ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 108ನೇ ಸಂಸ್ಥಾಪನಾ ದಿನವನ್ನು ನ. 11ರಂದು ಹೆಮ್ಮೆಯಿಂದ ಆಚರಿಸಿತು. ಬ್ಯಾಂಕನ್ನು 1919ನೇ ನ. 11 ರಂದು ಸ್ಥಾಪಿಸಲಾಯಿತು. ಈ ಐತಿಹಾಸಿಕ ಸಂದರ್ಭದಲ್ಲಿ, ಒಂದು ಶತಮಾನಕ್ಕೂ ಹೆಚ್ಚಿನ ಕಾಲದ ನಂಬಿಕೆ, ನಾವೀನ್ಯತೆ ಮತ್ತು ಬ್ಯಾಂಕಿಂಗ್ ಸೇವೆಯಲ್ಲಿನ ಶ್ರೇಷ್ಟತೆಯನ್ನು ಸ್ಮರಿಸುವ ಉದ್ದೇಶದಿಂದ ಉಡುಪಿಯ ಮಣಿಪಾಲ್ ಇನ್‌ನಲ್ಲಿ ಸ್ಮರಣೀಯ ಸಮಾರಂಭವನ್ನು ಆಯೋಜಿಸಲಾಗಿತ್ತು.
ಉಡುಪಿ : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 108ನೇ ಸಂಸ್ಥಾಪನಾ ದಿನವನ್ನು ನ. 11ರಂದು ಹೆಮ್ಮೆಯಿಂದ ಆಚರಿಸಿತು. ಬ್ಯಾಂಕನ್ನು 1919ನೇ ನ. 11 ರಂದು ಸ್ಥಾಪಿಸಲಾಯಿತು. ಈ ಐತಿಹಾಸಿಕ ಸಂದರ್ಭದಲ್ಲಿ, ಒಂದು ಶತಮಾನಕ್ಕೂ ಹೆಚ್ಚಿನ ಕಾಲದ ನಂಬಿಕೆ, ನಾವೀನ್ಯತೆ ಮತ್ತು ಬ್ಯಾಂಕಿಂಗ್ ಸೇವೆಯಲ್ಲಿನ ಶ್ರೇಷ್ಟತೆಯನ್ನು ಸ್ಮರಿಸುವ ಉದ್ದೇಶದಿಂದ ಉಡುಪಿಯ ಮಣಿಪಾಲ್ ಇನ್‌ನಲ್ಲಿ ಸ್ಮರಣೀಯ ಸಮಾರಂಭವನ್ನು ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಬ್ಯಾಂಕಿನ ನಿವೃತ್ತ ಡಿಜಿಎಂ ನಾಗರಾಜ ಶೆಟ್ಟಿ, ನಿವೃತ್ತ ಎಜಿಎಂ ಪುಷ್ಪಾ ಕಿಶೋರ್, ಪ್ರಾದೇಶಿಕ ಮುಖ್ಯಸ್ಥರಾದ ಅಶೋಕ್ ಭಂಡಗೆ ಅವರು ಬ್ಯಾಂಕಿನ ಸಿಬ್ಬಂದಿ, ಗ್ರಾಹಕರು, ಪಿಂಚಣಿದಾರರು, ಮೌಲ್ಯಯುತ ಪಾಲುದಾರರು ಹಾಗೂ ಗಣ್ಯ ಅತಿಥಿಗಳೊಂದಿಗೆ ಭಾಗವಹಿಸಿದ್ದರು.ಬ್ಯಾಂಕಿನ ಸಂಸ್ಥಾಪಕರಲ್ಲೊಬ್ಬರಾದ ಹಾಜಿ ಅಬ್ದುಲ್ಲಾ ಸಾಹೇಬ್ ಅವರಿಗೆ ಹಾಜಿ ಅಬ್ದುಲ್ಲಾ ಸ್ಮಾರಕ ವಸ್ತುಸಂಗ್ರಹಾಲಯದಲ್ಲಿ ಗೌರವ ನಮನ ಸಲ್ಲಿಸಲಾಯಿತು ಸಸಿ ನೆಡುವ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.ಸಂಸ್ಥಾಪನಾ ದಿನಕ್ಕೆ ಹೊಸ ಸೇವೆಗಳು ಸಂಸ್ಥಾಪನಾ ದಿನಾಚರಣೆಯ ಭಾಗವಾಗಿ, ಬ್ಯಾಂಕ್ ಗ್ರಾಹಕರ ವ್ಯವಹಾರಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಇನ್ನಷ್ಟು ಸರಳಗೊಳಿಸುವ ಉದ್ದೇಶದಿಂದ ಕೆಳಕಂಡ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ಪರಿಚಯಿಸಿತು.ಡಿಜಿಟೈಸ್ಡ್ ಕಾರ್ಪೊರೇಟ್ ಸಂಬಳ ಖಾತೆಗಳು, ಯೂನಿಯನ್ ವೆಹಿಕಲ್ ಪ್ಲಸ್, ಪಿಪಿಎಫ್ ಆಧಾರಿತ ಡಿಜಿಟಲ್ ಸಾಲ, ಯುಪಿಎ - ಗ್ಲೋಬಲ್ ಸರ್ಕಲ್, ಐಸಿಡಿ ಮತ್ತು ಆಟೋಪೇ, ಆನ್‌ಲೈನ್ ಲಾಕರ್ ಸೌಲಭ್ಯ, ಎಂ-ಪಾಸ್‌ಬುಕ್, ಎನ್‌ಪಿಎಸ್ ತತ್ಕಾಲ್, ಓಮ್ನಿಚಾನೆಲ್ ಅನುಭವದೊಂದಿಗೆ ರೀಟೇಲ್ ಇಂಟರ್ನೆಟ್ ಬ್ಯಾಂಕಿಂಗ್, ಡಿಜಿಟಲ್ ಸಾಲ್ವೆನ್ಸಿ ಪ್ರಮಾಣಪತ್ರ ಮತ್ತು ಕೇಂದ್ರೀಕೃತ ಗ್ರಾಹಕ ನಿರ್ವಹಣಾ ಪೋರ್ಟಲ್‌ಗಳು ಪರಿಚಯಿಸಲಾದ ಹೊಸ ಸೇವೆಗಳಾಗಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.