್ಯಕ್ಕೂ ಪೂರಕವಾಗಲಿದೆ. ಶಾಸ್ತ್ರೀಜಿ ಜಯಂತಿಗೆ ಅರ್ಥ ಸಿಗಲಿದೆ ಎಂದರು.