ಐಗಳಿ: ಭಗವಾನ ಮಹಾವೀರರ ಜಯಂತಿ ನಿಮಿತ್ತ ಸ್ಥಳೀಯ ಜೈನ ಮಂದಿರದಲ್ಲಿ ಬೆಳಗ್ಗೆ ವಿಶೇಷ ಪೂಜೆ ಸಂಭ್ರಮದಿಂದ ಜರುಗಿತು. ಹಿರಿಯರಾದ ಮಲ್ಲಪ್ಪ ಸವದಿ ದ್ವಜಾರೋಹಣ ನೆರವೇರಿಸಿದರು.
ಐಗಳಿ: ಭಗವಾನ ಮಹಾವೀರರ ಜಯಂತಿ ನಿಮಿತ್ತ ಸ್ಥಳೀಯ ಜೈನ ಮಂದಿರದಲ್ಲಿ ಬೆಳಗ್ಗೆ ವಿಶೇಷ ಪೂಜೆ ಸಂಭ್ರಮದಿಂದ ಜರುಗಿತು. ಹಿರಿಯರಾದ ಮಲ್ಲಪ್ಪ ಸವದಿ ದ್ವಜಾರೋಹಣ ನೆರವೇರಿಸಿದರು. ಭಗವಾನ ಮಹಾವೀರರ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವವು ಕೂಡ ಗ್ರಾಮದಲ್ಲಿ ಪ್ರದಕ್ಷಿಣೆ ಹಾಕಿತು. ಶ್ರಾವಕಿಯರು ಕುಂಭ ಹಾಗೂ ಆರತಿಯೊಂದಿಗೆ ಭಾಗಿಯಾಗಿ ಜೈಕಾರ ಹಾಕುವ ಮೂಲಕ ಮುಖ್ಯ ರಸ್ತೆ ಮೂಲಕ ಹಾಯ್ದು ಯುವಕ ಜಾಂಜಪತಾಕ ಹಾಗೂ ವಿವಿಧ ವಾಧ್ಯಗಳ ಮೂಲಕ ಸಡಗರ ಸಂಭ್ರಮದಿಂದ ಪಲ್ಲಕ್ಕಿ ಉತ್ಸವ ಜರುಗಿತು. ನಂತರ ಅನ್ನ ಪ್ರಸಾದ ವಿತರಿಸಿದರು.
ಈ ವೇಳೆ ಅಪ್ಪಾಸಾಬ ಮಾಕಾಣಿ, ಸುರೇಶ ಮಾಕಾಣಿ, ಮಹಾವೀರ ಬೆಳಗಲಿ, ಮಹಾಬಲ್ ಮಾಕಾಣಿ, ಸಂಜು ಮಾಕಾಣಿ, ಧರೆಪ್ಪಾ ಮಾಕಾಣಿ, ತವನಪ್ಪ ಸವದಿ, ಮನೋಹರ ಬೆಳಗಲಿ, ಸುರೇಶ ಬೆಳಗಲಿ, ಬಾಬು ಮಾಕಾಣಿ ಅನೇಕರು ಭಾಗಿಯಾಗಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.