ಹುಕ್ಕೇರಿಯಲ್ಲಿ ಮಹಾವೀರ ಸೂಪರ್ ಮಾರ್ಕೆಟ್ ಆರಂಭ

KannadaprabhaNewsNetwork |  
Published : Aug 08, 2026, 03:00 AM IST
ಹುಕ್ಕೇರಿ | Kannada Prabha

ಸಾರಾಂಶ

ಕಳೆದ ಎರಡೂವರೆ ದಶಕದಿಂದ ಹಿಂದೆ ಆರಂಭವಾದ ಹುಕ್ಕೇರಿ ಮಹಾವೀರ ಮಲ್ಟಿಪರಪಜ್ ಸೌಹಾರ್ದ ಸಹಕಾರಿ ಸಂಘವು ಗ್ರಾಹಕ-ಸದಸ್ಯರ ಜೀವನಾಡಿಯಾಗಿ ಸೇವೆ ಸಲ್ಲಿಸುತ್ತಿದೆ. ಈ ಸಹಕಾರಿಯಿಂದ ಹುಕ್ಕೇರಿಯಲ್ಲಿ ಶೀಘ್ರವೇ ಸೂಪರ್ ಮಾರ್ಕೆಟ್ ಆರಂಭಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಕಳೆದ ಎರಡೂವರೆ ದಶಕದಿಂದ ಹಿಂದೆ ಆರಂಭವಾದ ಹುಕ್ಕೇರಿ ಮಹಾವೀರ ಮಲ್ಟಿಪರಪಜ್ ಸೌಹಾರ್ದ ಸಹಕಾರಿ ಸಂಘವು ಗ್ರಾಹಕ-ಸದಸ್ಯರ ಜೀವನಾಡಿಯಾಗಿ ಸೇವೆ ಸಲ್ಲಿಸುತ್ತಿದೆ. ಈ ಸಹಕಾರಿಯಿಂದ ಹುಕ್ಕೇರಿಯಲ್ಲಿ ಶೀಘ್ರವೇ ಸೂಪರ್ ಮಾರ್ಕೆಟ್ ಆರಂಭಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.

ಪಟ್ಟಣದ ಹೊರವಲಯದ ಮಹಾವೀರ ಶಿಕ್ಷಣ ಸಂಸ್ಥೆಯ ಶಾಲಾ ಆವರಣದಲ್ಲಿ ಶುಕ್ರವಾರ ನಡೆದ ಹುಕ್ಕೇರಿ ಮಹಾವೀರ ಮಲ್ಟಿಪರಪಜ್‌ ಸೌಹಾರ್ದ ಸಹಕಾರಿಯ 26ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾಬಾಪುರ ಬಳಿ ಸಂಕೇಶ್ವರ ರಸ್ತೆಗೆ ಹೊಂದಿಕೊಂಡಿರುವ ನಿವೇಶನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮುಕ್ತಾಯ ಹಂತದಲ್ಲಿದ್ದು ಇಲ್ಲಿ ಒಂದೇ ಸೂರಿನಡಿ ಜನರಿಗೆ ಲಭ್ಯವಾಗುವಂತೆ ದಿನಬಳಕೆ ಅಗತ್ಯ ಮತ್ತು ಗೃಹೋಪಯೋಗಿ ವಸ್ತುಗಳನ್ನು ಹೊಂದಿರುವ ಮಹಾವೀರ ಸೂಪರ್ ಮಾರ್ಕೆಟ್ ಆರಂಭಿಸಲಾಗುವುದು ಎಂದರು.ಈ ಭಾಗದ ಜನರ ಆರ್ಥಿಕ ವ್ಯವಸ್ಥೆಯ ಸದೃಢತೆಗಾಗಿ ಸಹಕಾರಿ ಕ್ಷೇತ್ರದೊಂದಿಗೆ ಬ್ಯಾಂಕ್ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕವಾಗಿಯೂ ಅನನ್ಯ ಕೊಡುಗೆ ನೀಡಿದೆ. 7 ಜಿಲ್ಲೆಗಳ ಕಾರ್ಯವ್ಯಾಪ್ತಿ ಹೊಂದಿರುವ ಬ್ಯಾಂಕ್‌ನಲ್ಲಿ 150 ಕ್ಕೂ ಹೆಚ್ಚು ಜನರಿಗೆ ಉದ್ಯೋವಕಾಶ ಕಲ್ಪಿಸಲಾಗಿದೆ. ಗ್ರಾಹಕ-ಸದಸ್ಯರ ಮಕ್ಕಳ ಐಎಎಸ್, ಐಪಿಎಸ್ ಕೋಚಿಂಗ್ ತರಬೇತಿಗೆ ಸಹಾಯ ಒದಗಿಸಿ ಅವರ ಉನ್ನತ ವಿದ್ಯಾರ್ಜನೆಗಾಗಿ ನೆರವು ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದರು.ಮುಖ್ಯ ಕಾರ್ಯನಿರ್ವಾಹಕ ರಾಜೇಂದ್ರ ಪಾಟೀಲ ಮಾತನಾಡಿ, ಸಂಸ್ಥೆಯು ಒಟ್ಟು 3042 ಸದಸ್ಯರನ್ನು ಹೊಂದಿದ್ದು, ಪ್ರಧಾನ ಕಚೇರಿ ಸೇರಿ ಸಹಕಾರಿಯು ಒಟ್ಟು 17 ಶಾಖೆಗಳಿವೆ. 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸಹಕಾರಿ ಒಟ್ಟು ವಾರ್ಷಿಕ ₹1333 ಕೋಟಿ 96 ಲಕ್ಷ 73 ಸಾವಿರ ವಹಿವಾಟು ನಡೆಸಿದೆ. ₹43.28 ಲಕ್ಷ ಶೇರು ಬಂಡವಾಳವಿದೆ. ₹11.66 ಕೋಟಿ ಕಾಯ್ದಿಟ್ಟ ಹಾಗೂ ಇತರೆ ನಿಧಿಗಳಿದ್ದು ₹351 ಕೋಟಿ ₹76 ಲಕ್ಷ ದುಡಿಯುವ ಬಂಡವಾಳವಿದೆ. ₹275.25 ಕೋಟಿ ಸಾಲ ವಿತರಿಸಲಾಗಿದ್ದು, ₹312 ಕೋಟಿ ಠೇವುಗಳಿವೆ. ₹48.85 ಕೋಟಿ ಹೂಡಿಕೆಗಳಿದ್ದು, ₹4.01 ಕೋಟಿ ಲಾಭ ಗಳಿಸಿ ಪ್ರಗತಿ ಪಥದತ್ತ ಸಾಗಿದೆ ಎಂದರು.ಘಟಪ್ರಭಾ-ಮಲಪ್ರಭಾ ಪಿ.ಜಿ ಸನ್ಮತಿಸಾಗರ ಸಹಕಾರಿ ಸಂಘದ ಅಧ್ಯಕ್ಷ ಮಹೇಂದ್ರ ಖೆಮಲಾಪುರೆ, ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ ಪಾಟೀಲ, ವಿದ್ಯುತ್ ಸಂಘದ ಸ್ಥಾನಿಕ ಅಭಿಯಂತರ ನೇಮಿನಾಥ ಖೆಮಲಾಪುರೆ, ಸಂಸ್ಥೆಯ ಉಪಾಧ್ಯಕ್ಷ ರೋಹಿತ ಚೌಗಲಾ, ನಿರ್ದೇಶಕರಾದ ಸುಕುಮಾರ ಖತಗಲ್ಲಿ, ಬಾಹುಬಲಿ ಸೊಲ್ಲಾಪುರೆ, ಭರಮಪ್ಪಾ ಲಠ್ಠೆ, ಸುಕುಮಾರ ಪಾಟೀಲ, ಸಂಜಯ ನಿಲಜಗಿ, ಕಿರಣ ಸೊಲ್ಲಾಪುರೆ, ಅಕ್ಕಪ್ಪಾ ಖತಗಲ್ಲಿ, ಪಾರೇಶ ಗದ್ದಿ, ಅನುಪಮಾ ಕಬಾಡಗೆ, ಅಶ್ವಿನಿ ಪಾಟೀಲ, ಸಿದ್ದಪ್ಪ ಕಂಠಿಕಾರ, ಅಶೋಕ ನಾಯಿಕ ಮತ್ತಿತರರು ಉಪಸ್ಥಿತರಿದ್ದರು.ನಿರ್ದೇಶಕ ಪ್ರಜ್ವಲ ನಿಲಜಗಿ ಸ್ವಾಗತಿಸಿದರು. ಶಾಖಾ ಕಾರ್ಯದರ್ಶಿ ಸಂತೋಷ ರಜಪೂತ ನಿರೂಪಿಸಿದರು. ಪ್ರವೀಣ ಪಾಟೀಲ ವಂದಿಸಿದರು. ಗಿರೀಶ ಕುಲಕರ್ಣಿ ಲಾಭ-ಹಾನಿ ಪತ್ರಿಕೆ ಓದಿದರು. ರವೀಂದ್ರ ಜಯರಾಮಗೋಳ ಬ್ಯಾಲನ್ಸ್ ಶೀಟ್ ಓದಿದರು. ಶೇಖರ ಇಂಚಲ ಅಂದಾಜು ಪತ್ರಿಕೆ ಓದಿದರು. ಸಹಕಾರಿ ಅಧೀನ ಶಿಕ್ಷಣ ಸಂಸ್ಥೆಯ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು.ಬ್ಯಾಂಕ್‌ನ ಸೇವೆಯನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗಿದೆ. ಬ್ಯಾಂಕಿನ ಬೆನ್ನೆಲುಬು ಎಂದೇ ಭಾವಿಸಿರುವ ಗ್ರಾಹಕ-ಸದಸ್ಯರ ಏಳಿಗೆಯಲ್ಲಿ ಬ್ಯಾಂಕಿನ ಏಳಿಗೆ ಇದೆ ಧ್ಯೇಯದೊಂದಿಗೆ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ಮುಂಬರುವ ದಿನಗಳಲ್ಲಿ ಬ್ಯಾಂಕ್‌ನ ಕಾರ್ಯಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸುವ ಚಿಂತನೆಯಿದೆ. ಸಾಲಗಾರರಿಗೆ ಆರ್ಥಿಕ ಹೊರೆಯಾಗದಂತೆ ಹಾಗೂ ಠೇವುದಾರರ ವಿಶ್ವಾಸ ಉಳಿಸಿಕೊಂಡು ಬ್ಯಾಂಕ್ ಗಟ್ಟಿಯಾಗಿ ನಿಂತಿದೆ.

-ಮಹಾವೀರ ನಿಲಜಗಿ, ಅಧ್ಯಕ್ಷರು ಮಹಾವೀರ ಶಿಕ್ಷಣ ಸಂಸ್ಥೆ ಹುಕ್ಕೇರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈಕೊಟ್ಟ ಮುಂಗಾರು, ಅನ್ನದಾತ ಕಂಗಾಲು!
ಉದ್ಯಮ ಆರಂಭಿಸುವಂತ ವಾತಾವರಣ ನಿರ್ಮಾಣವಾಗಲಿ