ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಿ: ವೈ.ರಾಜರಾಮ್‌

KannadaprabhaNewsNetwork |  
Published : Jun 04, 2024, 12:31 AM IST
ಪೋಟೋ೨ಸಿಎಲ್‌ಕೆ೦೧ ಚಳ್ಳಕೆರೆ ತಾಲ್ಲೂಕಿನ ನರಹರಿನಗರದ ಸದ್ಗುರು ನರಹರಿ ಪೀಠದಲ್ಲಿ ನಡೆದ ಕಣ್ಣಿನ ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡ ಜನರು. | Kannada Prabha

ಸಾರಾಂಶ

ದೇಹದ ಎಲ್ಲಾ ಪ್ರಮುಖ ಅಂಗಗಳಲ್ಲಿ ಅತಿಮುಖ್ಯವಾದದ್ದು ಕಣ್ಣು. ಕಣ್ಣುಗಳು ಚೆನ್ನಾಗಿದ್ದರೆ ಮಾತ್ರ ಎಲ್ಲವನ್ನೂ ಅರಿಯಲು ಸಾಧ್ಯ ಎಂದು ಸದ್ಗುರು ನರಹರಿ ಪೀಠದ ವೈ.ರಾಜರಾಮ್‌ ಸ್ವಾಮೀಜಿ ಹೇಳಿದರು. ನೇತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಪ್ರತಿಯೊಬ್ಬ ವ್ಯಕ್ತಿಯ ದೃಷ್ಟಿ ಸರಿಯಾಗಿದ್ದರೆ ಅವನ ದೃಷ್ಟಿಕೋನವೂ ಸಹ ಸರಿಯಾಗಿರುತ್ತದೆ. ದೇಹದ ಎಲ್ಲಾ ಪ್ರಮುಖ ಅಂಗಗಳಲ್ಲಿ ಅತಿಮುಖ್ಯವಾಗಿ ನಮಗೆ ಜ್ಞಾನದ ಸ್ಪರ್ಶ ನೀಡುವುದು ಕಣ್ಣು ಮಾತ್ರ. ಕಣ್ಣುಗಳು ಚೆನ್ನಾಗಿದ್ದರೆ ಮಾತ್ರ ಎಲ್ಲವನ್ನೂ ಅರಿಯಲು ಸಾಧ್ಯ ಎಂದು ಸದ್ಗುರು ನರಹರಿ ಪೀಠದ ವೈ.ರಾಜರಾಮ್‌ ಸ್ವಾಮೀಜಿ ಹೇಳಿದರು.

ನಗರ ವ್ಯಾಪ್ತಿಯ ನರಹರಿನಗರದ ಸದ್ಗುರು ನರಹರಿ ಪೀಠದ ವೈ.ರಾಜರಾಮ್ ಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆದ ಉಚಿತ ನೇತ್ರ ಚಿಕಿತ್ಸಾ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊಂಡ್ಲಹಳ್ಳಿಯ ಎಂ.ಆರ್‌ಟಿ ಕಣ್ಣಿನ ಆಸ್ಪತ್ರೆ ವೈದ್ಯರ ತಂಡ ಇಲ್ಲಿಗೆ ಆಗಮಿಸಿ ಉಚಿತ ನೇತ್ರಾ ಚಿಕಿತ್ಸೆ ನಡೆಸಿರುವುದು ಸಂತಸ ತಂದಿದೆ. ಇಂದಿನ ಈ ಶಿಬಿರದಲ್ಲಿ ಒಟ್ಟು ೨೬೭ ಜನ ತಪಾಸಣೆಗೆ ಒಳಗಾಗಿದ್ದು ಆ ಪೈಕಿ ೫೧ ಜನರು ಶಸ್ತ್ರ ಚಿಕಿತ್ಸೆಗೆ ಆರ್ಹರಿದ್ದಾರೆ. ಭಕ್ತರ ಸಹಕಾರದಿಂದ ಇಂತಹ ಆರೋಗ್ಯ ಜಾಗೃತಿ ಶಿಬಿರ ನಡೆಸಲು ಹೆಮ್ಮೆ ಎನ್ನಿಸುತ್ತಿದೆ ಎಂದರು.

ನೇತ್ರತಜ್ಞ ಡಾ.ಎನ್.ವಿಜಯ್ ಮಾತನಾಡಿ, ನಮ್ಮ ತಂದೆ ದಿವಂಗತ ನೇತ್ರತಜ್ಞ ಡಾ.ನಾಗರಾಜರವರು ಇಂತಹ ಹಲವಾರು ಉಚಿತ ಶಿಬಿರ ನಡೆಸಿ ದೃಷ್ಟಿಯಿಂದ ವಂಚಿತರಾದವರಿಗೆ ಬೆಳಕನ್ನು ಕಾಣುವ ಸೌಭಾಗ್ಯ ಒದಗಿಸಿದ್ದಾರೆ. ನಾವು ಸಹ ಅವರ ಹಾದಿಯಲ್ಲಿ ನಡೆಯುತ್ತಿದ್ದೇವೆ. ಕಣ್ಣು ಅತ್ಯಂತ ಸೂಕ್ಷ್ಮ ಅಂಗವಾಗಿದ್ದು ಇದನ್ನು ಪ್ರತಿಯೊಬ್ಬರು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕಿದೆ. ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಕಣ್ಣಿನ ತೊಂದರೆಯಾದರೆ ಕೂಡಲೇ ಹತ್ತಿರದ ನೇತ್ರತಜ್ಞರನ್ನು ಸಂಪರ್ಕಿಸಬೇಕು. ಯಾರೂ ಸಹ ಕಣ್ಣಿನ ತೊಂದರೆಯಾದರೆ ಉಂಟಾದರೆ ಉದಾಸೀನ ವಹಿಸಬಾರದು ಎಂದರು.

ಸೀಬಿರಕ್ಎಕ ಗ್ರಾಮಾಂತರ ಪ್ರದೇಶವೂ ಸೇರಿದಂತೆ ಎಲ್ಲೆಡೆಯಿಂದ ನೂರಾರು ಕಣ್ಣಿನ ಸಮಸ್ಯೆ ಹೊಂದಿರುವವರು ಆಗಮಿಸಿ ತಪಾಸಣೆಗೆ ಒಳಗಾದರು.

ವೆಂಕಟಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ.ಸಂಜೀವಮೂರ್ತಿ, ಎಂ.ರಾಮಚಂದ್ರಪ್ಪ, ಡಾ.ನಾರಾಯಣಮೂರ್ತಿ, ಎಂ.ಗೀತಾವಿಜಯ್, ರವಿಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ
‘ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರು ಕಷ್ಟಕ್ಕೆ ಸಿಲುಕ್ತಾರೆ’