ಕನ್ನಡಪ್ರಭ ವಾರ್ತೆ ಕೆಜಿಎಫ್ಶಾಲೆಯಲ್ಲಿ ಮಕ್ಕಳ ಸುರಕ್ಷಗೆ ಆದ್ಯತೆ ಇಲ್ಲ, ಶಾಲೆಯಲ್ಲಿ ಪುಸ್ತಕ ಸಮವಸ್ತ್ರ ದುಪಟ್ಟು ಬೆಲೆಗೆ ಮಾರಾಟ, ಆಗ್ನಿ ಅವಘಡದ ಮುನ್ನಚ್ಚರಿಕೆ ಕ್ರಮವಿಲ್ಲ, ಕಟ್ಟಡಕ್ಕೆ ಲೋಕೊಪಯೋಗಿ ಇಲಾಖೆಯಿಂದ ಸುರಕ್ಷತೆ ಪರವಾನಿಗೆ ಪತ್ರವಿಲ್ಲ, ಮಕ್ಕಳಿಗೆ ಕುಡಿವ ನೀರಿನ ಸೌಲಭ್ಯವಿಲ್ಲ, ಕಲ್ಯಾಣ ಮಂಟಪದಲ್ಲಿ ಮಕ್ಕಳಿಗೆ ಪಾಠ, ತಗಡಿನ ಷೇಡ್‌ನಲ್ಲಿ ಮಕ್ಕಳಿಗೆ ಪಾಠ, ಮಕ್ಕಳು ಆಟವಾಡಲು ಆಟದ ಮೈದಾನವಿಲ್ಲ, ೨೫೦೦ ಮಕ್ಕಳಿಗೆ ಕೇವಲ ೧೫ ಶೌಚಾಲಯ....
ಶ್ರೀ ಮಹಾವೀರ್ ಜೈನ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಡಿಡಿಪಿಐ ಕೃಷ್ಟಮೂರ್ತಿ ಈ ಅವ್ಯವಸ್ಥೆಯನ್ನು ಕಂಡು ದಂಗಾದರು. ಶ್ರೀ ಮಹವೀರ್ ಜೈನ್ ಶಾಲೆಯ ಅವಾಂತರಗಳು ಕುರಿತು ಪೋಷಕರು ನೀಡಿದ ದೂರುಗಳ ಹಿನ್ನೆಲೆಯಲ್ಲಿ ಶುಕ್ರವಾರ ಡಿಡಿಪಿಐ ಮತ್ತು ಬಿಇಒ ನೇತೃತ್ವದ ತಂಡ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿತು.ದಾಖಲೆ ಸಲ್ಲಿಸಲು 2 ದಿನ ಗಡುವು
ಎರಡು ದಿನಗಳ ಒಳಗೆ ಶಾಲೆಗೆ ಸಂಬಂದಪಟ್ಟ ಎಲ್ಲ ದಾಖಲೆಗಳನ್ನು ಒದಗಿಸುವಂತೆ ಶಾಲೆಯ ಆಡಳಿತ ಮಂಡಳಿಯವರಿಗೆ ಸೂಚನೆ ನೀಡಿದರು. ಇಲ್ಲದೆ ಹೋದರೆ ನಿಮ್ಮ ಶಾಲೆಯ ಮಾನ್ಯತೆಯನ್ನು ರದ್ದುಪಡಿಸುವುದಾಗಿ ಡಿಡಿಪಿಐ ಕೃಷ್ಣಮೂರ್ತಿಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು.ಮಕ್ಕಳ ಅನುಪಾತಕ್ಕೆ ತಕ್ಕಂತೆ ನುರಿತ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು, ಲೋಕಪಯೋಗಿ ಇಲಾಖೆಯಿಂದ ಕಟ್ಟಡದ ಸುರಕ್ಷತೆಯ ಬಗ್ಗೆ ಪ್ರಮಾಣ ಪತ್ರ, ಅಗ್ನಿಶಾಮಕ ದಳದವರಿಂದ ಸುರಕ್ಷತೆಯ ಪತ್ರ, ಮಕ್ಕಳ ಆಟವಾಡುವ ಮೈದಾನದ ಚಿತ್ರ, ಸೇರಿದಂತೆ ಎರಡು ದಿನಗಳಲ್ಲಿ ಅಗತ್ಯವಿರುವ ದಾಖಲೆಗಳನ್ನು ಶಿಕ್ಷಣ ಇಲಾಖೆಗೆ ಒದಗಿಸಬೇಕೆಂದು ತಿಳಿಸಿದರು.
ಮಾಹಿತಿ ಕೋರಿದ ಡಿಡಿಪಿಐ ಶ್ರೀ ಮಹಾವೀರ್ ಜೈನ್ ಶಾಲೆಯ ಮಕ್ಕಳ ಸಂಖ್ಯೆ, ಸಂಖ್ಯೆಗೆ ಅನುಗುಣವಾಗಿ ಶಾಲಾ ಕೊಠಡಿಗಳು, ಶೌಚಾಲಯಗಳು, ಗ್ರಂಥಾಲಯ, ಶಿಕ್ಷಕರ ಅರ್ಹತೆ ಕುರಿತು ಸಂಪೂರ್ಣ ಮಾತಿಯನ್ನು ಸಂಜೆಯೊಳಗೆ ನೀಡುವಂತೆ ಬಿಇಒ ಮುನಿವೆಂಕಟರಾಮಚಾರಿ ಅವರಿಗೆ ಡಿಡಿಪಿಐ ಸೂಚಿಸಿದರು.