ಐವಿಎಫ್‌ ಚಿಕಿತ್ಸೆಯಲ್ಲಿ ಆಫ್ರಿಕಾ ವೈದ್ಯನ ಅಪೂರ್ವ ಸಾಧನೆ

KannadaprabhaNewsNetwork |  
Published : Apr 20, 2026, 02:45 AM IST
ಮಣಿಪಾಲ ಮಾಹೆಯಲ್ಲಿ ಸುಧಾರಿತ ಐವಿಎಫ್ ತರಬೇತಿ ಪಡೆದ ವೈದ್ಯರಿಗೆ ಅಭಿನಂದನೆ | Kannada Prabha

ಸಾರಾಂಶ

ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮತ್ತು ಮೆರ್ಕ್ ಫೌಂಡೇಶನ್ ಸಹಯೋಗದಲ್ಲಿ ʼಮೋರ್ ದ್ಯಾನ್ ಎ ಮದರ್ʼ ಅಭಿಯಾನದ ಅಡಿಯಲ್ಲಿ 13 ಮಂದಿ ವಿದೇಶಿ ವೈದ್ಯರಲ್ಲಿ ಸುಧಾರಿತ ಐವಿಎಫ್ ತರಬೇತಿ ನೀಡಲಾಗಿದ್ದು, ಅವರೀಗ ತಂತಮ್ಮ ದೇಶಗಳಲ್ಲಿ ಸಂತಾನಹೀನ ಕುಟುಂಬಗಳಲ್ಲಿ ಹೊಸ ಬೆಳಕು ಮೂಡಿಸುತ್ತಿದ್ದಾರೆ.

ಮಣಿಪಾಲ: ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮತ್ತು ಮೆರ್ಕ್ ಫೌಂಡೇಶನ್ ಸಹಯೋಗದಲ್ಲಿ ʼಮೋರ್ ದ್ಯಾನ್ ಎ ಮದರ್ʼ ಅಭಿಯಾನದ ಅಡಿಯಲ್ಲಿ 13 ಮಂದಿ ವಿದೇಶಿ ವೈದ್ಯರಲ್ಲಿ ಸುಧಾರಿತ ಐವಿಎಫ್ ತರಬೇತಿ ನೀಡಲಾಗಿದ್ದು, ಅವರೀಗ ತಂತಮ್ಮ ದೇಶಗಳಲ್ಲಿ ಸಂತಾನಹೀನ ಕುಟುಂಬಗಳಲ್ಲಿ ಹೊಸ ಬೆಳಕು ಮೂಡಿಸುತ್ತಿದ್ದಾರೆ.ಅವರಲ್ಲೊಬ್ಬರಾದ ಆಫ್ರಿಕಾ ಖಂಡದ ಬುರ್ಕಿನಾ ಫಾಸೊ ದೇಶದ ಡಾ. ಪಾಲ್ ಕೌರೊಗೊ ಅವರು,ಈ ಭ್ರೂಣವಿಜ್ಞಾನ ಮತ್ತು ಸುಧಾರಿತ ಸಂತಾನೋತ್ಪತ್ತಿ ತಂತ್ರಜ್ಞಾನದಲ್ಲಿ ಪರಿಣತಿ ಪಡೆದಿದ್ದು, ಆಫ್ರಿಕಾದ ಅನೇಕ ಭಾಗಗಳಲ್ಲಿ ಇಂದಿಗೂ ಇಂತಹ ತಜ್ಞರ ಕೊರತೆಯಿದ್ದು, ಡಾ. ಪಾಲ್ ಅವರ ಈ ಜ್ಞಾನವು ಅಲ್ಲಿನ ಜನರಿಗೆ ವರದಾನವಾಗಲಿದೆ.ಈ ತರಬೇತಿ ಪಡೆದ ವೈದ್ಯರಿಗೆ ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು ಪ್ರಮಾಣಪತ್ರಗಳನ್ನು ವಿತರಿಸಿ, ಅಭಿನಂದಿಸಿದರು, ನಂತರ ʼಇಂದಿಗೂ ಸಂತಾನಹೀನತೆಯನ್ನು ಕಳಂಕ ಎನ್ನುವ ರೀತಿಯಲ್ಲಿ ಸಮಾಜ ನೋಡುತ್ತಿದೆ. ಇದರಿಂದಾಗಿ ಮಹಿಳೆಯರು ತಾರತಮ್ಯಕ್ಕೊಳಗಾಗುತ್ತಿದ್ದಾರೆ. ವಿಜ್ಞಾನದ ಮೂಲಕ ಮಹಿಳೆಯನ್ನು ಸಬಲೀಕರಣ ಮಾಡುವುದೇ ಈ ಕಳಂಕವನ್ನು ದಿಟ್ಟವಾಗಿ ಎದುರಿಸಲು ಇರುವ ದಾರಿ. ಈ ನಿಟ್ಟಿನಲ್ಲಿ ಡಾ. ಪಾಲ್ ಕೌರೊಗೊರಂಥ ವೈದ್ಯರ ಸಾಧನೆ ಅಭಿನಂದನೀಯʼ ಎಂದು ಅಭಿಪ್ರಾಯಪಟ್ಟರು.ʼಆಫ್ರಿಕಾ ಮತ್ತು ಏಷ್ಯಾದ ಸುಮಾರು 300ಕ್ಕೂ ಹೆಚ್ಚು ವೈದ್ಯರಿಗೆ ಈ ವಿಶೇಷ ತರಬೇತಿ ನೀಡಿದ್ದೇವೆ. ಈ ಹಿಂದೆ ಚಿಕಿತ್ಸೆ ಲಭ್ಯವಿರದಿದ್ದ ಹಳ್ಳಿ ಅಥವಾ ನಗರಗಳಲ್ಲಿ ಈಗ ಈ ತರಬೇತಿ ಪಡೆದ ತಜ್ಞರು ಹೊಸ ಕ್ಲಿನಿಕ್‌ಗಳನ್ನು ತೆರೆದು ಜನರಿಗೆ ಸೇವೆ ನೀಡುತ್ತಿದ್ದಾರೆʼ ಎಂದು ಈ ಯೋಜನೆಯ ಸಂಯೋಜಕರಾದ ಡಾ. ಸತೀಶ್ ಅಡಿಗ ಹೇಳಿದರು.ಮಾಹೆಯ ಆರೋಗ್ಯ ವಿಜ್ಞಾನಗಳ ಸಹ ಕುಲಪತಿ ಡಾ. ಶರತ್ ರಾವ್, ಮಾಹೆಯ ರಿಜಿಸ್ಟ್ರಾರ್ ಡಾ. ಗಿರಿಧರ್ ಕಿಣಿ ಉಪಸ್ಥಿತರಿದ್ದರು. ಸಾವಿರಾರು ದಂಪತಿಗಳ ಕನಸು ನನಸಾಗಿಸುತ್ತೇನೆ: ನಮ್ಮ ದೇಶದಲ್ಲಿ ಇಂತಹ ಸಮಸ್ಯೆ ಇರುವವರು ಯಾರ ಬಳಿಯೂ ಹೇಳಿಕೊಳ್ಳಲಾಗದೆ ಸಂಕಟ ಪಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಅವರಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಆಸ್ಪತ್ರೆ ಸೌಲಭ್ಯ ಮತ್ತು ತಜ್ಞರ ಕೊರತೆ ಇದೆʼ ಎಂದ ಡಾ. ಪಾಲ್‌, ʼಕೇವಲ ಆಸ್ಪತ್ರೆ ಕಟ್ಟುವುದು ನನ್ನ ಗುರಿಯಲ್ಲ, ಮಕ್ಕಳಿಲ್ಲದ ದಂಪತಿಗಳ ಬಾಳಿನಲ್ಲಿ ಹೊಸ ಚೈತನ್ಯ ಮೂಡಿಸುವುದು ಮುಖ್ಯ ಆಶಯವಾಗಿದೆ. ನಮ್ಮ ಭಾಗದಲ್ಲಿ ಚಿಕಿತ್ಸೆಯಿಂದ ವಂಚಿತರಾಗಿದ್ದ ಸಾವಿರಾರು ದಂಪತಿ ಕನಸುಗಳನ್ನು ನನಸು ಮಾಡಬೇಕಿದೆ. ಇದಕ್ಕೆ ಸ್ಫೂರ್ತಿ ನೀಡಿದ ಮಾಹೆಗೆ ನಾನು ಕೃತಜ್ಞನಾಗಿದ್ದೇನೆʼ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಸಮಾಜ ಕಟ್ಟುವ ಜವಾಬ್ದಾರಿ ಮಹಿಳೆಯರ ಮೇಲಿದೆ
ಲೀಷಟ್ ಸ್ಥಲಗಳು ವಚನಕಾರರ ಅನುಭಾವದ ಸಾರ