ಕನ್ನಡಪ್ರಭ ವಾರ್ತೆ ತಾಳಿಕೋಟೆ
ಪಟ್ಟಣದ ಮುಸ್ಲಿಂ ಸಮಾಜದ ಪ್ರತಿಷ್ಠಿತ ದಿ.ಮುಸ್ಲಿಂ ಕೋ- ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ನೂತನ ಅಧ್ಯಕ್ಷರಾಗಿ ಮಹಿಬೂಬ್ ಹಜರೇಸಾಬ್ ಕೆಂಭಾವಿ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಹಿಂದಿನ ಅಧ್ಯಕ್ಷ ಚಂದಾಹುಸೇನ್ ಖಾಂಜಾದೆ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಹಿಬೂಬ್ ಹಜರೇಸಾಬ್ ಕೆಂಭಾವಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ೧೨ ಜನ ನಿರ್ದೇಶಕರ ಬಲ ಹೊಂದಿರುವ ಮುಸ್ಲಿಂ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ೭ ನಿರ್ದೇಶಕರು ಪಾಲ್ಗೊಂಡಿದ್ದರು. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಉತ್ನಾಳ, ಸಹಾಯಕರಾಗಿ ಬ್ಯಾಂಕನ ವ್ಯವಸ್ಥಾಪಕ ಎಲ್.ಆರ್.ನಾಗೂರ ಕಾರ್ಯನಿರ್ವಹಿಸಿದರು. ಉಪಾಧ್ಯಕ್ಷ ರಫೀಕ್ ಬೇಪಾರಿ, ನಿರ್ದೇಶಕರಾದ ಚಂದಾಹುಸೇನ ಖಾಂಜಾದೆ, ಮಹ್ಮದ್ ಇಸ್ಮಾಯಿಲ್(ತನವೀರ)ಮನಗೂಳಿ, ದಾದೇಪೀರ ಚೌದ್ರಿ, ಮುರ್ತುಜಾ(ಮುನ್ನಾ) ಅರ್ಜುಣಗಿ, ಸಕೀನಾಬಿ ಚಂದಾಸಾಬ್ ಲಾಹೋರಿ ಇದ್ದರು. ವಿಜಯೋತ್ಸವ:
ಮುಸ್ಲಿಂ ಬ್ಯಾಂಕ್ ಅಧ್ಯಕ್ಷರಾಗಿ ಮಹಬೂಬ್ ಕೆಂಭಾವಿ ಅವಿರೋಧ ಆಯ್ಕೆಯಾಗುತ್ತಿದ್ದಂತೆ ಬೆಂಬಲಿಗರು ಹಾಗೂ ಮುಖಂಡರುಗಳು ಪಟಾಕಿ ಸಿಡಿಸಿ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು. ಸಮಾಜದ ಗಣ್ಯರಾದ ಮಾಸೂಮಸಾಬ್ ಕೆಂಭಾವಿ, ಅಬ್ದುಲ್ ಗನಿಸಾಬ ಲಾಹೋರಿ, ಮುರ್ತುಜಾಸಾಬ್ ಜಮಾದಾರ, ಅಬ್ದುಲ್ ರೆಹಮಾನಸಾಬ್ ಎಕೀನ್, ಹೈದರಶಾ ಮಕಾಂದಾರ, ಖಾಜಾಹುಸೇನ್ ಸಗರ, ಹಸನಸಾಬ್ ಮನಗೂಳಿ, ಆದಮಸಾಬ್ ಕೊಡೆಕಲ್ಲ, ಇಬ್ರಾಹಿಂ ಆರಬೋಳ, ಎನ್.ಎ.ಖಾಜಿ, ಅಬ್ಬಾಸಲಿ ನಿಡಗುಂದಿ, ರಫೀಕ ಬೇಪಾರಿ, ಆಸೀಫ ಕೆಂಭಾವಿ, ಲಾಡ್ಲೇಮಶಾಕ ಮುರಾಳ, ಹುಸೇನಸಾಬ ಕೆಂಭಾವಿ, ದಸ್ತಗೀರ ಕೆಂಭಾವಿ, ಮಹಮದ್ ಕೆಂಭಾವಿ, ಮೂಸಾ ಕೆಂಭಾವಿ, ಬಸೀರ್ ಎಕ್ಕೇಲಿ, ಸಂಜೀವ ಬರದೇನಾಳ, ರಾಮಣ್ಣ ಕಟ್ಟಿಮನಿ ಹಾಗೂ ಅಭಿಮಾನಿಗಳು ಇದ್ದರು.ನನ್ನ ಮೇಲೆ ವಿಶ್ವಾಸವಿಟ್ಟು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಎಲ್ಲ ನಿರ್ದೇಶಕ ಮಂಡಳಿಯ ಸಹಕಾರದೊಂದಿಗೆ ಬ್ಯಾಂಕಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.-ಮಹಬೂಬ್ ಕೆಂಭಾವಿ,
ನೂತನ ಅಧ್ಯಕ್ಷರು.