ಇಲ್ಲಿನ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ನಿಯಮಿತ (ಪಿಎಲ್‌ಡಿ) ಬ್ಯಾಂಕ್‌ಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮಹೇಶ ಕುಬೇರಪ್ಪ ಕಂಬಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಣಿಬೆನ್ನೂರು: ಇಲ್ಲಿನ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ನಿಯಮಿತ (ಪಿಎಲ್‌ಡಿ) ಬ್ಯಾಂಕ್‌ಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮಹೇಶ ಕುಬೇರಪ್ಪ ಕಂಬಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದು ರಾಣಿಬೆನ್ನೂರು ಸಾಲಗಾರರ ಸದಸ್ಯರ ಕ್ಷೇತ್ರದ ಮಹೇಶ ಕುಬೇರಪ್ಪ ಕಂಬಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಚಂದ್ರಶೇಖರ ಭಜಂತ್ರಿ ಘೋಷಿಸಿದ್ದಾರೆ.
ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರಾದ ವೀರನಗೌಡ ಪೊಲೀಸ್‌ಗೌಡ್ರ, ಕರೇಗೌಡ ಬಾಗೂರ, ಕುಮಾರ ಬತ್ತಿಕೊಪ್ಪ, ಶಿವಪ್ಪ ಕುರುವತ್ತಿ, ರಮೇಶ ಕೆರೂಡಿ, ಶಿವಲೀಲಕ್ಕ ಸುರಳೀಕೆರೆಮಠ, ಹಾಲಪ್ಪ ಭೀಮಪ್ಪ ಲಮಾಣಿ, ಮಂಜುನಾಥ ಬೂಸಮ್ಮನವರ, ಗಣೇಶ ದೇವರಮನಿ, ಬಸವರಾಜ ತೆಂಬದ, ಉದಯಕುಮಾರ ಕನ್ನಳ್ಳಪ್ಪನವರ, ಕಲ್ಪನಾ ಪಾಟೀಲ, ಪ್ರಭಾರ ವ್ಯವಸ್ಥಾಪಕ ರಮೇಶ ರಾಜನಹಳ್ಳಿ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.