ಅಂಗವಿಕಲರನ್ನು ಮುಖ್ಯವಾಹಿನಿಗೆ ತನ್ನಿ: ಡಾ.ಸರ್ಜಿ

KannadaprabhaNewsNetwork | Published : Nov 19, 2023 1:30 AM

ಸಾರಾಂಶ

ಅಂಗವಿಕಲತೆ ಶಾಪವಲ್ಲ. ಅದನ್ನು ತಿಳುವಳಿಕೆ ಮೂಲಕ ಜನ ಸಮಾನ್ಯರಲ್ಲಿ ಅರಿವು ಮೂಡಿಸಿ ವಿಕಲಚೇತನರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ನಡೆಯಬೇಕಾಗಿದೆ ಎಂದು ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ ಹೇಳಿದರು. ನಗರದ ಸ್ಕೌಟ್ ಭವನದಲ್ಲಿ ಶಿವಮೊಗ್ಗ ರೌಂಡ್ ಟೇಬಲ್ 166 ಹಾಗೂ ಸರ್ಜಿ ಫೌಂಡೇಷನ್ ಶಿವಮೊಗ್ಗ ಇವರ ಸಹಯೋಗದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಕಿಡ್ಸ್ ಫಿಯೆಸ್ಟಾ-2023 (ಮಕ್ಕಳಜಾತ್ರೆ) ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಕ್ತದಾನ, ನೇತ್ರದಾನ ಮಹಾದಾನವಿದ್ದಂತೆ. ಯಾಕೆಂದರೆ ಒಬ್ಬ ವ್ಯಕ್ತಿಯ ಜೀವಕ್ಕೆ ಹೊಸ ಬದುಕನ್ನು ಕೊಟ್ಟ ಭಾಗ್ಯ ದಾನಿಗೆ ಲಭಿಸುತ್ತದೆ ಎಂದರು.

ಶಿವಮೊಗ್ಗ ರೌಂಡ್ ಟೇಬಲ್ 166, ಸರ್ಜಿ ಫೌಂಡೇಷನ್‌ ವತಿಯಿಂದ ಕಿಡ್ಸ್ ಫಿಯೆಸ್ಟಾ-2023

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಂಗವಿಕಲತೆ ಶಾಪವಲ್ಲ. ಅದನ್ನು ತಿಳುವಳಿಕೆ ಮೂಲಕ ಜನ ಸಮಾನ್ಯರಲ್ಲಿ ಅರಿವು ಮೂಡಿಸಿ ವಿಕಲಚೇತನರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ನಡೆಯಬೇಕಾಗಿದೆ ಎಂದು ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ ಹೇಳಿದರು. ನಗರದ ಸ್ಕೌಟ್ ಭವನದಲ್ಲಿ ಶಿವಮೊಗ್ಗ ರೌಂಡ್ ಟೇಬಲ್ 166 ಹಾಗೂ ಸರ್ಜಿ ಫೌಂಡೇಷನ್ ಶಿವಮೊಗ್ಗ ಇವರ ಸಹಯೋಗದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಕಿಡ್ಸ್ ಫಿಯೆಸ್ಟಾ-2023 (ಮಕ್ಕಳಜಾತ್ರೆ) ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಕ್ತದಾನ, ನೇತ್ರದಾನ ಮಹಾದಾನವಿದ್ದಂತೆ. ಯಾಕೆಂದರೆ ಒಬ್ಬ ವ್ಯಕ್ತಿಯ ಜೀವಕ್ಕೆ ಹೊಸ ಬದುಕನ್ನು ಕೊಟ್ಟ ಭಾಗ್ಯ ದಾನಿಗೆ ಲಭಿಸುತ್ತದೆ ಎಂದರು. ಒಬ್ಬ ಮರಣಾನಂತರ ಎರಡು ಕಣ್ಣು ದಾನ ಮಾಡಿದರೆ ನಾಲ್ಕು ಮಂದಿಗೆ ಜೀವನ ಕೊಟ್ಟಂತಾಗುತ್ತದೆ. ರಕ್ತದಾನದಿಂದ ಒಬ್ಬ ವ್ಯಕ್ತಿ ಒಟ್ಟು ಎಂಟು ಮಂದಿಗೆ ಅಂಗಾಂಗಗಳನ್ನು ದಾನ ಮಾಡುವ ಶಕ್ತಿಯನ್ನು ಭಗವಂತ ಕರುಣಿಸಿದ್ದಾನೆ. ಒಂದು ವರ್ಷಕ್ಕೆ ಭಾರತದಲ್ಲಿ 5 ಲಕ್ಷ ಜನರು ಅಂಗಾಂಗಳು ಲಭ್ಯವಾಗದೇ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. 50 ಸಾವಿರ ಜನ ಹೃದಯ ಅಳವಡಿಕೆ, 1 ಲಕ್ಷದ 20 ಸಾವಿರ ಜನಕ್ಕೆ ಕಿಡ್ನಿಯ ಅಳವಡಿಕೆಯ ಅಗತ್ಯವಿದೆ, ಹೀಗೆ ಅಂಗಾಂಗಳನ್ನು ದಾನ ಮಾಡುವ ಅವಕಾಶವನ್ನು ಭಗವಂತ ನಮಗೆ ನೀಡಿರುವುದರಿಂದ ದಾನದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ನಾವು ಸಮಾಜಕ್ಕೆ ಏನನ್ನಾದರೂ ಕೊಡಬೇಕು ಎಂಬ ಮನೋಭಾವ ಇರಬೇಕು. ಕನಸು ಕಾಣುವಾಗ ದೊಡ್ಡ ಕನಸು ಕಾಣಬೇಕು. ಅದು ಬೆಳಗಿನ ಸುಖ ನಿದ್ರೆ ಕೆಡಿಸುವಂತಿರಬೇಕು. ವಿಕಲಚೇತನ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲೇ ಇದೆ ಎಂದು ತಿಳಿಸಿದರು.ವ್ಯಾಲ್ಯೂ ಪ್ರಾಡಕ್ಟ್ಸ್ ಪ್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀನಿವಾಸ ಮೂರ್ತಿ ಮಾತನಾಡಿ, ಭಗವಂತನ ಕೃಪೆ ಇದ್ದರೆ ಮಾತ್ರ ಇಂತಹ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯ. ಇದು ಮಾನವೀಯ ಕಳಕಳಿಗೆ ಸಾಕ್ಷಿಯಾಗಿದೆ, ಇದರ ಪುಣ್ಯ ಆಯೋಜಕರಿಗೆ ಲಭಿಸುತ್ತದೆ. ಎಷ್ಟೇ ಸಾಧನೆ ಮಾಡಿದರೂ, ಎಷ್ಟೇ ಗಳಿಸಿದರೂ ಇಂತಹ ಕಾರ್ಯಗಳಿಂಧ ಮಾತ್ರ ಆತ್ಮ ಸಂತೃಪ್ತಿ ಸಿಗುತ್ತದೆ ಎಂದರು.ಏಷ್ಯನ್‌ ಪ್ಯಾರಾ ಒಲಿಂಪಿಕ್ ಕಂಚಿನ ಪದಕ ವಿಜೇತೆ ವೃತಿ ಜೈನ್‌, ಏಷ್ಯನ್‌ ಪ್ಯಾರಾ ಒಲಿಂಪಿಕ್‌ ಕಂಚಿನ ಪದಕ ವಿಜೇತರಾದ ಕಿಶನ್‌ ಗಂಗೊಳ್ಳಿ ಅವರಿಗೆ ರೌಂಡ್‌ ಟೇಬಲ್‌ ಹಾಗೂ ಸರ್ಜಿ ಫೌಂಡೇಶನ್‌ ವತಿಯಿಂದ ನೀವು ನಮ್ಮ ಹೆಮ್ಮೆ ಸ್ಮರಣಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ನೂರಾರು ಜನ‌ ನೇತ್ರದಾನ ಮಾಡುವ ಬಗ್ಗೆ ಪ್ರತಿಜ್ಞೆ ಮಾಡಿದರು. ಜಿಲ್ಲಾ ಸ್ಕೌಟ್‌ ಭವನದ ಅಧ್ಯಕ್ಷರಾದ ರಮೇಶ್‌ ಶಾಸ್ತ್ರಿ, ಆರ್‌ಟಿಐ ಏರಿಯಾ 13- ಚೇರ್ಮನ್‌ ದೇವಾನಂದ್‌, ಆರ್‌ಟಿಐ, ಏರಿಯಾ -13, ಸ್ಷೆಷಲ್‌ ಈವೆಂಟ್ಸ್ ಕನ್ವೀನರ್‌ ಅನಿಲ್‌ರಾಜ್‌, ಆರ್‌ಟಿಐ, ಏರಿಯಾ -13 ಎಲ್‌ಎಂಎಫ್‌ ಶುಶ್ರೂತ್‌, ಆರ್‌ಟಿಐ, ಏರಿಯಾ 13, ಎಸ್‌ಆರ್‌ಟಿ 166, ಚೇರ್ಮನ್‌ ಎಲ್‌ಎಂಎಫ್‌ . ವಿಶ್ವಾಸ್‌ ಕಾಮತ್, ಎಲ್‌ಎಂಎಫ್‌ .ಈಶ್ವರ್‌ ಸರ್ಜಿ, ಎಲ್‌ಎಂಎಫ್‌ . ಕಮಲೇಶ್‌, ಎಲ್‌ಎಂಎಫ್‌ ಋತ್ವಿಕ್‌ ಭಾಗವಹಿಸಿದ್ದರು.------------------------ಜನಾಕರ್ಷಿಸಿದ ವಿಶೇಷಚೇತನರ ಕಿಡ್ಸ್ ಫಿಯೆಸ್ಟಾ ರೌಂಡ್‌ ಟೇಬಲ್‌ ಹಾಗೂ ಸರ್ಜಿ ಫೌಂಡೇಶನ್‌ ವತಿಯಿಂದ ನಗರದ ಸ್ಕೌಟ್‌ ಭವನದಲ್ಲಿ ಶನಿವಾರ ಬುದ್ಧಿಮಾಂದ್ಯರು ಹಾಗೂ ವಿಶೇಷಚೇತನರ ಕಿಡ್ಸ್ ಫಿಯೆಸ್ಟಾ ಕಾರ್ಯಕ್ರಮವು ಜನಾಕರ್ಷಿಸಿತು. ಶಾರದಾ ಅಂಧರ ವಿಕಾಸ ಕೇಂದ್ರ, ಸರ್ಜಿ ಫೌಂಡೇಷನ್‌, ತಾಯಿಮನೆ, ತರಂಗ ಕಿವುಡ ಮತ್ತು ಮೂಗರ ಶಾಲೆ, ಮಾಧವ ನೆಲೆ, ಹ್ಯಾಪಿ ಹೋಂ ಹಾಗೂ ಮೇರಿ ಇಮ್ಯಾಕ್ಯುಲೇಟ್‌ನ 170 ಕ್ಕೂ ಹೆಚ್ಚು ಮಕ್ಕಳು ಬುದ್ಧಿಮಾಂಧ್ಯ ಹಾಗೂ ವಿಶೇಷಚೇತನ ಮಕ್ಕಳು ಹಾಡು, ಡ್ಯಾನ್ಸ್, ಟ್ಯಾಟ್ಯೂ, ಪೇಸ್‌ ಪೇಯಿಂಟಿಂಗ್‌, ಜಂಪಿಂಗ್‌ ಬೆಡ್‌, ಕಾಟನ್‌ ಕ್ಯಾಂಡಿ, ಚಾಕೋಲೇಟ್‌ ಫೌಂಟೆನ್‌ ಹೀಗೆ ವಿವಿಧ ಆಟೋಟಗಳಲ್ಲಿ ಪಾಲ್ಗೊಂಡು ಮನರಂಜನೆ ನೀಡಿದರಲ್ಲದೇ ವಿವಿಧ ತಿನಿಸುಗಳನ್ನು ಸವಿದು ಸಂತಸಪಟ್ಟರು. ಅಮೋಘ ನೃತ್ಯ ಮಾಡುವ ಮೂಲಕ ನೆರೆದವರ ಮನ ಗೆದ್ದರು. --------------------------

Share this article