- ಪರಿಶಿಷ್ಟ ಜಾತಿಗೆ ಅಧ್ಯಕ್ಷ ಸ್ಥಾನ, ಸಾಮಾನ್ಯ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ಮೀಸಲು ನಿಗದಿ
ರಾಜ್ಯ ಸರ್ಕಾರ ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷ ಮೀಸಲಾತಿ ಪಟ್ಟಿಯನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ಇದರ ಅನ್ವಯ ಹೊನ್ನಾಳಿ ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಯಾಗಿದೆ.
2018ರಲ್ಲಿ ನಡೆದ ಚುನಾವಣೆಯಲ್ಲಿ ಬಹುಮತ ಪಡೆದಿದ್ದ ಬಿಜೆಪಿ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಎರಡೂವರೆ ವರ್ಷ ಮುಗಿದ ಕೂಡಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನೀಡುವ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಇದೀಗ ನ್ಯಾಯಾಲಯದ ಆದೇಶದಂತೆ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಇದರಂತೆ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ನಿಗದಿಪಡಿಸಿ ಆದೇಶವಾಗಿದೆ.ಏಕೈಕ ಸದಸ್ಯ ಮೈಲಪ್ಪ:
ಇನ್ನು ಪರಿಶಿಷ್ಟ ಪಂಗಡದ ಸದಸ್ಯ ರಾಜೇಂದ್ರ ಇವರನ್ನು ಬಿಟ್ಟರೆ ಇನ್ನುಳಿದರು ಹಿಂದುಳಿದ ಮತ್ತು ಸಾಮಾನ್ಯ ವರ್ಗದ ಸದಸ್ಯರಾಗಿದ್ದಾರೆ. ಮೈಲಪ್ಪ ಅವರಿಗೆ ಪ್ರಸ್ತುತ ಮೀಸಲಾತಿಯಿಂದ ಪುರಸಭೆ ಅಧ್ಯಕ್ಷ ಪಟ್ಟ ಬಹುಪಾಲು ಖಚಿತ ಎನ್ನಲಾಗಿದೆ. ಮೈಲಪ್ಪ ಮೂಲತಃ ಹೊನ್ನಾಳಿಯಲ್ಲಿ ಪತ್ರಬರಹಗಾರರಾಗಿದ್ದರು. ಈ ಹಿಂದೆ ಬಿಜೆಪಿಯಲ್ಲಿದ್ದಾಗ ಪುರಸಭೆ ನಾಮನಿರ್ದೇಶಕ ಸದಸ್ಯರಾಗಿದ್ದರು. ನಗರದ ಆಶ್ರಯ ಕಮಿಟಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
2001ರಲ್ಲಿ ತುಂಗಭದ್ರಾ ಬಡಾವಣೆ ವಾರ್ಡಿನಿಂದ ಕಾಂಗ್ರೆಸ್ ಪಕ್ಷದಿಂದ ಚುನಾವಣೆ ನಿಂತು ಕೇವಲ ಮೂರು ಮತಗಳಿಂದ ಸೋತಿದ್ದರು. ಅನಂತರ 2006ರಲ್ಲಿ ಪತ್ನಿ ನಾಗರತ್ನ ಸ್ಪರ್ಧೆ ಮಾಡಿದ್ದರು. ಆಗಲೂ ಕೇವಲ ಮೂರು ಮತಗಳಿಂದ ಪ್ರತಿಸ್ಪರ್ಧಿ ವಿರುದ್ಧ ಸೋಲು ಕಂಡಿದ್ದರು.ಅನಂತರ ಹತ್ತು ವರ್ಷಗಳ ಕಾಲ ಚುನಾವಣೆಯಿಂದ ದೂರ ಇದ್ದರು. ಪತ್ರ ಬರಹಗಾರರಾಗಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ನಂತರದಲ್ಲಿ ಮೈಲಪ್ಪ 2018ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಅದೇ ವಾರ್ಡಿನಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ, ಬಿಜೆಪಿ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿ ಪುರಸಭಾ ಸದಸ್ಯರಾಗಿ ಆಯ್ಕೆಯಾದರು.
ಸದ್ಯ ಸರ್ಕಾರದ ಹೂಸ ಮೀಸಲಾತಿಯಿಂದಾಗಿ ಪುರಸಭೆ ಸದಸ್ಯ ಮೈಲಪ್ಪ ಇನ್ನು ಕೆಲವೇ ದಿನಗಳಲ್ಲಿ ಪುರಸಭೆ ಅಧ್ಯಕ್ಷರಾಗಲಿದ್ದಾರೆ.- - -
ಬಾಕ್ಸ್ * ಉಪಾಧ್ಯಕ್ಷ ಸ್ಥಾನ ಪಕ್ಷೇತರಕ್ಕೋ, ಬಿಜೆಪಿಗೋ?ಸರ್ಕಾರದ ಆದೇಶದಂತೆ ಪುರಸಭೆ ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇದರ ಪ್ರಕಾರ ಬಿಜೆಪಿಯಲ್ಲಿ ಒಟ್ಟು 4 ಜನ ಮಹಿಳೆಯರಿದ್ದು, ಈ ಪೈಕಿ ರಂಜಿತ ಕೋಂ ಬಿ.ಪಿ.ಚನ್ನಪ್ಪ ಅವರು ಈ ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನುಳಿದ 3 ಮೂವರಾದ ಸವಿತಾ ಬಿ., ಪದ್ಮಾವತಿ ಹಾಗೂ ಸುಮಾ ಎಚ್.ಬಿ, ಇದ್ದಾರೆ. ಪಕ್ಷೇತರ ಸದಸ್ಯೆ ಕೆ.ಎಸ್. ಉಷಾ ಸಹ ಇದ್ದಾರೆ. ಆದರೆ ಸಾಮಾನ್ಯ ಮಹಿಳೆ ಕೋಟಾದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸದಸ್ಯರು ಇಲ್ಲ. ಆದ್ದರಿಂದ ಬಿಜೆಪಿ ಸದಸ್ಯೆಯರು ಸಾಮಾನ್ಯ ಮಹಿಳಾ ಮೀಸಲು ಕೋಟಾದಡಿ ಬರಲಿದ್ದಾರೆ. ಇವರಲ್ಲಿ ಯಾರಿಗೆ ಉಪಾಧ್ಯಕ್ಷರ ಸ್ಥಾನ ದೊರೆಯಲಿದೆ ಎಂಬುದು ಕಾದುನೋಡಬೇಕಿದೆ.- - - -12ಎಚ್.ಎಲ್ಐ1: ಹೊನ್ನಾಳಿ ಪಟ್ಟಣದ ಪುರಸಭೆ ಕಟ್ಟಡ.