ಕನ್ನಡಪ್ರಭ ವಾರ್ತೆ ಉಡುಪಿ
ನಂತರ ಮಾತನಾಡಿದ ಅವರು ಇಂದಿನ ಸಾಮಾಜಿಕ ಸಂಘರ್ಷ ಮತ್ತು ಹವಾಮಾನ ಬದಲಾವಣೆಯ ಈ ಸಮಯದಲ್ಲಿ ಗಾಂಧಿ ತತ್ವವು ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ. ಡಿ. ವೆಂಕಟೇಶ್, ಅಪೋಲೋ ವಿಶ್ವವಿದ್ಯಾನಿಲಯದ ಕುಲಪತಿ ಡಾ. ವಿನೋದ್ ಭಟ್ ಅವರು ಜಿ.ಸಿ.ಪಿ.ಎ.ಎಸ್. ನ ಹತ್ತು ವರ್ಷಗಳ ಪ್ರಯಾಣದಲ್ಲಿ ಶಿಕ್ಷಣಕ್ಷೇತ್ರಕ್ಕೆ ಮತ್ತು ಸಮಾಜಕ್ಕೆ ನೀಡಿದ ಗಮನಾರ್ಹ ಕೊಡುಗೆಯನ್ನು ಶ್ಲಾಘಿಸಿದರು ಮತ್ತು ಲಿಬರಲ್ ಆರ್ಟ್ಸ್ ಮತ್ತು ಸೋಶಿಯಲ್ ಸೈನ್ಸಸ್ ಕ್ಷೇತ್ರದಲ್ಲಿ ವಿವಿಧ ಜ್ಞಾನಶಾಖೆಯನ್ನು ಬೆಸೆಯುವ ಸಂಸ್ಥೆಯ ವಿಭಿನ್ನತೆಯನ್ನು ಒತ್ತಿಹೇಳಿದರು.ಸಂಪನ್ಮೂಲ ವ್ಯಕ್ತಿಗಳಾಗಿದ್ದ ವಿವಿಧ ವಿಷಯ ತಜ್ಞರಾದ ಪ್ರೊ. ಮನು ಚಕ್ರವರ್ತಿ, ಮಹೇಶ್ ದತ್ತಾನಿ, ಪ್ರೊ. ಬುರೋಶಿವ ದಾಸ್‌ಗುಪ್ತ, ಪ್ರೊ. ಗುರ್ಬುಜ್ ಅಕ್ತಾಸ್, ಪ್ರೊ. ಬಾಷಬಿ ಫ್ರೇಸರ್, ಪ್ರೊ. ಫಣಿರಾಜ್, ಪ್ರೊ.ರಾಜಾರಾಂ ತೋಳ್ಪಾಡಿ, ಪ್ರೊ. ಶ್ರೀಕುಮಾರ್, ಪ್ರೊ. ವರದೇಶ್ ಹಿರೇಗಂಗೆ ಅವರು ಇಕೋಸೊಫಿ, ಏಸ್ಥೆಟಿಕ್ಸ್, ಪೀಸ್ ಮತ್ತು ಮೀಡಿಯಾದ ವಿವಿಧ ಆಯಾಮಗಳ ಕುರಿತು ಮಾತನಾಡಿದರು. ಡಾ. ಭ್ರಮರಿ ಶಿವಪ್ರಕಾಶ್ ಕಾರ್ಯಕ್ರಮ ಸಂಯೋಜಿಸಿದರು.