ಎನ್‌ಡಿಎ ಒಕ್ಕೂಟದ ಜನತಾದಳದ ರಾಜ್ಯಾಧ್ಯಕ್ಷರಾದ ಮಹಿಮಾ ಪಟೇಲ್ ಅವರನ್ನು ಭೇಟಿಯಾದ ಪಕ್ಷದ ಮುಖಂಡರು, ಹಾಸನ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಬಲಪಡಿಸುವ ಕುರಿತು ಸುದೀರ್ಘವಾಗಿ ಚರ್ಚಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ಪರಿಣಾಮಕಾರಿಯಾಗಿ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯಾಧ್ಯಕ್ಷರು ಮಾರ್ಗದರ್ಶನ ನೀಡಿದರು. ಇದೇ ವೇಳೆ, ಹಿಂದೆ ಜನತಾದಳ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದ ಅರಸೀಕೆರೆಯ ಬಕ್ಕಪ್ಪ ಶಿವಣ್ಣ ಅವರೊಂದಿಗೆ ನಡೆಸಿದ ಹೋರಾಟಗಳು ಹಾಗೂ ಪಕ್ಷ ಸಂಘಟನೆಯ ದಿನಗಳನ್ನು ಮಹಿಮಾ ಪಟೇಲ್ ಸ್ಮರಿಸಿಕೊಂಡರು. ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಎಚ್. ಪಟೇಲ್ ಅವರ ಜನಪರ ಕಾರ್ಯಗಳು ಹಾಗೂ ರಾಜಕೀಯ ಜೀವನದ ನೆನಪುಗಳನ್ನು ಮುಖಂಡರು ಮೆಲುಕು ಹಾಕಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಜಿಲ್ಲೆಯಲ್ಲಿ ಜನತಾದಳ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಿ, ಪಕ್ಷದ ಕಾರ್ಯಚಟುವಟಿಕೆಗಳಿಗೆ ವೇಗ ನೀಡುವಂತೆ ರಾಜ್ಯಾಧ್ಯಕ್ಷರಾದ ಮಹಿಮಾ ಪಟೇಲ್ ಸೂಚನೆ ನೀಡಿದ್ದಾರೆ.ಎನ್‌ಡಿಎ ಒಕ್ಕೂಟದ ಜನತಾದಳದ ರಾಜ್ಯಾಧ್ಯಕ್ಷರಾದ ಮಹಿಮಾ ಪಟೇಲ್ ಅವರನ್ನು ಭೇಟಿಯಾದ ಪಕ್ಷದ ಮುಖಂಡರು, ಹಾಸನ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಬಲಪಡಿಸುವ ಕುರಿತು ಸುದೀರ್ಘವಾಗಿ ಚರ್ಚಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ಪರಿಣಾಮಕಾರಿಯಾಗಿ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯಾಧ್ಯಕ್ಷರು ಮಾರ್ಗದರ್ಶನ ನೀಡಿದರು.ಇದೇ ವೇಳೆ, ಹಿಂದೆ ಜನತಾದಳ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದ ಅರಸೀಕೆರೆಯ ಬಕ್ಕಪ್ಪ ಶಿವಣ್ಣ ಅವರೊಂದಿಗೆ ನಡೆಸಿದ ಹೋರಾಟಗಳು ಹಾಗೂ ಪಕ್ಷ ಸಂಘಟನೆಯ ದಿನಗಳನ್ನು ಮಹಿಮಾ ಪಟೇಲ್ ಸ್ಮರಿಸಿಕೊಂಡರು. ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಎಚ್. ಪಟೇಲ್ ಅವರ ಜನಪರ ಕಾರ್ಯಗಳು ಹಾಗೂ ರಾಜಕೀಯ ಜೀವನದ ನೆನಪುಗಳನ್ನು ಮುಖಂಡರು ಮೆಲುಕು ಹಾಕಿದರು.ಇದಲ್ಲದೆ, ಜನತಾದಳದ ರಾಷ್ಟ್ರೀಯ ನಾಯಕರು ಹಾಗೂ ಕರ್ನಾಟಕ ರಾಜ್ಯದ ಉಸ್ತುವಾರಿ ಮನೀಶ್ ಕುಮಾರ್ ವರ್ಮ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿಸಲಾಯಿತು. ಹಾಸನ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯನ್ನು ಬಲಪಡಿಸಲು ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.