ಮಾಹೆ ಎಂಎಸ್‌ಎಲ್‌ಎಸ್ - ಫ್ಲೋ ಸೈಟೊಮೆಟ್ರಿ ಕಾರ್ಯಾಗಾರ

KannadaprabhaNewsNetwork |  
Published : Jul 14, 2026, 02:45 AM IST
11ಮಾಹೆ | Kannada Prabha

ಸಾರಾಂಶ

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿವಿಯ ಅಂಗಸಂಸ್ಥೆ ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್ (ಎಂಎಸ್‌ಎಲ್‌ಎಸ್) ನ ಏಜಿಂಗ್ ರಿಸರ್ಚ್ ವಿಭಾಗವು ಜೀವಕೋಶಗಳ ಗುಣ ವೈಶಿಷ್ಟ್ಯಗಳನ್ನು ಮಾಪನ ಮಾಡುವ ಕುರಿತ ವಿಶೇಷ ಕಾರ್ಯಾಗಾರವನ್ನು ಜುಲೈ 9-11ರವರೆಗೆ ಆಯೋಜಿಸಿತ್ತು. ಈ ಕಾರ್ಯಾಗಾರದಲ್ಲಿ ದೇಶಾದ್ಯಂತದ 53ಕ್ಕೂ ಹೆಚ್ಚು ಸಂಶೋಧಕರು ಪಾಲ್ಗೊಂಡಿದ್ದರು.

ಮಣಿಪಾಲ: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿವಿಯ ಅಂಗಸಂಸ್ಥೆ ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್ (ಎಂಎಸ್‌ಎಲ್‌ಎಸ್) ನ ಏಜಿಂಗ್ ರಿಸರ್ಚ್ ವಿಭಾಗವು ಜೀವಕೋಶಗಳ ಗುಣ ವೈಶಿಷ್ಟ್ಯಗಳನ್ನು ಮಾಪನ ಮಾಡುವ ಕುರಿತ ವಿಶೇಷ ಕಾರ್ಯಾಗಾರವನ್ನು ಜುಲೈ 9-11ರವರೆಗೆ ಆಯೋಜಿಸಿತ್ತು. ಈ ಕಾರ್ಯಾಗಾರದಲ್ಲಿ ದೇಶಾದ್ಯಂತದ 53ಕ್ಕೂ ಹೆಚ್ಚು ಸಂಶೋಧಕರು ಪಾಲ್ಗೊಂಡಿದ್ದರು.ಮುಖ್ಯ ಭಾಷಣಕಾರರಾಗಿ ಇಂಡಿಯನ್ ಅಕಾಡೆಮಿ ಆಫ್ ನ್ಯೂರೋಸೈನ್ಸಸ್ ಅಧ್ಯಕ್ಷ ಡಾ. ವಿನಯ್ ಕೆ. ಖನ್ನಾ ಅವರು ಸಂಶೋಧನಾ ಸಂವಹನ ಹಾಗೂ ಅದರ ಮೌಲ್ಯಗಳ ಮಹತ್ವದ ಕುರಿತು ವಿವರಿಸಿದರು.ಲಕ್ನೋ ವಿವಿಯ ಮಾಜಿ ಕುಲಪತಿ ಡಾ. ಮನುಕಾ ಖನ್ನಾ, ಎಂಎಸ್‌ಎಲ್‌ಎಸ್ ನಿರ್ದೇಶಕ ಡಾ. ಬಿ. ಎಸ್. ಸತೀಶ್ ರಾವ್, ಸಹಾಯಕ ನಿರ್ದೇಶಕ (ಸಂಶೋಧನೆ) ಡಾ. ಮಂಜುನಾಥ್ ಬಿ. ಜೋಶಿ ಹಾಗೂ ಏಜಿಂಗ್ ರಿಸರ್ಚ್ ವಿಭಾಗದ ಮುಖ್ಯಸ್ಥ ಡಾ. ಕೆ. ಪಿ. ಗುರುಪ್ರಸಾದ್, ಸಹಾಯಕ ಪ್ರಾಧ್ಯಾಪಕ ಡಾ. ಗಿರೀಶ್ ಗಂಗಾಧರನ್ ಪಾಲ್ಗೊಂಡಿದ್ದರು. ಜೈವಿಕ ವೈದ್ಯಕೀಯ ಸಂಶೋಧನೆ ಮತ್ತು ಕ್ಲಿನಿಕಲ್ ರೋಗನಿರ್ಣಯದಲ್ಲಿ ಫ್ಲೋ ಸೈಟೊಮೆಟ್ರಿಯ ತತ್ವಗಳು ಮತ್ತು ಅನ್ವಯಗಳ ಕುರಿತು ಸಮಗ್ರ ತರಬೇತಿ ನೀಡುವುದು. ಸಂಶೋಧನಾ ಸತ್ಯನಿಷ್ಠೆ, ನೈತಿಕ ವೈಜ್ಞಾನಿಕ ಆಚರಣೆಗಳು ಮತ್ತು ಪರಿಣಾಮಕಾರಿ ವೈಜ್ಞಾನಿಕ ಸಂವಹನಗಳ ಉದ್ದೇಶದಿಂದ ಈ ಕಾರ್ಯಾಗಾರವನ್ನು ರೂಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಖ್ಯಾತ ವಿಜ್ಞಾನಿಗಳಿಂದ ತಜ್ಞ ಉಪನ್ಯಾಸಗಳು, ಅನುಭವಿ ವೃತ್ತಿಪರರಿಂದ ಪ್ರಾಯೋಗಿಕ ಪ್ರದರ್ಶನ ಅವಧಿಗಳು ಮತ್ತು ಸಂವಾದಾತ್ಮಕ ಚರ್ಚೆಗಳು ನಡೆದವು. ಇವು ಭಾಗವಹಿಸುವವರಿಗೆ ಫ್ಲೋ ಸೈಟೊಮೆಟ್ರಿಯ ಸೈದ್ಧಾಂತಿಕ ಪರಿಕಲ್ಪನೆಗಳು ಮತ್ತು ವಾಸ್ತವ ಜಗತ್ತಿನ ಅನ್ವಯಗಳ ಬಗ್ಗೆ ಅಮೂಲ್ಯ ಒಳನೋಟಗಳನ್ನು ಒದಗಿಸಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಕ್ಷಣಾ ಸಂಸ್ಥೆ ಆರಂಭ ಹೆಮ್ಮೆ ವಿಚಾರ: ಡಾ. ಭರತ್ ಶೆಟ್ಟಿ
ಪುರಭವನದಲ್ಲಿ ಸಿತಾರ್ ವಾದನ, ಹಿಂದೂಸ್ತಾನಿ ಶಾಸ್ತ್ರೀಯ ಗಾಯನ