ವಲಯ ಕಚೇರಿಗೆ ನೇರವಾಗಿ/ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ, ಸುಲಭವಾಗಿ ಇ- ಖಾತೆ ಪಡೆಯಿರಿ--

KannadaprabhaNewsNetwork | Published : Mar 27, 2025 1:01 AM

ಸಾರಾಂಶ

ನಾವು ಹಿಂದೆ ಪ್ರತಿನಿಧಿಸುತ್ತಿದ್ದ ವಾರ್ಡಿನ ನಿವಾಸಿಗಳಿಗೆ ಇ- ಖಾತೆಗೆ ಅರ್ಜಿ ಸಲ್ಲಿಸುವಂತೆ ಪಾಲಿಕೆ ವತಿಯಿಂದ ಜಾಥಾ ಮೂಲಕ ಮಾಹಿತಿ ನೀಡಲಾಯಿತು

ಕನ್ನಡಪ್ರಭ ವಾರ್ತೆ ಮೈಸೂರು

ವಲಯ ಕಚೇರಿಗೆ ನೇರವಾಗಿ ಅಥವಾ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ, ನಿಮ್ಮ ಆಸ್ತಿಗೆ ಸುಲಭವಾಗಿ ಇ- ಖಾತೆ ಪಡೆಯಬಹುದು ಎಂದು ಪಾಲಿಕೆ ಮಾಜಿ ಸದಸ್ಯರಾದ ಎಂ. ಸುನಿಲ್‌ ಹಾಗೂ ಶೋಭಾ ಸುನಿಲ್‌ ಅವರು ಜಾಗೃತಿ ಮೂಡಿಸುತ್ತಿದ್ದಾರೆ.ನಾವು ಹಿಂದೆ ಪ್ರತಿನಿಧಿಸುತ್ತಿದ್ದ ವಾರ್ಡಿನ ನಿವಾಸಿಗಳಿಗೆ ಇ- ಖಾತೆಗೆ ಅರ್ಜಿ ಸಲ್ಲಿಸುವಂತೆ ಪಾಲಿಕೆ ವತಿಯಿಂದ ಜಾಥಾ ಮೂಲಕ ಮಾಹಿತಿ ನೀಡಲಾಯಿತು. ಅರ್ಜಿ ಸಲ್ಸಿಸಿದ ನಂತರ ಪಾಲಿಕೆ ವಲಯ ಕಚೇರಿಗೆ ಭೇಟಿ ನೀಡಿ, ಅಲ್ಲಿನ ಆಯುಕ್ತರ ಸಹಕಾರದೊಂದಿಗೆ ಇ- ಖಾತೆ ಮಾಡಿಸಿ, ಮನೆ ಮನೆಗೆ ತಲುಪಿಸಲಾಗುತ್ತಿದೆ ಎಂದು ಶೋಭಾ ಸುನಿಲ್‌ ತಿಳಿಸಿದ್ದಾರೆ.ಸರ್ಕಾರದ ಸವಲತ್ತನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸಹಕರಿಸುತ್ತಿರುವ ಪಾಲಿಕೆಯ ವಲಯ-1 ರ ಆಯುಕ್ತರು ಹಾಗೂ ಸಿಬ್ಬಂದಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.ನಾವು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸದೇ ನಮ್ಮ ವಾರ್ಡಿನ ಪಾಲಿಕೆ ಮಾಜಿ ಸದಸ್ಯರಾದ ಶೋಭಾ ಸುನಿಲ್‌ ಅವರ ಸಹಕಾರದಿಂದ ಇ- ಖಾತೆಯನ್ನು ಪಡೆಯುತ್ತಿದ್ದೇವೆ ಎಂದು ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಇ- ಖಾತೆ ಪಡೆಯಲು ಬೇಕಾಗಿರುವ ದಾಖಲಾತಿಗಳು- ಆಧಾರ್‌ ಕಾರ್ಡ್‌ ಜೆರಾಕ್ಸ್‌ ಪ್ರತಿ- ಪಾನ್‌ ಕಾರ್ಡ್‌ ಜೆರಾಕ್ಸ್‌ ಪ್ರತಿ- ನೀರಿನ ಬಿಲ್‌ ಕಟ್ಟಿರುವ ರಶೀದಿ- ವಿದ್ಯುತ್‌ ಬಿಲ್‌ ಕಟ್ಟಿರುವ ರಶೀದಿ- ಪ್ರಸ್ತುತ ಸಾಲಿನ ಕಂದಾಯ ಪಾವತಿ ಮಾಡಿರುವ ರಶೀದಿ- ಖಾತಾ ಪತ್ರ- ಮನೆ ಪತ್ರ [ಮದರ್‌ ಡೀಡ್, ಕ್ರಯಪತ್ರ, ದಾನಪತ್ರ, ಹಕ್ಕು ಖುಲಾಸೆ ಪತ್ರ, ವಿಲ್‌ ಇತ್ಯಾದಿ], -ಇ.ಸಿ. 2004 ನೇ ಸಾಲಿನಿಂದ ಪ್ರಸ್ತುತ ದಿನಾಂಕದವರೆಗೆ- ಮನೆ ಮುಂದೆ ನಿಂತಿರುವ ಪೋಸ್ಟ್‌ ಕಾರ್ಡ್‌ ಅಳತೆಯ ಎರಡು ಭಾವಚಿತ್ರ- ಪಾಸ್‌ ಪೋರ್ಟ್‌ ಅಳತೆಯ ಎರಡು ಭಾವಚಿತ್ರ

Share this article