ಮಾಹೆ 34ನೇ ಘಟಿಕೋತ್ಸವ: 10,277 ವಿದ್ಯಾರ್ಥಿಗಳಿಗೆ ಪದವಿ

KannadaprabhaNewsNetwork |  
Published : Nov 18, 2026, 02:30 AM IST
17ಮಾಹೆ | Kannada Prabha

ಸಾರಾಂಶ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದ ಸಂಭ್ರಮಕ್ಕೆ ಸಜ್ಜಾಗಿದ್ದು, ಒಟ್ಟು 10,277 ವಿದ್ಯಾರ್ಥಿಗಳು ಈ ಘಟಿಕೋತ್ಸವದಲ್ಲಿ ಪದವಿ ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಹೇಳಿದ್ದಾರೆ.

ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದ ಸಂಭ್ರಮಕ್ಕೆ ಸಜ್ಜಾಗಿದ್ದು, ಒಟ್ಟು 10,277 ವಿದ್ಯಾರ್ಥಿಗಳು ಈ ಘಟಿಕೋತ್ಸವದಲ್ಲಿ ಪದವಿ ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಹೇಳಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಗಳನ್ನು ನೀಡಿದ ಡಾ. ಬಲ್ಲಾಳ್, ನ. 19ರಿಂದ 22ರವರೆಗೆ ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ, 7,694 ವಿದ್ಯಾರ್ಥಿಗಳು, ನ. 28 ಮತ್ತು 29ರಂದು ಬೆಂಗಳೂರು ಕ್ಯಾಂಪಸ್‌ನಲ್ಲಿ ನಡೆಯುವ ಸಮಾರಂಭದಲ್ಲಿ 2,583 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ ಎಂದರು.

ವಿವಿಧ ವಿಷಯಗಳಲ್ಲಿ ಸಂಶೋಧನೆ ನಡೆಸಿರುವ 207 ವಿದ್ಯಾರ್ಥಿಗಳಿಗೆ ಡಾಕ್ಟರೇಟ್‌ (ಪಿಎಚ್‌ಡಿ) ಪದವಿ ಪ್ರದಾನ ಮಾಡಲಾಗುವುದು ಎಂದವರು ಹೇಳಿದರು..

ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು, ರಾಷ್ಟ್ರ ಮತ್ತು ವಿಶ್ವಕ್ಕೆ ನುರಿತ ವೃತ್ತಿಪರರನ್ನಷ್ಟೇ ಅಲ್ಲ, ಉತ್ತಮ ನಾಗರಿಕರನ್ನೂ ನೀಡಬೇಕು ಎಂಬ ನಂಬಿಕೆಯಲ್ಲಿ ಮಾಹೆ ಕಾರ್ಯನಿರ್ವಹಿಸುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಹೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ಡಾ. ಆನಂದ ವೇಣುಗೋಪಾಲ್, ಸಹಉಪಕುಲಪತಿಗಳಾದ ಮೇ.ಜ. ಡಾ. ಮ್ಯಾಥ್ಯೋ ಜಾಕೋಬ್, ಕುಲಸಚಿವರಾದ ಡಾ. ಪಿ. ಗಿರಿಧರ್ ಕಿಣಿ ಮತ್ತು ಡಾ. ಸಂದೀಪ್ ಎಸ್. ಶೆಣೈ ಉಪಸ್ಥಿತರಿದ್ದರು.ದೇಶವಿದೇಶದ ಉದ್ಯಮ-ಶಿಕ್ಷಣ ತಜ್ಞರು ಭಾಗಿಈ ಬಾರಿಯ ಘಟಿಕೋತ್ಸವದಲ್ಲಿ ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಹೆಸರು ಮಾಡಿರುವ ಪ್ರಮುಖರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. 19 ರಂದು ಕೋನೆ ಎಲಿವೇಟರ್ಸ್‌ ಇಂಡಿಯ - ಸೌತ್‌ ಏಶಿಯಾ ಇದರ ಅಧ್ಯಕ್ಷ ಅಮಿತ್ ಗೋಸ್ಸೇನ್, 20 ರಂದು ಹಿಟಾಚಿ ಸಿಸ್ಟಮ್ಸ್‌, ಇಂಡಿಯ ಇದರ ನಿರ್ದೇಶಕ ಕೊಜಿ ತ್ಸುಬೋಟಾ, 21ರಂದು ಯುಕೆಯ ಲ್ಯಾಂಕಸ್ಟರ್‌ ವಿವಿಯ ಸಹಕುಲಪತಿ ಪ್ರೊ. ಜೋ ರೈಕ್ರಾಫ್ಟ್ ಮಲೋನ್, 22 ರಂದು ಕೆನಡದ ನ್ಯೂಬ್ರನ್ಸ್‌ವಿಕ್ ವಿಶ್ವವಿದ್ಯಾಲಯದ ಕುಲಪತಿ ಡಾ. ಕ್ಯಾಥಿ ವಿಲ್ಸನ್, 28ರಂದು ಸಿಸ್ಕೋ ಇಂಡಿಯ - ಸಾರ್ಕ್‌ ಇದರ ವ್ಯವಸ್ಥಾಪಕ ನಿರ್ದೇಶಕ ತ್ರಿದೀಬ್ ರಾಯ್, 29 ರಂದು ಫಿಲಿಪ್ಸ್‌ ಇಂಡಿಯ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭರತ್ ಆರ್. ಶೇಷ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ
ವಿಶ್ವಮಟ್ಟದ ಶ್ರೇಷ್ಠ ವಾಸ್ತುಶಿಲ್ಪಗಳ ತಾಣ ವಿಜಯಪುರ