ಹೂವಿನಹಡಗಲಿ: ತಾಲೂಕಿನ ಮೈಲಾರದ ಕರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ ವತಿಯಿಂದ ಉಜ್ಜಯನಿ ಗುರುಪೀಠದ ಶ್ರೀಮದ್ ಉಜ್ಜಯಿನಿ ಜಗದ್ಗುರು ಮಹಾ ಸಿಂಹಾಸನ ಪೀಠದ ಜ.ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಕರಿಗೆ ರಾಷ್ಟೀಯ ಮಟ್ಟದ ಮೈಲಾರ ಬಸವಲಿಂಗ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಕ್ರಿಯಾ ಸಮಿತಿ ಅಧ್ಯಕ್ಷ ಪುಟ್ಟಪ್ಪ ತಂಬೂರಿ ಹೇಳಿದರು.
ಶರಣರ ಹೆಸರನ್ನು ಉಳಿಸುವ ಹಾಗೂ ಅವರ ಸರಳ ಜೀವನ ಆದರ್ಶಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ನಮ್ಮ ಕ್ರಿಯಾ ಸಮಿತಿಯು ರಾಜ್ಯದ ವಿವಿಧ ಕ್ಷೇತ್ರಗಳನ್ನು ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ, ತಾಲೂಕು ಮಟ್ಟ ಸೇರಿದಂತೆ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಚಳ್ಳಕೆರೆಯ ಪ್ರಗತಿಪರ ರೈತ ಡಾ.ಆರ್.ಎ. ದಯಾನಂದಮೂರ್ತಿ, ಚಿತ್ರದುರ್ಗ ಹಾಸ್ಯ ಸಾಹಿತಿ ಪಿ.ಜಗನ್ನಾಥ, ಹಾವೇರಿ ರವಿಕಿರಣ ಸೃಜನಶೀಲ ವಿಕಲಚೇತನರ ಸಂಘದ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯ ಮುಷ್ಟಿಗೇರಿ, ಕೊಟ್ಟೂರಿನ ಷಣ್ಮುಖಪ್ಪ ಅಗಡಿ, ಬಸವರಾಜ ಮುಷ್ಟಿಗೇರಿ, ಪ್ರಭು ಹಾವೇರಿ ಉಪಸ್ಥಿತರಿದ್ದರು.