ಮಹಾವೀರ ಕಾಲೇಜು 60 ಸಂಭ್ರಮ: ಅಂತರ್‌ ಕಾಲೇಜು ಫೆಸ್ಟ್‌

KannadaprabhaNewsNetwork | Published : Mar 27, 2025 1:01 AM

ಸಾರಾಂಶ

ಮೂಡುಬಿದಿರೆ ಶ್ರೀ ಮಹಾವೀರ ಪ್ರಥಮ ದರ್ಜೆ ಕಾಲೇಜು, ಮೂಡಬಿದಿರೆ ೬೦ನೇ ವರ್ಷಾಚರಣೆ ಸಂಭ್ರಮದಲ್ಲಿ ಕಾಲೇಜಿನ ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ. ಘಟಕಗಳು ಪ್ರಕೃತಿ-ರಕ್ಷಕ್ ಹೆಸರಿನ ಅಂತರ್‌ ಕಾಲೇಜು ಫೆಸ್ಟ್‌ ಆಯೋಜಿಸಿತ್ತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಇಲ್ಲಿನ ಶ್ರೀ ಮಹಾವೀರ ಪ್ರಥಮ ದರ್ಜೆ ಕಾಲೇಜು, ಮೂಡಬಿದಿರೆ ೬೦ನೇ ವರ್ಷಾಚರಣೆ ಸಂಭ್ರಮದಲ್ಲಿ ಕಾಲೇಜಿನ ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ. ಘಟಕಗಳು ಪ್ರಕೃತಿ-ರಕ್ಷಕ್ ಹೆಸರಿನ ಅಂತರ್‌ ಕಾಲೇಜು ಫೆಸ್ಟ್‌ ಆಯೋಜಿಸಿತ್ತು.

ಮಂಗಳೂರು ಮೂಲತ್ವ ಫೌಂಡೇಷನ್ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಪ್ರಕಾಶ್ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ೧೮ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಗ್ರೇಸಿಯನ್ ಸಿಕ್ವೇರಾ ಮಾತನಾಡಿ, ಎನ್.ಸಿ.ಸಿ. ವಿದ್ಯಾರ್ಥಿಗಳು ವಿನಮ್ರರಾಗಿ ಎಲ್ಲರಿಗೂ ಒಳ್ಳೆಯದನ್ನು ಮಾಡಲು ನಿರ್ದೇಶನ ನೀಡಿದರು.

ಯಾವಾಗಲೂ ದೇವರ ಮತ್ತು ಪೋಷಕರ ಆಶೀರ್ವಾದ ಪಡೆಯಿರಿ ಅದು ನಿಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್. ಸಂಯೋಜಕ ಡಾ ಶೇಷಪ್ಪ ಮಾತನಾಡಿ, ತರಬೇತಿಗಳನ್ನು ಬಳಸಿಕೊಳ್ಳಿ. ಸಮಾಜದಲ್ಲಿ ಎಲ್ಲಾ ರೀತಿಯ ಜನರಿದ್ದಾರೆ. ಆದರೆ ನಿಯಮಗಳನ್ನು ಉಲ್ಲಂಘಿಸದೆ ನಾವು ಅಗತ್ಯವಿರುವವರಿಗೆ ಸಹಾಯ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿರುವ ಮಾನವೀಯತೆ ಮತ್ತು ಸಹೋದರತ್ವವನ್ನು ನಮ್ಮಲ್ಲಿ ಬೆಳೆಸಿಕೊಳ್ಳಬೇಕು ಎಂದರು.

ಈ ಅಂತರ್‌ಕಾಲೇಜು ಸ್ಪರ್ಧೆಯಲ್ಲಿ ೧೦ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿಗಳು, ೬ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎನ್.ಎಸ್.ಎಸ್. ವಲಯ ಸಂಚಾಲಕ ಸಂತೋಷ್ ಶೆಟ್ಟಿ, ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ರಮೇಶ್ ಭಟ್, ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಪ್ರೊ. ಹರೀಶ್, ಎನ್.ಎಸ್.ಎಸ್. ಅಧಿಕಾರಿ ಶಾರದಾ, ಎನ್.ಸಿ.ಸಿ. ಅಧಿಕಾರಿ ಲೆಪ್ಟಿನೆಂಟ್ ವಿಜಯಲಕ್ಷ್ಮೀ, ವಿದ್ಯಾರ್ಥಿ ನಾಯಕಿ ಶೃತಿ ಪೆರಿ, ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ. ವಿದ್ಯಾರ್ಥಿ ನಾಯಕರಾದ ವೈಜೇಶ್, ಸಂಶೋಧ್, ಶ್ರೀನಿಧಿ, ತುಳಸಿ ಮತ್ತು ಲತೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದೀಪಶ್ರೀ ಸ್ವಾಗತಿ, ರಕ್ಷಿತಾ ವಂದಿಸಿದರು. ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.

Share this article